Asianet Suvarna News Asianet Suvarna News

ಮಂತ್ರಾಲಯಕ್ಕೆ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ: ರಾಯರ ಆರಾಧನೆಯಲ್ಲಿ ಭಾಗಿ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಆ.19ರಂದು ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು 

cm Siddaramaiah will be visit to Mantralaya on august 18th grg
Author
First Published Aug 15, 2024, 7:00 AM IST | Last Updated Aug 15, 2024, 7:00 AM IST

ರಾಯಚೂರು(ಆ.15):  ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಆ.18 ರಿಂದ ಆ.24ವರೆಗೆ ಆಯೋಜಿಸ ಆಯೋಜಿಸಲಾಗಿದ್ದು, ಆರಾಧನೆ ಹಿನ್ನೆಲೆಯಲ್ಲಿ ಮಠದಿಂದ ಸಪ್ತರಾತ್ರೋತ್ಸವ ನಡೆಸಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

ಮಠದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಆ.19ರಂದು ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ವರಿಗೆ ರಾಯರ ಅನುಗ್ರಹಪ್ರಶಸ್ತಿ ನೀಡಲಾಗುತ್ತಿದೆ. ಬೆಂಗಳೂರಿನ ಬಿಜಿಎಸ್ ಮತ್ತು ಎಸ್‌ಜೆಬಿಐಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಬೆಂಗಳೂರಿನ ವಿದ್ವಾನ್ ರಘುಪತಿ ಉಪಾಧ್ಯಾಯ, ವಾರಣಸಿಯ ಪ್ರೊ.ವರಜಾ ಭೂಷಣ ಓಝಾ ಹಾಗೂ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. 

ರಾಘವೇಂದ್ರ ಸ್ವಾಮಿಗಳ ಪವಾಡ ರಜನಿಕಾಂತ್ ಲೈಫಲ್ಲಿ ನಡೆದಿತ್ತಾ? ಈ ಬಗ್ಗೆ ರಿಷಬ್ ಶೆಟ್ಟಿ ಏನಂದ್ರು ನೋಡಿ!

ಆ.20ರಂದು ಗುರುರಾಯರ ಪೂರ್ವಾ ರಾಧನೆ, 21ಕ್ಕೆ ಮಧ್ಯಾರಾಧನೆ, 22ರಂದು ಉತ್ತರಾರಾಧನೆ ಮಹಾ ರಥೋತ್ಸವ ನಡೆಯಲಿದೆ.ಆ.18ಕ್ಕೆತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀನಿವಾಸ ದೇವರ ಶೇಷವಸ್ತ್ರಗಳು ಬರಲಿವೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಕೂಡ ಆಗಮಿಸಲಿದ್ದಾರೆ. ಇನ್ಫೋಸಿಸ್ ನ ಸುಧಾ ನಾರಾಯಣಮೂರ್ತಿಯವರು ಐದು ದಿನಗಳ ಕಾಲ ಮಠದಲ್ಲಿಯೇ ಇದ್ದು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. 

ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಸ್ನಾನಘಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ, ಭಕ್ತರಿಗೆ ಪುಣ್ಯಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios