ಧಾರವಾಡ(ನ.11): ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಹಿಂಡಲಗಾ ಜೈಲು ಸೇರಿಸಿರುವ ಸಿಬಿಐ ಅಧಿಕಾರಿಗಳು, ಇದೀಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ರಾಕೇಶ್‌ ರಂಜನ್‌ ನೇತೃತ್ವದ ಸಿಬಿಐ ತಂಡ ಮಂಗಳವಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಅನೇಕರ ವಿಚಾರಣೆ ನಡೆಸಿತು. ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ಠಾಣೆಗೆ ಕರೆಸಿ ಮೊದಲು 1 ತಾಸು, ಮತ್ತೊಮ್ಮೆ 2 ತಾಸು ಪ್ರಶ್ನೆಗಳ ಸುರಿಮಳೆಗೈದಿದೆ.

ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ವಿಚಾರಣೆ ವೇಳೆ ಮುತ್ತಗಿ ಹಾದಿತಪ್ಪಿಸಲು ಯತ್ನಿಸಿದಾಗ ಸಿಬಿಐ ಅಧಿಕಾರಿಗಳು ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಈ ಮಧ್ಯೆ, ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡನ ಆಪ್ತ ದಿಲೀಪ್‌ನನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.