ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಗಾಂಧಿಯೂ ಇದ್ದಾರೆ. ನಗರದ ಕಪಿತಾನಿಯೊ ಹಾಗೂ ದೇರೆಬೈಲ್‌ ಪರಿಸರಗಳಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಗಾಂಧಿ ವೇಷಧಾರಿಯೊಬ್ಬರು ಭಾಗವಹಿಸಿದ್ದಾರೆ. ಗಾಂಧಿ ವೇಷಧಾರಿ ಭಾಗವಹಿಸಿದ್ದು ಅಭಿಯಾನದಲ್ಲಿ ಭಾಗವಹಿಸಿದ ಇತರ ಜನರಿಗೆ ಇನ್ನಷ್ಟು ಉತ್ಸಾಹ ತಂದಿತ್ತು.

ಮಂಗಳೂರು(ಸೆ.23): ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 42ನೇ ಭಾನುವಾರದ ಶ್ರಮದಾನ ನಗರದ ಕಪಿತಾನಿಯೊ ಹಾಗೂ ದೇರೆಬೈಲ್‌ ಪರಿಸರಗಳಲ್ಲಿ ನಡೆದಿದೆ. ಈ ಸಂದರ್ಭ ಗಾಂಧೀಜಿ ವೇಷಧಾರಿಯೊಬ್ಬರು ಭಾಗವಹಿಸಿ ಆಕರ್ಷಣೆಯ ಕೇಂದ್ರವಾದರು. ದೇರೆಬೈಲ್‌ನಲ್ಲಿ ನಡೆದ ಶ್ರಮದಾನಕ್ಕೆ ಅಗಸ್ಟಿನ್‌ ಆಲ್ಮೇಡ್‌ ಅವರು ಮಹಾತ್ಮಾ ಗಾಂಧೀಜಿ ವೇಷ ಧರಿಸಿಕೊಂಡು ಬಂದಿದ್ದರು. ಮಾತ್ರವಲ್ಲದೆ, ಸ್ವತಃ ಶ್ರಮದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ದೇರೆಬೈಲ್‌ ಚಚ್‌ರ್‍ಹಾಲ್‌ ಬದಿಯ ಸ್ಥಳದಲ್ಲಿ ಹಾಕಲಾಗಿದ್ದ ತ್ಯಾಜ್ಯರಾಶಿಯನ್ನು ಮೊಹಬೂಬ್‌ ಖಾನ್‌ ಹಾಗೂ ಬ್ರಿಗೇಡ್‌ ಪಿನಾಕಲ್‌ ನಿವಾಸಿಗಳು ಹಸನು ಮಾಡಿದರೆ, ನಿಟ್ಟೆಫಿಸಿಯೋಥೆರಫಿ ಕಾಲೇಜಿನ ಸ್ವಚ್ಛತಾ ಸೇನಾನಿಗಳು ಕುಂಟಿಕಾನ ಫ್ಲೖಓವರ್‌ ಬಳಿಯ ಬಸ್‌ ತಂಗುದಾಣದ ಎದುರಿನ ಜಾಗ ಶುಚಿಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇರೆಬೈಲ್‌ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ರಸ್ತೆ ವಿಭಾಜಕಗಳನ್ನು ಸ್ವಚ್ಛಗೊಳಿಸಿದ್ದಾರೆ. ನಾಲ್ಕನೇ ತಂಡ ಕೊಂಚಾಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿತು. ಬೆಸೆಂಟ್‌ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಕೈಜೋಡಿಸಿದ್ದಾರೆ. ಹರೀಶ್‌ ಪ್ರಭು, ಮೋಹನ್‌ ಕೊಟ್ಟಾರಿ, ಕಿರಣ ಫರ್ನಾಂಡಿಸ್‌, ಶುಭೋದಯ ಆಳ್ವ ನೇತೃತ್ವ ವಹಿಸಿದ್ದಾರೆ.

ಆರು ತಂಡ ರಚನೆ:

ಕಪಿತಾನಿಯೊ ಪರಿಸರದಲ್ಲಿ ಒಟ್ಟು ಆರು ತ್ಯಾಜ್ಯ ಬೀಳುತ್ತಿದ್ದ ಸ್ಥಳಗಳನ್ನು ಗುರುತಿಸಿ ಆರು ತಂಡಗಳನ್ನು ರಚಿಸಿಕೊಂಡು ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಪಡೀಲ್‌ ಜಂಕ್ಷನ್‌, ಫಾರ್ಚುನ್‌ ಅಪಾರ್ಟ್‌ಮೆಂಟ್‌ ಎದುರಿಗೆ, ನಾಗುರಿ ಅಮರ ಆಳ್ವ ಬಸ್‌ ತಂಗುದಾಣದ ಬದಿ, ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆ, ಕಪಿತಾನಿಯೊ ಶಾಲೆಯ ಎದುರು ಹಾಗೂ ಪಂಪ್‌ವೆಲ್‌ ವೃತ್ತದ ಬಳಿಯ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಲಾಯಿತು. ಬಳಿಕ ಅಲ್ಲಲ್ಲಿ ಅಲಂಕಾರಿಕ ಗಿಡಗಳನ್ನಿಟ್ಟು ಅಂದಗೊಳಿಸಲಾಯಿತು. ಪ್ರವೀಣ ಶೆಟ್ಟಿ, ಬಾಲಕೃಷ್ಣ ಭಟ್‌, ಉಮಾಕಾಂತ ಸುವರ್ಣ, ರಾಜಗೋಪಾಲ ಶೆಟ್ಟಿ, ಹಿಮ್ಮತ್‌ ಸಿಂಗ್‌, ಅವಿನಾಶ್‌ ಅಂಚನ್‌ ಹಾಗೂ ಹಲವು ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸೌರಜ್‌ ನೇತೃತ್ವದಲ್ಲಿ ಕಂಕನಾಡಿ, ಕಪಿತಾನಿಯೊ, ಮರೋಳಿ, ಪಂಪವೆಲ್‌ ಇನ್ನಿತರ ಕಡೆಗಳಲ್ಲಿ ಹಾಕಲಾಗಿದ್ದ ಪ್ಲೆಕ್ಸ್‌-ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ.

ಈ ವಾರ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

ಕಪಿತಾನಿಯೊ ಶಾಲೆಯ ಎದುರಿಗೆ ಮರೋಳಿ ಸೂರ್ಯನಾರಾಯಣ ದೇವಾಲಯದ ಆಡಳಿತ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ ಹಾಗೂ ಡಾ. ರಾಹುಲ್‌ ತೋನ್ಸೆ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ದೇರೆಬೈಲ್‌ ಚಚ್‌ರ್‍ ಹಾಲ್‌ ಮುಂಭಾಗದಲ್ಲಿ ಫಾದರ್‌ ಆಸ್ಟೀನ್‌ ಪ್ಯಾರಿಸ್‌ ಹಾಗೂ ಬೇಲ್ಜಿಯಂ ಪ್ರಜೆ ಆ್ಯನ್‌ ಕಾರ್ಡಿನಲ್‌ ಜಂಟಿಯಾಗಿ ಶ್ರಮದಾನ ಉದ್ಘಾಟಿಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.