ಯಾದಗಿರಿ(ಡಿ.30):ರೈಲಿನಲ್ಲಿ ಸೀಟ್‌ಗಾಗಿ ಕಿರಿಕ್ ತೆಗೆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಹಪ್ರಯಾಣಿಕರೇ ಚಪ್ಪಲಿಯಿಂದ ಮನಬಂದಂತೆ ಥಳಿಸಿದ ಘಟನೆ ಯಾದಗಿರಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ರೈಲಿನಲ್ಲಿ ನಡೆದಿದೆ. 

ಜನರಲ್ ಬೋಗಿಯಲ್ಲಿ ಫುಲ್ ಸೀಟ್‌ನಲ್ಲಿ ಅನಾಮಧೇಯ ವ್ಯಕ್ತಿ ಮಲಗಿದ್ದ, ಇದನ್ನ ಪ್ರಶ್ನಿಸಿದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅನಾಮಧೇಯ ವ್ಯಕ್ತಿ ಹಿಂದಿ ಭಾಷೆಯಲ್ಲಿ ‌ಸಹ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ ಬೇಸತ್ತ ಸಹಪ್ರಯಾಣಿಕರು ವ್ಯಕ್ತಿಗೆ ಧರ್ಮದೇಟು ನೀಡಿದ್ದಾರೆ. ಸಹ ಪ್ರಯಾಣಿಕರು ಮನಬಂದಂತೆ ಥಳಿಸುತ್ತಿದ್ದಂತೆ ಬೆದರಿದ  ಅನಾಮಧೇಯ ವ್ಯಕ್ತಿ ಚಚ್ಚಿಕೊಂಡು ವಿಚಿತ್ರವಾಗಿ ರಂಪಾಟ ಮಾಡಿದ್ದಾನೆ. ಪ್ರಯಾಣಿಕರು ಗೂಸಾ ನೀಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ, ಈ ವ್ಯಕ್ತಿಯ ಹೆಸರು ಮಾತ್ರ ತಿಳಿದು ಬಂದಿಲ್ಲ.