ನಾಗಮಂಗಲ: [ಸೆ.09] :  ಮಾಜಿ ಸಂಸದ ಎಲ್. ಆರ್‌ .ಶಿವರಾಮೇಗೌಡರ ಮೇಲೆ 2008ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚುನಾವಣಾ ಆಯೋಗ ಹಾಕಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಿರಾಪರಾಧಿ ಎಂದು ಪಟ್ಟಣದ ಜೆಎಂಎಫ್‌ ಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ವಕೀಲ ಟಿ.ಕೆ.ರಾಮೇಗೌಡ ತಿಳಿಸಿದ್ದಾರೆ.

ಚುನಾವಣಾ ಆಯೋಗ ಮತ್ತು ಸ್ಥಳೀಯ ಪೊಲೀಸರು ಮಾಜಿ ಸಂಸದ ಎಲ್ ಆರ್‌.ಶಿವರಾಮೇಗೌಡ ಸೇರಿದಂತೆ ಇತರರ ಮೇಲೆ ಚುನಾವಣಾ ನೀತೆ ಸಂಹಿತೆ ಪ್ರಕರಣ ದಾಖಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸತತ ಹತ್ತು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದು, ಶಿವರಾಮೇಗೌಡ ಹಾಗೂ ಇತರರು ನೀತೆ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಸರಿಯಾದ ಸಾಕ್ಷಿ ಇಲ್ಲದ ಕಾರಣ ಇವರನ್ನು ಈ ಪ್ರಕರಣದಲ್ಲಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದರು.