ಬೀದರ್(ಫೆ.07): ಬೀದರ್ ವಿಮಾನ ನಿಲ್ದಾಣವನ್ನ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಇಂದು(ಶುಕ್ರವಾರ) ಲೋಕಾರ್ಪನೆಗೊಳಿಸಿದ್ದಾರೆ. ರಿಬ್ಬನ್ ಕಟ್ ಮಾಡುವ ಮೂಲಕ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದ್ದಾರೆ.  ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿಬಿಂದ ಟ್ರೂ ಜೆಟ್ ವಿಮಾನದಲ್ಲಿ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ ಅವರು, ಉಡಾನ್ ಯೋಜನೆಯಲ್ಲಿ ಇದೊಂದೆ ವಿಮಾನ ಇಲ್ಲ, ಮುಂದಿನ ದಿನಗಳಲ್ಲಿ ಸಮಯ ಬದಲಾವಣೆ ಕೂಡ ಮಾಡಲಾಗುವುದು. ಬೆಳಿಗ್ಗೆ ಬೀದರ್‌ನಿಂದ ಹೊರಟು ಸಂಜೆ ವಾಪಸಾಗುವ ಹಾಗೆ ಸಮಯ ನಿಗದಿ ಮಾಡಲಾಗುವುದು. ಬೀದರ್ ಜಿಲ್ಲೆಗೆ ಉಡಾನ್ ಯೋಜನೆ ಕೊಟ್ಟಂತ ಪ್ರಧಾನಿ‌ ಮೋದಿ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಸಚಿವ ಪ್ರಭು ಚೌಹಾಣ್, ಕಾಂಗ್ರೆಸ್ ಮಾಜಿ ಸಚಿವರಾದ ಈಶ್ವರ್ ಖಂಡ್ರೆ, ರಹೀಂ ಖಾನ್, ರಾಜಶೇಖರ್ ಪಾಟೀಲ್, ಶಾಸಕ ಬಿ.ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.