Asianet Suvarna News Asianet Suvarna News

ಈಗ ಬಿಜೆಪಿಯಲ್ಲೇ ಶುರುವಾಗಿದೆ ಭಾರೀ ಪೈಪೋಟಿ

ರಾಜ್ಯದಲ್ಲಿ ಉಪ ಚುನಾವಣೆಯ ಈ  ಹೊತ್ತಿನಲ್ಲಿ ಬಿಜೆಪಿಯಲ್ಲಿಯೇ ಪೈಪೋಟಿ ಆರಂಭವಾಗಿದೆ. ಏನಿದು ಪೈಪೋಟಿ

Competition For Bhatkal Taluk BJP President Post
Author
Bengaluru, First Published Dec 9, 2019, 12:43 PM IST

ಭಟ್ಕಳ [ಡಿ.09]: ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಹುದ್ದೆಯ ಅವಧಿ ಈಗಾಗಲೇ ಮುಗಿದಿದ್ದು, ಈ ಸಲ ಅಧ್ಯಕ್ಷ ಹುದ್ದೆಗೆ ಭಾರಿ ಪೈಪೋಟಿ ಉಂಟಾಗಿದ್ದು, ಮಹಿಳಾ ಮುಖಂಡರಾದ ಶಿವಾನಿ ಶಾಂತ ರಾಮ ಪ್ರಬಲ ಆಕಾಂಕ್ಷಿಗಲ್ಲಿ ಒಬ್ಬರಾಗಿ ದ್ದಾರೆ.

ಈಗಾಗಲೇ ವಿವಿಧ ತಾಲೂಕಿನಲ್ಲಿ ಅಧ್ಯಕ್ಷ ಹುದ್ದೆ ಭರ್ತಿ ಮಾಡಲಾಗಿದ್ದು, ಭಟ್ಕಳ ಅಧ್ಯಕ್ಷರ ಗಾದಿಗೆ ಆಕಾಂಕ್ಷಿಗಳ ಪಟ್ಟಿ ಮುಖಂಡರಿಗೆ ರವಾನಿಸಲಾಗಿದೆ. ಭಟ್ಕಳದಲ್ಲಿ ಹಾಲಿ ಅಧ್ಯಕ್ಷ ರಾಜೇಶ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ದೇವಡಿಗ, ರವಿ ನಾಯ್ಕ ಜಾಲಿ, ಶಿವಾನಿ ಶಾಂತರಾಮ ಭಟ್ಕಳ ಅವರು ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. 

ಕಬ್ಬಿನ ಹೊಲದಲ್ಲಿ ಕಮಲ: ಕೆ.ಆರ್.ಪೇಟೆ ರಣತಂತ್ರ ಬಿಚ್ಚಿಟ್ಟ ವಿಜಯೇಂದ್ರ..

ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜೇಶ ನಾಯ್ಕರಿಗೆ ಮತ್ತೊಮ್ಮೆ ಅಧ್ಯಕ್ಷ ಗಾದಿಗೇರಲು ಪಕ್ಷದ ನಿಯಮ ಅಡ್ಡ ಬಂದರೆ, ಮಂಡಳಾಧ್ಯಕ್ಷರಾಗಲು 50 ವರ್ಷದೊಳಗಿರಬೇಕೆಂಬ ನಿಯಮ ಕೃಷ್ಣ ನಾಯ್ಕರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಾಯ ದೇವಾಡಿಗ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಧ್ಯಕ್ಷ ಗಾದಿಗೆ ಈ ಸಲ ಪ್ರಬಲಾಕಾಂಕ್ಷಿಯಾಗಿದ್ದಾರೆ. ಯುವ ಮುಖಂಡ ರವಿ ನಾಯ್ಕ ಜಾಲಿ ಅವರೂ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಕುತೂಹಲದ ವಿಚಾರವೆಂದರೆ ಈ ಸಲ ಮಂಡಳಾಧ್ಯಕ್ಷ ಹುದ್ದೆಗೆ ಮಹಿಳಾ ಮುಖಂಡರಾದ ಮುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಉದ್ಯಮಿ ಶಿವಾನಿ ಶಾಂತರಾಮ ಹೆಸರು ಬಲವಾಗಿ ಕೇಳಿ ಬಂದಿದೆ. 

ಶಿವಾನಿ ಶಾಂತರಾಮ ಸಂಘಟನಾ ಚಾತುರ್ಯ ಹೊಂದಿದ್ದು, ಕಳೆದ ಎಮ್ಮೆಲ್ಲೆ ಚುನಾವಣೆಯಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಬರುವುದರಿಂದ ಮಂಡಳಾ ಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಇರುವು ದರಿಂದ ಕ್ರಿಯಾಶೀಲ ಮತ್ತು ಪ್ರಬಲ ರನ್ನೇ ಆಯ್ಕೆ ಮಾಡುವ ಎಲ್ಲ ಸಾಧ್ಯತೆ ಇದೆ. ನೂತನ ಅಧ್ಯಕ್ಷರ ಆಯ್ಕೆ ವೇಳೆ ಸ್ಥಳೀಯ ಶಾಸಕರು ಮತ್ತು ಸಂಸದರ ಅಭಿಪ್ರಾಯವೂ ಮುಖ್ಯವಾ ಗಿರುವುದ ರಿಂದ ಯಾರು ನೂತನ ಮಂಡಳಾಧ್ಯಕ್ಷ ರಾಗುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

Follow Us:
Download App:
  • android
  • ios