Asianet Suvarna News Asianet Suvarna News

ವಿದ್ಯುತ್‌ ಚಾಲಿತ ವಾಹನ ಬಳಕೆಗೆ ಆದ್ಯತೆ: ಸಿಎಂ ಯಡಿಯೂರಪ್ಪ

ನಾಗರಿಕರು ವಿದ್ಯುತ್‌ ಚಾಲಿತ ವಾಹನ ಬಳಸಲು ಉತ್ಸುಕ| ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ಆಟೋಗಳ ಸಂಖ್ಯೆ ಹೆಚ್ಚಾಗಲಿದ್ದು, ಈ ಆಟೋಗಳಿಂದ ಪರಿಸರ ಮಾಲಿನ್ಯ ತಡೆಗೂ ಅನುಕೂಲ| ವಿದ್ಯುತ್‌ ಚಾಲಿತ ಆಟೋಗಳಿಗೆ 42 ಸಾವಿರ ಸಬ್ಸಿಡಿ| 

CM BS Yediyurappa Says Preference for Electric Vehicles grg
Author
Bengaluru, First Published Dec 23, 2020, 7:26 AM IST

ಬೆಂಗಳೂರು(ಡಿ.23):ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದ್ದು, ಬ್ಯಾಟರಿ ಸ್ವಾಪಿಂಗ್‌ ಘಟಕಗಳು ವೆಚ್ಚ ಹಾಗೂ ಸಮಯ ಉಳಿತಾಯ ಮಾಡಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದ ಆವರಣದಲ್ಲಿ ವರ್ಚುವಲ್‌ ಮಾಧ್ಯಮದ ಮೂಲಕ ‘ಸನ್‌ ಮೊಬಿಲಿಟಿ’ ಹೊರ ತಂದಿರುವ ಮೊಟ್ಟಮೊದಲ ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಬದಲಿಸುವ (ಸ್ವಾಪಿಂಗ್‌) ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನಾಗರಿಕರು ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಅದಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದರು. ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ಆಟೋಗಳ ಸಂಖ್ಯೆ ಹೆಚ್ಚಾಗಲಿದ್ದು, ಈ ಆಟೋಗಳಿಂದ ಪರಿಸರ ಮಾಲಿನ್ಯ ತಡೆಗೂ ಅನುಕೂಲವಾಗಲಿದೆ. ವಿದ್ಯುತ್‌ ಚಾಲಿತ ಆಟೋಗಳಿಗೆ .42 ಸಾವಿರ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ಈ ಸಂದರ್ಭದಲ್ಲಿ ಮಾತನಾಡಿದ ಸನ್‌ ಮೊಬಿಲಿಟಿ ಸಂಸ್ಥೆ ಉಪಾಧ್ಯಕ್ಷ ಉದಯ್‌ ಖೇಮ್ಕಾ ಹಾಗೂ ಚೇತನ್‌ ಮೈನಿ ಅವರು, ದೇಶದ ಮೊದಲ ವಿದ್ಯುತ್‌ ಚಾಲಿತ ಕಾರ್‌ ತಯಾರಿಕೆಯು ಕರ್ನಾಟಕ ಸರ್ಕಾರ ನೀಡಿದ ಬೆಂಬಲದಿಂದ ಸಾಧ್ಯವಾಯಿತು. ಇದಿಗ ಎಲೆಕ್ಟ್ರಿಕ್‌ ವಾಹನಗಳ ಸ್ವಾಪಿಂಗ್‌ ಘಟಕದ ಸ್ಥಾಪನೆಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಸಿಎಂ ಆಟೋ ಸವಾರಿ

ಬ್ಯಾಟರಿ ಸ್ವಾಪಿಂಗ್‌ ಘಟಕಗಳಿಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಟೋದಲ್ಲಿ ಸಂಚರಿಸಿ ಗಮನ ಸೆಳೆದರು. ವಿದ್ಯುತ್‌ ಚಾಲಿತ ಆಟೋವನ್ನು ಚಾಲಕಿಯೊಬ್ಬರು ಚಲಾಯಿಸಿದ್ದಲ್ಲದೇ ಗೃಹಕಚೇರಿ ಆವರಣವನ್ನು ಸುತ್ತು ಹಾಕಿದರು. ಮುಖ್ಯಮಂತ್ರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರು ಸಾಥ್‌ ನೀಡಿದರು. ಮತ್ತೊಂದು ಆಟೋದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಸಂಚರಿಸಿದರು.
 

Follow Us:
Download App:
  • android
  • ios