ಕೊಪ್ಪಳ(ಮೇ.13): ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೋವಿಡ್‌ ಆಸ್ಪತ್ರೆಯನ್ನು ಪ್ರಾರಂಭಿಸಿರುವುದಕ್ಕೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿದ್ದ ಸಿಎಂ ಯಡಿಯೂರಪ್ಪ ಬುಧವಾರ ಖುದ್ದು ಕರೆ ಮಾಡಿ, ಮಾತನಾಡಿ, ಧನ್ಯವಾದ ಹೇಳಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ. ಇಡೀ ಜಗತ್ತಿಗೆ ಬಂದಿರುವ ಈ ಸಂಕಷ್ಟವನ್ನು ಎಲ್ಲರೂ ಒಗ್ಗೂಡಿಯೇ ಎದುರಿಸಬೇಕಾಗಿದೆ ಎಂದಿದ್ದಾರೆ.

ಪ್ರತಿಯಾಗಿ ಮಾತನಾಡಿದ ಶ್ರೀಗಳು, ನಾಡಿಗೆ ಸಂಕಷ್ಟ ಬಂದಿರುವಾಗ ಎಲ್ಲರೂ ಸೇರಿಯೇ ಕೆಲ​ಸ ಮಾಡೋಣ. ಇನ್ನೂ ಈ ಭಾಗದಲ್ಲಿ ಏನಾದರೂ ಮಾಡುವುದಿದ್ದರೇ ಹೇಳಿ ಖಂಡಿತ ಮಾಡುವುದಾಗಿ ಹೇಳಿದ್ದಾರೆ.

"

ಕೊಪ್ಪಳ ಗವಿಮಠದಿಂದ ಸುಸಜ್ಜಿತ ಕೋವಿಡ್‌ ಆಸ್ಪತ್ರೆ ಶುರು

ಗವಿಶ್ರೀಗಳಿಗೆ ಧನ್ಯವಾದ ಹೇಳಿದ ಡಿಕೆಶಿ

ಶ್ರೀ ಗವಿಮಠದಿಂದ ಕೋವಿಡ್‌ ಆಸ್ಪತ್ರೆಯನ್ನು ಪ್ರಾರಂಭಿಸಿರುವುದಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಕರೆ ಮಾಡಿ, ಧನ್ಯವಾದ ಹೇಳಿದ್ದಾರೆ. 

ಬುಧವಾರ ಕರೆ ಮಾಡಿ ಮಾತನಾಡಿದ ಅವರು, ನಿಜಕ್ಕೂ ಇದೊಂದು ದೊಡ್ಡ ಕೆಲಸ. ನೀವು ನಮಗೆ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ. ಇಂಥ ನಿಮ್ಮ ಕಾರ್ಯ ಶ್ಲಾಘನೀಯ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಗಳು, ಇದು ಎಲ್ಲರ ಜವಾಬ್ದಾರಿಯಾಗಿದೆ. ಇಂಥ ಸಂದರ್ಭದಲ್ಲಿ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona