ಬಿಎಸ್‌ವೈ ರಾಜೀನಾಮೆ ಕೊಡಲಿ: ತವರಲ್ಲೇ ಸಿಎಂ ವಿರುದ್ಧ ಆಕ್ರೋಶ

ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ನೆರೆ ಪರಿಹಾರ ಹಣ ತರುವ ತಾಕತ್ತಿಲ್ಲ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಬಿಎಸ್‌ವೈ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

CM BS yediyurappa not capable of bringing money from central govt

ಶಿವಮೊಗ್ಗ(ಸೆ.13): ನೆರೆ ಪರಿಹಾರ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ಸಾಗರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಜನರು ಅತಿವೃಷ್ಟಿಯಿಂದ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಚಂದ್ರಯಾನ ನೋಡಲು ಬಂದರೆ ವಿನಾ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ತಾಕತ್ತು ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

'ಬಿಜೆಪಿ ಸರ್ಕಾರಕ್ಕೆ ದಂಡ ವಸೂಲಿಯಲ್ಲಿರೋ ಆಸಕ್ತಿ ಪರಿಹಾರ ನೀಡೋದ್ರಲಿಲ್ಲ'..!

ಬಿಎಸ್‌ವೈ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಕುಗ್ವೆ, ಅನಿತಾ ಕುಮಾರಿ, ಕಲಸೆ ಚಂದ್ರಪ್ಪ, ಜ್ಯೋತಿ, ಮೈಕೆಲ್‌ ಡಿಸೋಜ, ಗಣಪತಿ ಮಂಡಗಳಲೆ, ಮಹಾಬಲೇಶ್‌ ಕೌತಿ, ರವಿಕುಮಾರ್‌ ಹುಣಾಲಮಡಿಕೆ, ಪ್ರಭಾವತಿ ಚಂದ್ರಕಾಂತ್‌, ಸವಿತಾ ದೇವರಾಜ್‌ ಇನ್ನಿತರರು ಹಾಜರಿದ್ದರು.

ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

Latest Videos
Follow Us:
Download App:
  • android
  • ios