ಇಂಡಿ(ಜೂ.28): ತಾಲೂಕಿನ ಅರ್ಜನಾಳ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ್‌ ವಾಹನ ಮತ್ತು ಲಾರಿ ಮಧ್ಯೆ ಮುಖಾಮುಖಿಯಾಗಿ ಅಪಘಾತವಾಗಿ ಚಾಲಕ ಹಾಗೂ ಕ್ಲೀನರ್‌ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಧಾರವಾಡ ಜಿಲ್ಲೆಯ ಈರಣ್ಣ ಎಸ್‌. ನೀರಲಕಟ್ಟಿ (30) ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿಯ ಅನೀಲ ಕರಿಗೌಡ (28) ಮೃತಪಟ್ಟ ದುರ್ದೈವಿಗಳು. 

ಇನ್ನೆರಡು ವರ್ಷದಲ್ಲಿ ವಿಜಯಪುರ ಗಾರ್ಡ್‌ನ್‌ ಸಿಟಿ: ಶಾಸಕ ಯತ್ನಾಳ

ಗೂಡ್ಸ್‌ ವಾಹನ ವಿಜಯಪುರದಿಂದ ಮಹಾರಾಷ್ಟ್ರದ ಸೋಲಾಪುರ ಕಡೆಗೆ ಹಾಗೂ ಲಾರಿ ಸೋಲಾಪುರ ಕಡೆಯಿಂದ ವಿಜಯಪುರ ಕಡೆಗೆ ಹೊರಟಿತ್ತು. ಈ ಕುರಿತು ಝಳಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.