ವರದಿ : ಕಾಗತಿ ನಾಗರಾಜಪ್ಪ 

 ಚಿಕ್ಕಬಳ್ಳಾಪುರ (ಅ.25) :  ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಥಳೀಯ ನಗರಸಭೆ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌ ಚುನಾವಣಾ ವೇಳಾ ಪಟ್ಟಿಪ್ರಕಟಿಸಿದ ಬೆನ್ನಲೇ ಅಧಿಕಾರದ ಗದ್ದುಗೆ ಹಿಡಿಯಲು ಜಿಲ್ಲೆಯ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ಪೈಪೋಟಿ ಶುರುವಾಗಿದ್ದು ಯಾವ ಪಕ್ಷ ಎಲ್ಲಿ ಅಧಿಕಾರ ಹಿಡಿಯುತ್ತದೆ ಎಂಬುದ ಸಾಕಷ್ಟುಕುತೂಹಲ ಕೆರಳಿಸಿದೆ.

ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ ಜಿಲ್ಲೆಯ ಯಾವ ನಗರಸಭೆ, ಪುರಸಭೆಯಲ್ಲಿಯೂ ಯಾವ ಪಕ್ಷಕ್ಕೂ ಅಧಿಕಾರ ಹಿಡಿಯುವಷ್ಟುಸ್ಪಷ್ಟಬಹುಮತ ಇಲ್ಲದ ಕಾರಣ ಸದಸ್ಯರ ಕುದುರೆ ವ್ಯಾಪಾರ ಅಥವಾ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭಗೊಳ್ಳಲಿದ್ದು ಪಕ್ಷಗಳಿಂದ ಆಯ್ಕೆಗೊಂಡಿರುವ ಸದಸ್ಯರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಈಗ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.

ಪಕ್ಷೇತರರೇ ನಿರ್ಣಾಯಕ

ಜಿಲ್ಲೆಯ ಗೌರಿಬಿದನೂರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು 1 ಸ್ಥಾನದ ಕೊರತೆ ಇದ್ದು ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಅದೇ ರೀತಿ ಚಿಂತಾಮಣಿಯಲ್ಲಿ ಜೆಡಿಎಸ್‌ ಹಾಗು ಸುಧಾಕರ್‌ ಬಣ ತಲಾ 14 ಮಂದಿ ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್‌ ಹಾಗೂ ಪಕ್ಷೇತರರ ಬೆಂಬಲ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

ಬಿಎಸ್‌ವೈ ವಿರುದ್ಧದ ಯತ್ನಾಳ್ ಹೇಳಿಕೆ‌ ಹಿಂದೆ ಮೋದಿ, ಶಾ : ಹೊಸ ಬಾಂಬ್ .

ಅದೇ ರೀತಿ ಶಿಡ್ಲಘಟ್ಟನಗರಸಭೆಯಲ್ಲಿಯೂ ಪಕ್ಷೇತರರ ಬೆಂಬಲ ಕಾಂಗ್ರೆಸ್‌, ಜೆಡಿಎಸ್‌ಗೆ ಅನಿರ್ವಾಯವಾಗಿದ್ದು ಪಕ್ಷೇತರರ ಯಾರಿಗೆ ಜೈ ಅಂದರೆ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈಗಾಗಲೇ ಮೀಸಲಾತಿ ಬಂದಿರುವ ಅಭ್ಯರ್ಥಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ಕೂತಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದು ಸದಸ್ಯರ ಒಲೈಕೆಯಲ್ಲಿ ತೊಡಗಿದ್ದಾರೆ.

'ಸಿಎಂ ಕುರ್ಚಿಗಾಗಿ ನಾಚಿಕೆಗೆಟ್ಟವರಂತೆ ವರ್ತಿಸುತ್ತಿರುವ ಕಾಂಗ್ರೆಸ್ಸಿಗರು' .

ಪಕ್ಷಗಳ ಸದಸ್ಯರ ಜೊತೆಗೆ ಪಕ್ಷೇತರರನ್ನು ತಮ್ಮತ್ತು ಒಲಿಸಿಕೊಳ್ಳಲು ವಿವಿಧ ರಾಜಕೀಯ ತಂತ್ರ, ಪ್ರತಿತಂತ್ರಗಳನ್ನು ಮಾಡುತ್ತಿದ್ದು ಜಿಲ್ಲೆಯ ಪೈಕಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಾಕಷ್ಟುರಾಜಕೀಯ ಆಟೋಟಗಳಿಗೆ ಸಾಕ್ಷಿಯಾಗಲಿದ್ದು ಕೇವಲ 9 ಸದಸ್ಯರನ್ನು ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯಲು ಯಾವ ರೀತಿಯ ತಂತ್ರ ಅನುಸರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರೆಸಾರ್ಟ್‌ಗಳಿಗೆ ತೆರಳಿದ ರಾಜಕೀಯ ಪಕ್ಷಗಳ ಸದಸ್ಯರು!

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಕಾರಿಗಳು ವೇಳಾಪಟ್ಟಿಪ್ರಕಟಿಸುತ್ತಿದ್ದಂತೆ ಕುದರೆ ವ್ಯಾಪಾರ ಸೇರಿದಂತೆ ಪಕ್ಷಾಂತರ ಪವರ್ತ ತಪ್ಪಿಸಿಕೊಳ್ಳಲು ಜಿಲ್ಲೆಯ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸದಸ್ಯರನ್ನು ನಿಗೂಢ ಸ್ಥಳಗಳಿಗೆ ಪ್ರವಾಸ ಕೈಗೊಂಡು ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟಿದ್ದಾರೆಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹಮತ ಇದ್ದರೂ ಮೂವರು ಕಾಂಗ್ರೆಸ್‌ ಸದಸ್ಯರು ಬಿಜೆಪಿ ಪಾಳೆಯಕ್ಕೆ ಜಿಗಿದಿದ್ದು ಅವರನ್ನು ಮೈಸೂರು ಸಮೀಪ ರೆಸಾರ್ಟ್‌ ಒಂದರಲ್ಲಿ ಇರಿಸಲಾಗಿದೆಯೆಂಬ ಮಾತು ಕೇಳಿ ಬರುತ್ತಿದೆ. ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಬಾಗೇಪಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಯಾರಿಗೂ ಅಧಿಕಾರ ಹಿಡಿಯುವಷ್ಟಸ್ಪಷ್ಪ ಬಹುಮತ ಇಲ್ಲವಾಗಿದೆ.

ಚುನಾವಣೆ ಎಲ್ಲಲ್ಲಿ ಯಾವಾಗ?

ಚಿಂತಾಮಣಿ ನಗರಸಭೆ ನ.01

ಚಿಕ್ಕಬಳ್ಳಾಪುರ ನಗರಸಭೆ ಅ.30

ಗೌರಿಬಿದನೂರು ನಗರಸಭೆ ನ.01

ಶಿಡ್ಲಘಟ್ಟನಗರಸಭೆ ಅ.31

ಬಾಗೇಪಲ್ಲಿ ಪುರಸಭೆ:ನ.06