ಕಲಬುರಗಿ(ಮೇ.14): ಮುಂಬೈನಿಂದ ಬಸ್‌ ಮೂಲಕ ಕಲಬುರಗಿಗೆ ಬಂದಿರುವ 60 ಕಾರ್ಮಿಕರು ತಮ್ಮನ್ನು ಮತ್ತೆ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಬಸ್ಸಿನಿಂದ ಇಳಿದು ಮನೆಗೋಗುವ ಕಾತರದಲ್ಲಿದ್ದವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್‌ ಎಂದು ಅಧಿಕಾರಿಗಳು ಆದೇಶಿಸುತ್ತಿದ್ದಂತೆಯೇ ಕೆರಳಿದ ಕಾರ್ಮಿಕರು ನಮ್ಮನ್ನು ಮನೆಗೆ ಕಳುಹಿಸಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಹೊರತು ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಇವರನ್ನೆಲ್ಲ ಸ್ಕ್ರೀನಿಂಗ್‌ ಮಾಡಿ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸುವ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪಿಸಿದ ಕಾರ್ಮಿಕರು, ಸಂಸದ ಡಾ.ಉಮೇಶ ಜಾಧವ್‌ ವಿರುದ್ಧ ಕೋಪತಾಪ ಹೊರಹಾಕಿದರು. ವಾಪಸ್‌ ಬನ್ನಿರೆಂದು ನಮ್ಮನ್ನ ಮುಂಬೈನಿಂದ ಕರೆಯಿಸಿ ಡಾ.ಜಾಧವ್‌ ನಮಗೆ ಹೀಗೆ ಕ್ವಾರಂಟೈನ್‌ ಮಾಡಲು ಹೊರಟಿದ್ದಾರೆ. ಹೀಗೆ ಮಾಡೋದಿದ್ದರೆ ನಾವು ವಾಪಸ್‌ ಬಾರದೆ ಅಲ್ಲೇ ಇರುತ್ತಿದ್ದೇವು ಎಂದು ಕಾರ್ಮಿಕರು ಕೋಪದಲ್ಲಿ ಹೇಳಿದ್ದಾರೆ.

ವೃದ್ಧ ಸಾವು; ಕೊರೊನಾ ಹಾಟ್‌ಸ್ಪಾಟ್ ಆಯ್ತು ಕಲಬುರಗಿ

ಕ್ವಾರಂಟೈನ್‌ಗೆ ಮನ ಒಲಿಸಲು ಅಧಿಕಾರಿಗಳು ಅನೇಕ ಬಾರಿ ಯತ್ನಿಸಿದರು ಅವರ್ಯಾರ ಮಾತಿಗೂ ಕಾರ್ಮಿಕರು ಬಗ್ಲಿಲ್ಲ. ಈಗಾಗಲೇ ಮುಂಬೈನಿಂದ ಜಿಲ್ಲೆಗೆ ಬಂದಿರುವ 1,500 ರಷ್ಟು ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿದೆ. ವಲಸೆ ಕಾರ್ಮಿಕರ ಆಗಮನ ಹೆಚ್ಚುತ್ತಿರೋದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.