ಮಂಡ್ಯ (ನ.03): ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ನಾರಾಯಣಗೌಡರ ನಡುವೆ ಲವ್‌ ಇದೆಯೇ ಹೊರತು ಲವ್‌ ಜಿಹಾದ್‌ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಮಾಷೆ ಮಾಡಿದರು.

ಕೆ.ಆರ್‌.ಪೇಟೆಯಲ್ಲಿ ನಡೆದ ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿ, ನಾರಾಯಣಗೌಡರು ಸಿಎಂ ಯಡಿಯೂರಪ್ಪ ಅವರಿಗೆ, ಬಿ.ವೈ.ವಿಜಯೇಂದ್ರಗೆ ಏನು ಮೋಡಿ ಮಾಡಿದ್ದಾರೋ ಗೊತ್ತಿಲ್ಲ ಎಂದರು. 

ನಮಗೆಲ್ಲಾ ಒಂದೊಂದೇ ಖಾತೆ. ಅವರಿಗೆ ಮಾತ್ರ ಮೂರು ಖಾತೆಗಳನ್ನು ಕೊಟ್ಟಿದ್ದಾರೆ. ಅದು ತವರಿನ ಪ್ರೀತಿಯೋ ಏನೋ ಗೊತ್ತಿಲ್ಲ ಎಂದರು.

ಡಿಸಿ ರೋಹಿಣಿ ಪರ ಪ್ರತಾಪ್ ಬ್ಯಾಟಿಂಗ್ : ಸವಾಲ್ ಹಾಕಿದ ಸಂಸದ .

ಕಳೆದ ಉಪ ಚುನಾವಣೆ ವೇಳೆ ನೀವು ನಮಗೆಲ್ಲಾ ತಲೆಮಾಂಸದ ಊಟ ಕೊಟ್ಟು ಚೆನ್ನಾಗಿ ನೋಡಿಕೊಂಡಿದ್ದೀರಿ. ಮುಂಬೈನಲ್ಲೂ ನಮಗೆ ಉತ್ತಮ ವ್ಯವಸ್ಥೆ ಮಾಡಿದ್ರಿ ಎಂದು ಕಾಲೆಳೆದರು.

ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.