ತುಮಕೂರು(ಮಾ.04): ಕೊರೋನಾ ವೈರಸ್ ಭೀತಿಯಿಂದಾಗಿ ಕೊಬ್ಬರಿ ರಫ್ತು ಕಡಿಮೆಯಾಗಿದೆ. ಇದರಿಂದಾಗಿ ಕೊಬ್ಬರಿ ಬೆಲೆ ಕುಸಿತ ಕಂಡಿದೆ. ಕೊಬ್ಬರಿ ಬೆಲೆಯಲ್ಲಿ ಸಾವಿರಗಳಲ್ಲಿ ಬೆಲೆ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ.

"

ಕೊರೋನಾ ವೈರಸ್ ಎಫೆಕ್ಟ್‌ನಿಂದ ಕೊಬ್ಬರಿ ರಫ್ತಿನಲ್ಲಿ ಇಳಿಕೆಯಾಗಿದೆ. ಕ್ವಿಂಟಾಲ್ ಕೊಬ್ಬರಿ ಬೆಲೆ 16 ಸಾವಿರದಿಂದ 10 ಸಾವಿರಕ್ಕೆ ಇಳಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿ ಮಾರುಕಟ್ಟೆ ಮೇಲೆ ಕೊರೋನಾ ಪರಿಣಾಮ ಉಂಟಾಗಿದೆ.

ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!

ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆ ಎಂದು ಹೆಸರು ಪಡೆದಿರುವ ತಿಪಟೂರು ಮಾರುಕಟ್ಟೆಯಲ್ಲಿಯೇ ಕೊಬ್ಬರಿ ಬೆಲೆ ಕುಸಿದಿರುವುದು ತೆಂಗು ಬೆಳೆಗಾರರಿಗೆ ಹೊಡೆತ ನೀಡಿದೆ. ಕೊಬ್ಬರಿ ಬೆಲೆ ಕಡಿಮೆಯಾದ ಹಿನ್ನೆಲೆ ರೈತರು ಆತಂಕಕ್ಕೊಳಗಾಗಿದ್ದಾರೆ.

ವರ್ಷಕ್ಕೆ ಸುಮಾರು 60 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. 12 ಲಕ್ಷ ಟನ್ ಚೀನಾಕ್ಕೆ ರಫ್ತಾಗುತ್ತಿತ್ತು. ಇದೀಗ ರಫ್ತಿನಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಕೊಬ್ಬರಿ ಬೆಲೆ ಹಾಗೂ ರಫ್ತು ಭಾರೀ ಕುಸಿತ ಕಂಡಿದೆ.