ಅಥಣಿ(ಮಾ.13): ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ದೂರ ಗ್ರಾಮದ ಹತ್ತಿರ ಜತ್ತ-ಜಾಂಬೋಟ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಡೆದಿದೆ. 

ಅಥಣಿ ಪಟ್ಟಣದ ನಿವಾಸಿಗಳಾದ ದಿಲೀಪ ಅಪ್ಪಾಸಾಬ ಬುರುಡ(38), ಸಲೀಂ ಎ. ನದಾಫ್ (23) ಮೃತಪಟ್ಟವರಾಗಿದ್ದಾರೆ. ಗಾಯಗೊಂಡ ರಾಜೇಂ ದ್ರ ಸೇಗಣಿ ಎಂಬಾತನನ್ನು ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನಾ ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಥಣಿ ಠಾಣೆಯಲ್ಲಿ ದೂರು ದಾಖಲಾಗಿದೆ.