ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲು ನೋವಿಗೆ ಬಿದ್ದು ಪೆಟ್ಟായದ್ದೇ ಕಾರಣ ಎಂದರು. ಜಾತಿ ವ್ಯವಸ್ಥೆ, ಮನುಸ್ಮೃತಿ ಟೀಕಿಸಿ, ಸಂವಿಧಾನದ ಆಶಯದಂತೆ ಸಮಾನತೆ ಬರಬೇಕಿದೆ, ಅಸ್ಪೃಶ್ಯತೆ ಹೋಗಬೇಕಿದೆ ಎಂದರು. ಅನ್ನಭಾಗ್ಯ ಯೋಜನೆಯ ಅಗತ್ಯವನ್ನು ವಿವರಿಸಿ, ಕಾಯಕದ ಮಹತ್ವ ಸಾರಿದರು.

ತುಮಕೂರಿನ ಕುರುಬರ ಸಾಹಿತಿಗಳ ಸಮಾವೇಶದ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದು, ತನ್ನ ಕಾಲು ನೋವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಜಾತಿ ವ್ಯವಸ್ಥೆ, ಮನುಸ್ಮೃತಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಈ ಕಾರ್ಯಕ್ರಮ ಕ್ಕೆ ಬರಬೇಕು ಅಂತಾ ಆಹ್ವಾನ ಮಾಡಿದ್ರು. ನನಗೆ ಎಡಗಾಲು ಸ್ವಲ್ಪ ನೋವಾಗಿದೆ. ಆದರೆ ಒತ್ತಾಯ ಮಾಡಿದಕ್ಕೆ ಬಂದಿದ್ದೇನೆ. ನನಗೆ ಹೆಚ್ಚು ಟ್ರಾವೆಲ್ ಮಾಡಲು ಆಗುವುದಿಲ್ಲ, ಬಹಳ ಸಮಯ ನಿಂತು ಮಾತಾಡಲು ಕೂಡ ಆಗುತ್ತಿಲ್ಲ. ನಾನು ಬಾತ್ ರೂಮ್ ನಿಂದ ಹೊರಗೆ ಬರುವಾಗ ಬಿದ್ದುಬಿಟ್ಟೆ. ನಾನು 2005 ರಲ್ಲಿ ಕಬ್ಬಡಿ ಆಡುವಾಗ ಲಿಗಮೆಂಟ್ ಕಟ್ ಆಗಿತ್ತು. ಈಗ ಅದೇ ಲಿಗಮೆಂಟ್ ಪೆಟ್ಟು ಬಿದ್ದಿದೆ. ಹೀಗಾಗಿ ಹೆಚ್ಚು ತಿರುಗಾಡಲು ಆಗ್ತಾ ಇಲ್ಲ. ತಿರುಗಾಡೋ ಕಡೆ ತಿರುಗಾಡುತ್ತಿದ್ದೇನೆ ಎಂದರು.

ಮುಂದುವರೆದು ಮಾತನಾಡಿ 1947 ಸ್ವತಂತ್ರ ಬಂತು, 1950 ಜನವರಿ 26 ಕ್ಕೆ ಸಂವಿಧಾನ ಜಾರಿಯಾಯ್ತು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ ಅಂತಾ ಹೇಳಿಕೊಂಡಿದ್ದೇವೆ. ಸಂವಿಧಾನ ಬಂದು 75 ವರ್ಷ ಆಗಿದೆ. ಇಷ್ಟು ವರ್ಷ ಆದರೂ ಇನ್ನೂ ಅಸ್ಪೃಶ್ಯತೆ ಹೋಗಿಲ್ಲ,
ಅನೇಕ ಕಡೆ ದೇವಾಲಯಗಳ ಒಳಗೆ ಬಿಡುವುದಿಲ್ಲ. ಆರ್ಥಿಕವಾಗಿ ಸಾಮಾಜಿಕವಾಗಿ ಬೆಳವಣಿಗೆ ಆಗಿಲ್ಲ. ಸಮಾಜದಲ್ಲಿ ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಅವರೆಲ್ಲರೂ ಇಂದು ಚಿಂತನೆ ಮಾಡಬೇಕಿದೆ. ‌ನಾನು ಶಿಕ್ಷಣ ಪಡೆದಿರೋದು ನನ್ನ ಸ್ವಾರ್ಥಕ್ಕಲ್ಲ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಸಮಾಜದಲ್ಲಿ ಯಾರಿಗೆ ನೋವಾಗುತ್ತಿದೆ. ಸಾಮಾಜಿಕವಾಗಿ ಬಳಲುತ್ತಿದ್ದಾರೆ. ಅವರಿಗೆ ವಿದ್ಯೆ ನೀಡಲು ಇಂತಹ ಸಂವಿಧಾನ ಬರಲಿಲ್ಲ ಅಂದರೆ ನಾವ್ಯಾರು ಹೀಗೆ ಆಗಲು ಆಗ್ತಾ ಇರಲಿಲ್ಲ. ನೀವು ಸಾಹಿತಿಗಳು ಆಗ್ತಾ ಇರಲಿಲ್ಲ.

6 ಜನ ಮಕ್ಕಳಲ್ಲಿ ನಾನೊಬ್ಬನೇ ಓದಿ ಸಿಎಂ ಆದೆ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ: ಸಿದ್ದರಾಮಯ್ಯ

ಅನೇಕ ವರ್ಷಗಳ ಕಾಲ‌ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿ ಪ್ರಕಾರ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಬರಲು ಕಾರಣವಾಯ್ತು. ಊಟ, ಬಟ್ಟೆ, ‌ಮನೆಯಿಲ್ಲ ಅಂತಾ ಬಹಳಷ್ಟು ಜನ ತಿಳಿದಿದ್ದಾರೆ. ಇದಕ್ಕೆ ಅವರು ಇದು ನಮ್ಮ ಹಿಂದಿನ‌ ಕರ್ಮ ಅಂತಾ ಹೇಳ್ತಾರೆ. ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಂಡಿಲ್ಲ. ಬಸವಣ್ಣನವರು ಕರ್ಮ ಸಿದ್ದಾಂತವನ್ನ ತಿರಸ್ಕಾರ ಮಾಡಿ ಅಂತಾ ಹೇಳಿದ್ರು. ಕರ್ಮ ಸಿದ್ದಾಂತವನ್ನ ಬಹಳ ಜನ ವಿದ್ಯಾವಂತರು ಇನ್ನೂ ಬಿಟ್ಟಿಲ್ಲ. ನೀನು ಯಾಕಪ್ಪ ಹೀಗೆ ಆಗಿದಿಯಾ ಅಂದರೆ ನಮ್ಮ ಹಣೆ ಬರಹ ಸ್ವಾಮಿ,ಬ್ರಹ್ಮ ಲಿಖಿತ ಅಂತಾರೆ. ಹಣೆಯಲ್ಲಿ ಒಬ್ಬ ಶ್ರೀಮಂತ, ನಿರುದ್ಯೋಗಿ, ಊಟ ತಿನ್ನಬೇಡ ಅಂತಾ ಬ್ರಹ್ಮ ಬರೆಯುತ್ತಾನಾ? ಬಹಳಷ್ಟು ಜನರು ಡಾಕ್ಟರ್ ಗಳು ಹೇಳ್ತಾರೆ ಇದು ನಮ್ಮ ಹಣೆ ಬರಹ ಅಂತಾ .

ಇದೆಲ್ಲಾ ಹೋಗಬೇಕಲ್ವಾ? ಇದೆಲ್ಲಾ ಬರೆಯಬೇಕಲ್ವಾ? ಯಾರು ಈ ಪರಿಣಾಮ ಅನುಭವಿಸಿದರೆ ಅವರು ಬರೆಯಬೇಕು. ಪಟ್ಟಭದ್ರ ಹಿತಾಸಕ್ತಿಗಳು ಬರೆಯುತ್ತಾರಾ? ಅವರು ಬರೆಯುವುದೇ ಇಲ್ಲ. ಬಸವಣ್ಣ ಕ್ರಾಂತಿ ಮುಂದುವರೆಸಲು ಬಿಡಲೇ ಇಲ್ಲ. ಕುರುಬರು ಹಿಂದುಳಿದವರು, ದಲಿತರು ಬಡವರು ಯಾಕಪ್ಪ ಹಿಂದೆ ಉಳಿದಿದ್ದಾರೆ.

ಅಕ್ಕಿ ಯೋಜನೆಯನ್ನು ಯಾಕೆ ಜಾರಿಗೆ ತಂದೆ ಅಂದರೆ, ನಮ್ಮ ಮನೆಯ ಪಕ್ಕದಲ್ಲಿ ಸವಿತಾ ಸಮಾಜ ಕುಟುಂಬ ಇತ್ತು. ಒಂದು ತುತ್ತು ಅನ್ನಕ್ಕೆ ನಮ್ಮ ಮನೆ ಬಳಿಗೆ ಬಂದು ನಿಲ್ಲೋರು. ನಮ್ಮ ಅವ್ವ ಗೊಣಕಿಕೊಂಡು ಕೊಡೊರು. ಯಾರು ಕೂಡ ಯಾರ ಮನೆ ಬಾಗಿಲಿಗೆ ಅನ್ನಕ್ಕಾಗಿ ನಿಲ್ಲಬಾರದು. ನಮ್ಮ ಶಾಸಕರೇ ಮಾತಾಡಿದ್ರು ಅಕ್ಕಿ ಕೊಟ್ಟು ಜನರನ್ನ ಸೊಮಾರಿಗಳನ್ನ ಮಾಡಿಬಿಟ್ಟರು ಅಂತ.

1500 ಇದ್ದ ವಿದ್ಯಾಸಿರಿ ವಿದ್ಯಾರ್ಥಿವೇತನ ₹2000ಕ್ಕೆ ಹೆಚ್ಚಳ: ಸಿಎಂ ಭರವಸೆ

ನಾನು ಸದನದಲ್ಲಿ ‌ಹೇಳಿದ್ದೆ ನೋಡಯ್ಯ ಗುರುಪಾದಪ್ಪ ನಾಗಮಾರಪಳ್ಳಿ ನೀನು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ ಅನಿಸುತ್ತೆ. ಎಲ್ಲರೂ ತೊಡಗಿಸಿಕೊಳ್ಳಬೇಕು ಅದನ್ನ ಎಲ್ಲರಿಗೂ ಹಂಚಬೇಕು. ಕಾಯಕ ಮಾಡಿ‌ ಬದುಕುಬೇಕು. ಅವರು ಕೆಲಸ ಮಾಡಿ ಸುಸ್ತಾಗಿದ್ದರು, ನೀವು ಇನ್ನೂ ಸ್ವಲ್ಪ ಕಾಲ‌ ಕೆಲಸ ಮಾಡಿ ಅಂತಾ ಹೇಳಿದ್ದೆ. ನೀವೆಲ್ಲಾ ಕುಳಿತು ಬೊಜ್ಜು ಬೆಳೆಸಿಕೊಂಡಿದ್ದೀರಿ ಈಗ ನೀವು ಕೆಲಸ ಮಾಡಿ ಅಂದೆ. ನಿಮ್ಮ ಅನುಭವ ಆಚಾರ ವಿಚಾರ ಸಂಸ್ಕೃತಿಗಳು ಹೊರಗೆ ಬರಬೇಕು. ಎಲ್ಲಾ ಜಾತಿಯವರು ರೂಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡಿದ್ದಾರೆ.