ದಲಿತ ಸಮುದಾಯದ ಅಭಿವೃದ್ಧಿಗೆ ಬದ್ಧ : ವಿ. ಸೋಮಣ್ಣ

ಮತ್ತೊಮ್ಮೆ ಮೂರನೇ ಸಲ ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ನನ್ನನ್ನ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಮನವಿ ಮಾಡಿದರು.

Committed to the development of Dalit community snr

  ತುಮಕೂರು :  ಮತ್ತೊಮ್ಮೆ ಮೂರನೇ ಸಲ ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ನನ್ನನ್ನ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಮನವಿ ಮಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಪಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಸವಣ್ಣನವರ ಅನುಯಾಯಿಯಾಗಿ ಬೆಳೆದುಕೊಂಡು ಬಂದಿದ್ದೇನೆ. ಸಮಾಜದ ಕಟ್ಟಕಡೆಯವರನ್ನೂ ಮುಖ್ಯವಾಹಿನಿಗೆ ತರಬೇಕು ಎನ್ನುವುದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇನೆ ಎಂದರು.

ದಲಿತ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಂಪತ್ತು. ದೇಶಕ್ಕೆ ದೊಡ್ಡದಾದ ಸಂವಿಧಾನ ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರ ಜವಾಬ್ದಾರಿಯುತ ವಾಗಿ ನಡೆದುಕೊಳ್ಳುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿದೆ. ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ನಾನು ಈಗಾಗಲೇ ಓಡಾಡಿದ್ದೇನೆ. ಮಧುಗಿರಿ, ಕೊರಟಗೆರೆ, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಏನು ಅಂತಾ ಗೊತ್ತಾಗಿದೆ. ನನ್ನದೆ ಆದ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದೇನೆ. ದೇಶದ ಗೆಲುವಿಗೆ ನನಗೆ ಮತ ನೀಡಬೇಕು. ನಾನು ಕಾರ್ಯಕ್ರಮಕ್ಕೆ ಬರುವಾಗ 15-16 ಕಡೆಯಲ್ಲಿ ಮಾತಾಡಿಕೊಂಡು ಬಂದೆ. ಅದರಲ್ಲಿ ದಲಿತ ಮುಖಂಡರು ಮಾತಾಡಿದರು. ಸೋಮಣ್ಣನವರೇ ನಿಮ್ಮ ಕಾರ್ಯವೈಖರಿ ನಮಗೆ ಗೊತ್ತಿದೆ ಎಂದು ಮೆಚ್ಚುಗೆ ಮಾತುಗಳ ನ್ನಾಡಿದರು ಎಂದರು.

ತುಮಕೂರು ಜನರ ಮನ ಗೆದ್ದು, ಋಣ ತೀರಿಸುತ್ತೇನೆ:

ಸೋಮಣ್ಣ ಹೊರಗಡೆಯಿಂದ ಬಂದವನ್ನಲ್ಲ. ತುಮಕೂರು ಜನರ ಮನ ಗೆದ್ದು ಋಣ ತೀರಿಸಲು ಬಂದಿದ್ದೇನೆ. ನಾನು ಎಲ್ಲಾ ಕಡೆ ಬರುತ್ತೇನೆ. ಅಭಿವೃದ್ಧಿ ಒತ್ತು ಕೊಡುತ್ತೇನೆ. ಈ ಚುನಾವಣೆ ದೇಶದ ಚುನಾವಣೆ. ಸೋಮಣ್ಣ ನಿಮಿತ್ತ ಮಾತ್ರ. ದೇಶಕ್ಕಾ ಗಿ ನನ್ನನ್ನ ಗೆಲ್ಲಿಸಿ. ಎಲ್ಲಾ ವರ್ಗ ಕ್ಕೂ ಒಳ್ಳೆ ಕೆಲಸ ಮಾಡುತ್ತೀಯಾ ಎಂದು ವರಿಷ್ಠರು ನನ್ನನ್ನ ಕಳುಹಿಸಿಕೊಟ್ಟಿದ್ದಾರೆ. ನೀವು ಮಾಡುವ ಓಟು ನನಗಲ್ಲ. ನರೇಂದ್ರ ಮೋದಿಗೆ ಎಂದರು.

ರಾಹುಲ್ ಗಾಂಧಿ, ಸೋನಿಯಾಗಾಂಧಿ ಎಲ್ಲೆಲ್ಲಿ ಸ್ಪರ್ಧಿಸಿದ್ದಾರೆ ಎಂತಾ ಎಲ್ಲರಿಗೂ ಗೊತ್ತಿದೆ. ಅವರ ರೀತಿ ನಾನು ಹೊರಗಿನ ವನಾ? ನಾನು ಹೊರಗಿನವನಲ್ಲ. ಪಕ್ಕದವನು. ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭಾವ ಸಂಬಂಧ ಇದೆ. ತುಮಕೂ ರು ಲೋಕಸಭಾ ಕ್ಷೇತ್ರವೂ ಸಹ ವಾರಣಾಸಿ ಮಾದರಿಯಲ್ಲಿ ಎತ್ತರಕ್ಕೆ ಬೆಳೆಯುತ್ತದೆ ಎಂದು ಭರವಸೆ ನೀಡಿದರು.

ಸೋಮಣ್ಣ ಹೊರಗಿನವರು ಎನ್ನುತ್ತಾರೆ. ನಾನು ಹೊರಗಿನವಲ್ಲ. ಭಗವಂತನ ಆಶೀರ್ವಾದ, ವರಿಷ್ಠರ ತೀರ್ಮಾನ ಹಿನ್ನೆಲೆ ಬಂದಿದ್ದೇನೆ. ತುಮಕೂರು ಜನರ ಋಣ ಇದೆ, ಸ್ಪರ್ಧಿಸಿದ್ದೇನೆ. ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು. ಮೋದಿ ಅವರು ದೇಶವನ್ನ ಮುನ್ನಡೆಸಬೇಕು ಎಂದು ಅವರು ಹೇಳಿದ್ದಾರೆ. ದೇಶದ ಗೆಲುವಿಗೆ ಜನತಾದಳವೂ ಒಟ್ಟಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ವೈ.ಎಚ್. ಹುಚ್ಚಯ್ಯ ಮಾತನಾಡಿ, ಸೋಮಣ್ಣ ಅವರ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಕಾರ್ ಮಾತನಾಡಿ, ನಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿರುವ ಸೋಮಣ್ಣನವರು ನಮ್ಮ ಜಿಲ್ಲೆಗೆ ಹೊಸಬರೇನಲ್ಲ, ಮೊದಲಿನಿಂದಲೂ ಹಲವು ಚುನಾವಣೆಗಳ ಉಸ್ತುವಾರಿಯಾಗಿ ಜಿಲ್ಲೆಯನ್ನು ಬಲ್ಲವರಾಗಿದ್ದಾರೆ ಎಂದರು. ಯುವಕರನ್ನು ಬೆಳೆಸುವ ಜತೆಗೆ ಮಾರ್ಗದರ್ಶಕರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವ ಮೂಲಕ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿಯಾಗಿಸಲು ನಾವೆಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್, ಎಂಎಲ್ ಸಿ ನವೀನ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡ ವೈಎಚ್. ಹುಚ್ಚಯ್ಯ, ಅನಿಲ್ ಕುಮಾರ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಕಾರ್, ಜಿಲ್ಲಾಧ್ಯಕ್ಷ ಅಂಜನಪ್ಪ ಸೇರಿದಂತೆ ಕಂಬದರಂಗಯ್ಯ ಇತರರು ಇದ್ದರು.

ಸಂವಿಧಾನ ಬದಲಾವಣೆ ಮಾತೇ ಇಲ್ಲ:

ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಹಳೆ ಸಿದ್ದರಾಮಯ್ಯ ಎಂಬ ಭಾವನೆ ಮೂಡಿದೆ. ಸಿದ್ದರಾ ಮಯ್ಯ ಅವರು ಯಾರದೋ ದುಡ್ಡನ್ನ ಯಾರಿಗೋ ಕೊಟ್ಟಿದ್ದಾರೆ. ಅಭಿವೃದ್ಧಿಗಾಗಿ ಇಟ್ಟಿದ್ದ ಹಣವನ್ನು ಮತ್ತೊಂದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದ ವಿ.ಸೋಮಣ್ಣ, ದಲಿತ ಸಮುದಾಯ ಮುನ್ನಲೆಗೆ ಬರಬೇಕು. ಆ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಹಾಗಾಗಿ ಮೋದಿ ಅವರು ಸಮುದಾಯದ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ ಎಂದರು. ಸೂರ್ಯಚಂದ್ರ ಎಲ್ಲಿಯವರೆಗೂ ಇರುತ್ತಾ ರೋ ಅಲ್ಲಿಯವರೆಗೂ ಸಂವಿಧಾನ ಇರುತ್ತದೆ. ಸಂವಿಧಾನ ಬದಲಾವಣೆ ಮಾತೇ ಇಲ್ಲ. ಸಂವಿಧಾನ ಬದಲಾವಣೆ ವಿಚಾರ ದಲ್ಲಿ ಅಪಪ್ರಚಾರ ಸರಿಯಲ್ಲ ಎಂದು ಸೋಮಣ್ಣ ಹೇಳಿದರು.

Latest Videos
Follow Us:
Download App:
  • android
  • ios