ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಚಾಮುಂಡೇಶ್ವರಿ ಫೋಟೋ ಬಳಿ ನಾಗರಹಾವು ಪ್ರತ್ಯಕ್ಷ
- ಮರದ ಬಾಕ್ಸ್‌ನಲ್ಲಿಟ್ಟಿರುವ ಚಾಮುಂಡೇಶ್ವರಿ ಫೋಟೋ ಹಿಂದೆ ಸುಮಾರು 5 ಅಡಿ ನಾಗರಹಾವೊಂದು ಪ್ರತ್ಯಕ್ಷ
- ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಟೆಂಪೋ ನಿಲ್ದಾಣದಲ್ಲಿ ಘಟನೆ
ಮೈಸೂರು (ಜು.29): ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಟೆಂಪೋ ನಿಲ್ದಾಣದಲ್ಲಿ ಚಾಲಕರು ಮರದ ಬಾಕ್ಸ್‌ನಲ್ಲಿಟ್ಟಿರುವ ಚಾಮುಂಡೇಶ್ವರಿ ಫೋಟೋ ಹಿಂದೆ ಸುಮಾರು 5 ಅಡಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ.
ಟೆಂಪೋ ಚಾಲಕರು ಪ್ರತಿನಿತ್ಯ ಬೆಳಗ್ಗೆ ದೇವರು ಫೋಟೋಗೆ ಪೂಜೆ ಮಾಡುತ್ತಾರೆ.
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ : ರಜಾ ದಿನಗಳಲ್ಲೂ ಇಲ್ಲ
ಬುಧವಾರ ಬೆಳಗ್ಗೆ ಚಾಲಕರೊಬ್ಬರು ದೇವರಿಗೆ ಪೂಜೆ ಸಲ್ಲಿಸಲು ಫೋಟೋ ಬಳಿ ತೆರಳಿದಾಗ ಫೋಟೋ ಪಕ್ಕದಲ್ಲಿ ನಾಗರಹಾವು ಇರುವುದನ್ನು ಕಂಡು ಗಾಬರಿಗೊಂಡರು. ಕೂಡಲೇ ಚಾಲಕರು ಉರಗ ತಜ್ಞ ಸ್ನೇಕ್ ಶ್ಯಾಮ್ ಅವರ ಪುತ್ರ ಸ್ನೇಕ್ ಸೂರ್ಯಕೀರ್ತಿಗೆ ಕರೆ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಸೂರ್ಯಕೀರ್ತಿ ಹಾವನ್ನು ರಕ್ಷಿಸಿದರು.