ಬರನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲ, ಬಿಡಿಗಾಸು ಕೊಟ್ಟಿಲ್ಲ

ಆರು ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಕುಸಿತ ಕಂಡಿದೆ. ರಾಜ್ಯದ 195 ತಾಲೂಕಿನಲ್ಲಿ ಬರಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

CM Siddaramaiah government has completely failed in drought management says Kota srinivas poojary gow

ವರದಿ:  ಶಶಿಧರ್ ಮಾಸ್ತಿಬೈಲು

ಉಡುಪಿ (ಅ.25): ಆರು ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಕುಸಿತ ಕಂಡಿದೆ. ಕಂಡು ಕೇಳರಿಯದ ಬರ ಜನರನ್ನು ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಳೆಕೊರತೆಯಿಂದ 30 ಸಾವಿರ ಕೋಟಿ ನಷ್ಟ ಎಂದು ಸರಕಾರ ವರದಿಯಲ್ಲಿ ನೀಡಿದೆ. ತಕ್ಷಣ ಕನಿಷ್ಟ 5 ಸಾವಿರ ಕೋಟಿ ಕೂಡಾ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಹೇಳೋದ್ರಲ್ಲೇ ತಲ್ಲೀನವಾಗಿದೆ. ಸರಕಾರ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಬೀಜ ವಿತರಿಸಿ ಗೊಬ್ಬರ ಖರೀದಿಗೆ ಅನುದಾನ ಕೊಡಿ, ನೀರಾವರಿ ವ್ಯವಸ್ಥೆ ಮಾಡಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು. ಅಧ್ಯಯನ ಮಾಡೂದರಲ್ಲೇ ಕಾಲ ಕಳೆಯಬೇಡಿ ಎಂದರು.

ಜಯದೇವ ಜಂಗಿ ಕುಸ್ತಿ ಕಾಳಗ, ಇದು ಮೈಸೂರಿನಲ್ಲಿ ನಡೆಯೋದಲ್ಲ

ವಿದ್ಯುತ್ ಕೊರತೆಯಾಗಿದೆ.  ದಿನಕ್ಕೆ 7 ಗಂಟೆ 3 ಪೇಸ್  ಪವರ್ ಎಂದು ಘೋಷಿಸಿ 2ಗಂಟಿಗೆ ಇಳಿಸಿದ್ದಾರೆ. ರೈತರು ಕಂಗಾಲಾಗಿದ್ದರೂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಒಂದು ರುಪಾಯಿ ಕಿಸಾನ್ ಸಮ್ಮಾನ್ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರಕಾರ ರಾಜ್ಯದಿಂದ 4- ಕೇಂದ್ರದಿಂದ 6 ಸಾವಿರ ಕೊಡುತ್ತಿದ್ದನ್ನು ನಿಲ್ಲಿಸಿ ರೈತರ ಖಾತೆಯ ಹಣಕ್ಕೆ ಕನ್ನಹಾಕಿದ್ದಾರೆ. ರೈತರ ಮೇಲೆ ಬದ್ಧತೆ ಇದ್ದರೆ ಹಣ ಬಿಡುಗಡೆ ಮಾಡಿ ಎಂದು ಕೋಟ ಉಡುಪಿಯಲ್ಲಿ ವಾಗ್ದಾಳಿ ಮಾಡಿದರು.

ರಾಜ್ಯ ಸರಕಾರ ಎರಡು ಪಾಲಾಗಿದೆ ವಿಭಜನೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಜನಕ್ಕೆ ಶಾಸಕರು ಭರವಸೆ ಕೊಟ್ಟಿದ್ದಾರೆ. ರಾಜ್ಯದ ಯಾವ ಶಾಸಕರ ನೇತೃತ್ವದ ಅಭಿವೃದ್ಧಿ ಗೆ ಒಂದು ಕೋಟಿಯೂ ಬಿಡುಗಡೆ ಮಾಡಿಲ್ಲ. 9 ಸಾವಿರ ವಿವೇಕ ಶಾಲಾ ಕೊಠಡಿ ಸ್ಥಗಿತ ಆಗಿದೆ. ಶಾಸಕರ ಮುನಿಸು, ಆಕ್ರೋಶ ದಲ್ಲೇ ಆರು ತಿಂಗಳು ಕಳೆದುಹೋಗಿದೆ. ವಿಧಾನಸೌಧ ಕಡೆ ಮಂತ್ರಿಗಳು, ಜನ ಬರುತ್ತಿಲ್ಲ. ಪ.ಜಾತಿ ಪ.ಪಂಗಡದ 11,500 ಕೋಟಿ ರುಪಾಯಿ  ಅನುದಾನಗಳನ್ನು  ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಎಲ್ಲಾ ಯೋಜನೆಯ ಹಣವನ್ನು ಐದು ಗ್ಯಾರಂಟಿ ಗಳಿಗೆ ಬಳಕೆ ಮಾಡಿದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಕೋಟ ಪ್ರಶ್ನೆ ಮಾಡಿದರು‌.

ಉಡುಪಿ ರೈಲ್ವೆ ಮೇಲ್ವೇತುವೆಯಲ್ಲಿ ಆತ್ಮಹತ್ಯೆ ತನಿಖೆಗೆ ಪೊಲೀಸರು ಹೋದಾಗ ಸಡನ್‌ ಟ್ರೈನ್‌ ಎಂಟ್ರಿ!

ಎಸ್ ಸಿ ಎಸ್ ಟಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ ಪ್ರಕರಣದ ಬಗ್ಗೆ ಕ್ರಮ ಆಗಿಲ್ಲ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಸಚಿವರ ವಿರುದ್ಧ ಕ್ರಮ ಆಗಿಲ್ಲ. ಅಂದು ಈಶ್ವರಪ್ಪ ರಾಜೀನಾಮೆ ಕೊಡಬೇಕು ಪಾಟೀಲ್ ಕೊಡಲ್ವಾ? ಕರ್ನಾಟಕದಲ್ಲಿ ಎರಡು ನ್ಯಾಯ ಮಾಡಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ- ಡಿಕೆಶಿ ಆಂತರಿಕ ಗೊಂದಲದಲ್ಲಿ ಅಧಿಕಾರಿಗಳು ಹೊಸ ಸಿಎಂ ನಿರೀಕ್ಷೆಯಲ್ಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Latest Videos
Follow Us:
Download App:
  • android
  • ios