ಬೈಎಲೆಕ್ಷನ್ ಬ್ಯಾಟಲ್: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇರೋದಿಲ್ಲ, ಬಿಎಸ್‌ವೈ
ಕಾಂಗ್ರೆಸ್ ಕ್ಷೇತ್ರದಲ್ಲಿ ವಿಷ ಬೀಜ ಬಿತ್ತುತ್ತಿದೆ| ಕಾಂಗ್ರೆಸ್ ಮುಳುಗಿ ಹೋದ ಪಕ್ಷ| ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಸಿಎಂ| ಇನ್ನೆರೆಡು ವರ್ಷಗಳಲ್ಲಿ ಕರ್ನಾಟಕ ಮಾದರಿ ರಾಜ್ಯ ಮಾಡುತ್ತೇನೆ: ಯಡಿಯೂರಪ್ಪ|
ರಾಯಚೂರು(ಏ.10): ಭಾಗ್ಯಲಕ್ಷ್ಮೀ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟಿದ್ದೇನೆ. ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್‌ಗೌಡ ಪಾಟೀಲ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ನೀರಾವರಿಗೆ ಆದ್ಯತೆ, ಬೆಳೆಗೆ ಬೆಂಬಲ ಬೆಲೆ, ಅಂಗವಿಕಲ ವೇತನ, ವೃದ್ಯಾಪ ವೇತನ ಮಾಡಿದ್ದೇನೆ. 33 ಸಾವಿರ ಕೋಟಿ ಮಹಿಳೆಯರಿಗೋಸ್ಕರ ಬಜೆಟ್‌ನಲ್ಲಿ ತೆಗೆದಿಟ್ಟಿದ್ದೇನೆ. ಇನ್ನೆರೆಡು ವರ್ಷಗಳಲ್ಲಿ ಕರ್ನಾಟಕ ಮಾದರಿ ರಾಜ್ಯ ಮಾಡುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು(ಶನಿವಾರ) ಜಿಲ್ಲೆಯ ಮಸ್ಕಿ ತಾಲೂಕಿನ ತುರ್ವಿಹಾಳನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಕ್ಷೇತ್ರದಲ್ಲಿ ವಿಷ ಬೀಜ ಬಿತ್ತುತ್ತಿದೆ. ಕಾಂಗ್ರೆಸ್ ಮುಳುಗಿ ಹೋದ ಪಕ್ಷವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮಸ್ಕಿ ಉಪಚುನಾವಣಾ ಅಖಾಡ: ದಲಿತರ ಮನೆಯಲ್ಲಿ ಸಿಎಂ ಉಪಹಾರ
ಸದ್ಯದಲ್ಲೇ ಭತ್ತ, ಜೋಳ ಖರೀದಿ ಕೇಂದ್ರಗಳನ್ನ ತೆರೆಯುತ್ತೇವೆ. ಚುನಾವಣೆ ಮುಗಿದ ಮೇಲೆ ತುರ್ವಿಹಾಳ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 1,500 ಕೋಟಿ ತೆಗೆದಿಟ್ಟಿದ್ದೇನೆ. ಬಸವಕಲ್ಯಾಣ ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಕೊಟ್ಟಿದ್ದೇನೆ. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಮಾಡಲಾಗಿದೆ. ಕಾಗಿನೆಲೆ ಪೀಠಕ್ಕೆ ಅಭಿವೃದ್ಧಿಗೆ 10 ಕೋಟಿ ಕೊಟ್ಟಿದ್ದೇನೆ. ಒಂದು ಓಟು ವ್ಯತ್ಯಯವಾಗದಂತೆ ನಮಗೆ ಮತ ನೀಡಿ. ನಾನು ಕೊಟ್ಟ ಭರವಸೆ ಯಾವತ್ತೂ ತಪ್ಪಿಲ್ಲ. ನಮ್ಮ ಅಭ್ಯರ್ಥಿಯನ್ನ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಸಿಎಂ ವಿನಂತಿಸಿಕೊಂಡಿದ್ದಾರೆ.
ಬಸವಕಲ್ಯಾಣ, ಬೆಳಗಾವಿ ಹಾಗೂ ಮಸ್ಕಿಯಲ್ಲಿ ಕಾಂಗ್ರೆಸ್ ಸೋಲುತ್ತದೆ. ಪ್ರತಾಪ್ ಗೌಡ ರಾಜೀನಾಮೆ ಕೊಟ್ಟಿದ್ದದ್ಕೆ ನಾನು ಸಿಎಂ ಆಗಿದ್ದೇನೆ. ನಿಮಗೇನು ಬೇಕು ಅದೆಲ್ಲವನ್ನ ಮಾಡಿಕೊಡುತ್ತೇನೆ. ಚುನಾವಣೆ ನಂತರ ವಿಜಯೋತ್ಸವ ಆಚರಿಸೋಣ ಎಂದ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.