ಬಿಎಸ್‌ವೈ ವಿರುದ್ಧದ ಯತ್ನಾಳ್ ಹೇಳಿಕೆ ಹಿಂದೆ ಮೋದಿ, ಶಾ : ಹೊಸ ಬಾಂಬ್
ಬಿ ಎಸ್ ಯಡಿಯೂರಪ್ಪ ವಿರುದ್ಧದ ಹೇಳಿಕೆ ಹಿಂದೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಲಾಗಿದೆ
ಕೋಲಾರ (ಅ.25): ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಹೋಗಿರುವವರು ಸಚಿವರಾಗಿದ್ದಾರೆ. ಅದರೆ ಅವರು ಸಚಿವ ಸ್ಥಾನದಿಂದ ಇಳಿದ ಕೂಡಲೇ ಮರಳಿ ಗೂಡಿಗೆ ಎಂಬಂತೆ ತಮ್ಮ ಮೂಲ ಪಕ್ಷಗಳಿಗೆ ಹಿಂದಿರುಗಲಿದ್ದಾರೆ ಎಂದು ಭವಿಷ್ಯ ನುಡಿದರು. ಈ ಸುಳಿವು ಬಸವರಾಜ ಪಾಟೀಲ್ ಯತ್ನಳ್‌ಗೆ ದೊರೆತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯತೆ ನೀಡ ಬೇಕೆಂಬ ಬೇಡಿಕೆ ಪ್ರಸ್ತಾಪವನ್ನು ಇಟ್ಟಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿಗಳ ಬದಲಾವಣೆ ಬಗ್ಗೆ ಯತ್ನಾಳ್ ಮಾತನಾಡಿರುವುದು ಅಂತರಿಕ ವಿಚಾರವಾಗಿದೆ. ಅವರ ಈ ಮಾತು ಕೇಂದ್ರ ಸರ್ಕಾರದ ಮುಖಂಡರ ಬೆಂಬಲವಿಲ್ಲದೆ ಬರುವುದಿಲ್ಲ.ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಲವಿಲ್ಲದೆ ಯತ್ನಾಳ್ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಅವರ ವಿರುದ್ಧ ರಾಜ್ಯ ಬಿಜೆಪಿಗೆ ಶಿಸ್ತಿನ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಜೊತೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ...
ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಅನ್ಯಾಯವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ವಿಭಜನೆ ಕೊಗು ಬಹುದಿನಗಳಿಂದ ಕೇಳಿ ಬರುತ್ತಿದೆ. ನಾನು ಉತ್ತರ ಕರ್ನಾಟಕದವರಿಗೆ ಪ್ರಾತಿನಿಧ್ಯತೆಗೆ ಒತ್ತಾಯಿಸುತ್ತೇನೆ, ಅದರೆ ಪ್ರತ್ಯೇಕತೆಗೆ ವಿರೋಧಿಸುತ್ತೇನೆ. ನಮ್ಮ ರಾಜ್ಯ ಅಖಂಡ ಕರ್ನಾಟಕವಾಗಿ ಉಳಿಯಬೇಕೆಂದು ಬಯಸುತ್ತೇನೆ ಎಂದು ಸ್ವಷ್ಟಪಡಿಸಿದರು.