ದಸರಾ ದಿನ ಮನೆಗೆ ಬಂದ ಬೃಹತ್ ಗಾತ್ರದ ಕೋಬ್ರಾ
ದಸರಾ ಹಬ್ಬದ ದಿನವೇ ಬೃಹತ್ ಗಾತ್ರದ ಹಾವೊಂದು ಪತ್ತೆಯಾಗಿದೆ...
ಕೊಡಗು (ಅ.26): ದಸರಾ ಹಬ್ಬದ ದಿನ ಮನೆಯಂಗಳಕ್ಕೆ ಬುಸ್ ಬುಸ್ ನಾಗಪ್ಪ ಬಂದಿದ್ದಾನೆ.
ಕೊಡಗಿನ ಕುಶಾಲನಗರದ ಶ್ರೀಧರ್ ಎಂಬುವವರ ಮನೆಯಂಗಳಕ್ಕೆ ನಾಗರಹಾವು ಬಂದಿದ್ದು, ಹಾವನ್ನು ಸೆರೆ ಹಿಡಿಯಲಾಗಿದೆ.
ಮನೆಯಂಗಳದಲ್ಲಿದ್ದ ಹಾವನ್ನು ಉರಗ ತಜ್ಞ ಶಾಜಿ ಸೆರೆ ಹಿಡಿದಿದ್ದಾರೆ. ಸುಮಾರು 6 ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.
ಈ ದ್ವೀಪಕ್ಕೆ ಹೋದವರು ಬದುಕಿ ಬರೋ ಚಾನ್ಸೇ ಇಲ್ಲ! ...
ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ ಶ್ರೀಧರ್ ಅವರ ಮನೆಯ ಮುಂದೆ ಬಂದ ವೇಳೆ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಕೊಡಗಿನಲ್ಲಿ ಈ ಹಿಂದೆಯೂ ಕೂಡ ಅನೇಕ ಬಾರಿ ಬೃಹತ್ ಗಾತ್ರದ ಹಾವುಗಳು ಪತ್ತೆಯಾಗಿದ್ದವು. ಮನೆಯ ಒಳಗೂ ಸಹ ಹಾವುಗಳು ಪ್ರತ್ಯಕ್ಷವಾಗುವುದು ಇಲ್ಲಿ ಸಾಮಾನ್ಯ ವಿಚಾರವಾಗಿದೆ.