ವಿಶ್ವನಾಥ್‌ಗೆ ಚುನಾವಣೆಗೆ ಸ್ಪರ್ಧಿಸ್ಬೇಡಿ ಅಂದಿದ್ರಾ ಸಿಎಂ..? ಖಾತೆ ಕೊಡಲು ತೊಡಕು
ಹುಣಸೂರಿನಿಂದ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸದಂತೆ ಬಿ. ಎಸ್. ಯಡಿಯೂರಪ್ಪ ಅವರು ವಿಶ್ವನಾಥ್‌ಗೆ ಹೇಳಿದ್ದು ನಿಜ. ಈಗ ಸೋತ ಕಾರಣ ಸಚಿವ ಸ್ಥಾನ ಕೊಡೋಕೆ ತೊಡಕುಗಳಿವೆ ಎಂದು ಶಾಸಕ ಸುಧಾಕರ್ ಹೇಳಿದ್ದಾರೆ.
ಮೈಸೂರು(ಜ.26): ಹುಣಸೂರಿನಿಂದ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸದಂತೆ ಬಿ. ಎಸ್. ಯಡಿಯೂರಪ್ಪ ಅವರು ವಿಶ್ವನಾಥ್‌ಗೆ ಹೇಳಿದ್ದು ನಿಜ. ಈಗ ಸೋತ ಕಾರಣ ಸಚಿವ ಸ್ಥಾನ ಕೊಡೋಕೆ ತೊಡಕುಗಳಿವೆ ಎಂದು ಶಾಸಕ ಸುಧಾಕರ್ ಹೇಳಿದ್ದಾರೆ.
ಸುತ್ತೂರಿನಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಚುನಾವಣೆಗೆ ನಿಲ್ಲಬೇಡಿ ಅಂತ ಹೇಳಿದ್ದು ನಿಜ. ನಾವು ಸಭೆ ನಡೆಸಿದರೆ ಅದು ಬಿಜೆಪಿ ಸಭೆ ಮಾತ್ರ ಆಗಿರುತ್ತೆ ಎನ್ನುವ ಮೂಲಕ ಶಾಸಕ ಡಾ.ಕೆ.ಸುಧಾಕರ್ ವಿಶ್ವನಾಥ್ ಅವರಿಂದ ಮತ್ತಷ್ಟು ಅಂತರ ಕಾಯ್ದುಕೊಂಡಿದ್ದಾರೆ.
'ಬಿಜೆಪಿಗೆ ವಲಸೆ ಹೋದ 17 ಜನಕ್ಕೆ ಸಚಿವ ಸ್ಥಾನ ಪಕ್ಕಾ'..
ವಿಶ್ವನಾಥ್ ಹಿರಿಯರು, ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ ಬಹಿರಂಗವಾಗಿ ಹೇಳಿಕೆ ನೀಡುವುದು ಒಳ್ಳೆಯದ್ದಲ್ಲ. ಇದರಿಂದ ಯಾರಿಗೂ ಅನುಕೂಲ ಆಗುವುದಿಲ್ಲ. ಪಕ್ಷದ ಆಂತರಿಕ ವೇದಿಕೆಯಲ್ಲಿ ಮಾತನಾಡಲು ಅವಕಾಶ ಇರುತ್ತೆ. ಸೂಕ್ತ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವನಾಥ್ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ಅಂತ ಸಿಎಂ ಹೇಳಿದ್ದರು. ನಿಮ್ಮ ಕ್ಷೇತ್ರದ ರಿಪೋರ್ಟ್ ಸರಿ ಇಲ್ಲ. ಸ್ಪರ್ಧೆ ಮಾಡಬೇಡಿ, ಬೇರೆಯವರಿಗೆ ಅವಕಾಶ ಮಾಡಿಕೊಡಿ. ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಸ್ಥಾನಮಾನ ನೀಡುತ್ತೇನೆ ಅಂತ ಸಿಎಂ ಪದೇಪದೇ ಹೇಳಿದ್ದರು. ಆದ್ರೆ ವಿಶ್ವನಾಥ್ ಅವರು ಕ್ಷೇತ್ರ ಬಿಟ್ಟುಕೊಡಲ್ಲ ಅಂತ ಸ್ಪರ್ಧೆ ಮಾಡಿದರು, ಈಗ ಸೋತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕಾನೂನು ತೊಡಕುಗಳಿವೆ ಎಂದು ಸುತ್ತೂರಿನಲ್ಲಿ ಡಾ.ಸುಧಾಕರ್ ಹೇಳಿದ್ದಾರೆ.
ಸರ್ಕಾರ ಉಳಿಸೋಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ್ರಾ ಮಾಧುಸ್ವಾಮಿ..?