ಜೈಲಲ್ಲಿ ವಿನಯ್ ಕುಲಕರ್ಣಿಗೆ ಸಾಮಾನ್ಯ ಕೈದಿಯ ಸೌಲಭ್ಯ
ಸೆಲ್‌ನಲ್ಲಿ ಟಿವಿ ಸೇರಿದಂತೆ ಯಾವುದೇ ಮತ್ತಿತರ ಸೌಲಭ್ಯಗಳಿಲ್ಲ| ಒಂದು ಲೋಟ, ಪ್ಲೇಟ್, ಹಾಸಿಗೆ ಮತ್ತು ದಿಂಬು ಮಾತ್ರ ನೀಡಲಾಗಿದೆ| ಊಟ ತಿರಸ್ಕರಿಸಿ ರಾತ್ರಿಯಿಡಿ ಮಲಗದ ಕುಲಕರ್ಣಿ| ಬೆಳಗ್ಗೆ 7.30ಕ್ಕೆ ಉಪಹಾರ ಸೇವಿಸಿ ಪತ್ರಿಕೆಗಳನ್ನು ಓದಿದ ವಿನಯ್|
ಬೆಳಗಾವಿ(ನ.11): ಕೊಲೆ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಎರಡನೇ ಬಾರಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಜೈಲಿನ ರೆಡ್ ಝೋನ್ ಸೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಸೆಲ್‌ನಲ್ಲಿ ಟಿವಿ ಸೇರಿದಂತೆ ಯಾವುದೇ ಮತ್ತಿತರ ಸೌಲಭ್ಯಗಳಿಲ್ಲ. ಒಂದು ಲೋಟ, ಪ್ಲೇಟ್, ಹಾಸಿಗೆ ಮತ್ತು ದಿಂಬು ಮಾತ್ರ ನೀಡಲಾಗಿದೆ. ಜೈಲಿಗೆ ಹಸ್ತಾಂತರಗೊಂಡ ಮೊದಲ ದಿನವೇ ಸಂಜೆ 4 ಗಂಟೆಗೆ ಸಿಬ್ಬಂದಿ ರಾತ್ರಿ ಊಟವನ್ನು ನೀಡಿದ್ದರು. ಆದರೆ, ಅದನ್ನು ತಿರಸ್ಕರಿಸಿದ್ದ ಕುಲಕರ್ಣಿ ಅವರು ರಾತ್ರಿಯಿಡಿ ಮಲಗಲಿಲ್ಲ. ಬೆಳಗ್ಗೆ 7.30ಕ್ಕೆ ಉಪಹಾರವಾಗಿ ನೀಡಿದ ಚಿತ್ರಾನ್ನ ಸೇವಿಸಿದ್ದಾರೆ. ಪತ್ರಿಕೆಗಳನ್ನು ಓದಿದ್ದಾರೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ: ಸಿಬಿಐನಿಂದ ಇಬ್ಬರು ಕುಲಕರ್ಣಿ ಆಪ್ತರ ವಿಚಾರಣೆ
ಸಿಬ್ಬಂದಿ ಜೊತೆಗೆ ಸರಿಯಾಗಿ ಮಾತನಾಡಿಲ್ಲವಂತೆ. ಬೆಳಗ್ಗೆ 10.30 ಗಂಟೆಗೆ ಮಧ್ಯಾಹ್ನದ ಊಟಕ್ಕೆ ಚಪಾತಿ, ಪಲ್ಯ , ರೈಸ್, ಸಾಂಬಾರ್ ನೀಡಲಾಗಿತ್ತು. ಆದರೆ ಅದನ್ನು ತಿರಸ್ಕರಿಸಿರುವ ವಿನಯ ಪಟ್ಟ ಹಿಡಿದು ಹೊರಗಿನಿಂದ ಊಟ ತರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.