ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಎಂದ 'ಕೈ' ನಾಯಕ..!

ಕಾಂಗ್ರೆಸ್‌ನಿಂದ ದೂರವಾಗಿಲ್ಲ, ಜೆಡಿಎಸ್‌ ಸೇರಲ್ಲ| ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ| ಈ ಕುರಿತು ರಾಜ್ಯದ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು: ಇಬ್ರಾಯಿಂ| 
 

CM Ibrahim Talks Over Congress grg

ರಾಯಚೂರು(ಜ.31): ಸದ್ಯ ನಾನು ಕಾಂಗ್ರೆ​ಸ್‌​ನಿಂದ ದೂರ​ವಾ​ಗಿಲ್ಲ, ಜೆಡಿ​ಎಸ್‌ ಅನ್ನು ಸೇರು​ವುದೂ ಇಲ್ಲ. ಮಾ.15 ರಂದು ಬೆಂಗಳೂರಿನಲ್ಲಿ ಬೆಂಬಲಿಗರ, ಅಭಿಮಾನಿಗಳ ಸಭೆ ನಡೆಸಿ ಮುಂದಿನ ರಾಜ​ಕೀ​ಯ ತೀರ್ಮಾ​ನ ತೆಗೆ​ದು​ಕೊ​ಳ್ಳು​ತ್ತೇನೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿ​ದ್ದಾರೆ. 

ನಗ​ರ​ದಲ್ಲಿ ಶನಿ​ವಾ​ರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ, ಪಕ್ಷದಲ್ಲಿ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ. ಈ ಕುರಿತು ರಾಜ್ಯದ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದ​ರು. 

ಮಹಾ ಸರ್ಕಾರ ಮನೆಯೊಂದು ಮೂರು ಬಾಗಿಲು: ಲಕ್ಷ್ಮಣ ಸವದಿ

ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ದಲಿತರ ನಾಯಕರು, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರನ್ನು ಪ್ರತಿನಿಧಿಸುತ್ತಿದ್ದಾರೆ, ಕೆಪಿ​ಸಿಸಿ ಅಧ್ಯ​ಕ್ಷ ಡಿ.ಕೆ ಶಿವಕುಮಾರ ಅವ​ರು ಒಕ್ಕಲಿಗರ ನಾಯಕರಾಗಿದ್ದಾರೆ. ಆದರೆ, ಅಲ್ಪಸಂಖ್ಯಾತರ ಸಮುದಾಯದ ಮತ ಪಡೆಯುವ ಪಕ್ಷವು ಸಮುದಾಯದ ನಾಯಕರನ್ನು ಬೆಳೆಸುವ ಕೆಲಸವನ್ನು ಮಾಡದಿರುವುದು ಬೇಸರದ ಸಂಗತಿ ಎಂದರು.
 

Latest Videos
Follow Us:
Download App:
  • android
  • ios