ತವರು ಜಿಲ್ಲೆಗೆ ರೈಲು ಸೇವೆ ಸೇರಿ ಸಿಎಂ BSY ಗುಡ್ ನ್ಯೂಸ್

ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ಯೋಜನಗೆಳು ಮತ್ತು ಬೆಂಗಳೂರು ಸರ್ಬನ್‌ ರೈಲು ಹಾಗೂ ಮೆಟ್ರೋ ರೈಲುಗಳ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದರು. 

CM Bs Yediyurappa Discussed With union Minister Suresh Angadi Over New Railway Services

ಶಿವಮೊಗ್ಗ [ಸೆ.10]:  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ಯೋಜನಗೆಳು ಮತ್ತು ಬೆಂಗಳೂರು ಸರ್ಬನ್‌ ರೈಲು ಹಾಗೂ ಮೆಟ್ರೋ ರೈಲುಗಳ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಕೇಂದ್ರ ಮಂತ್ರಿ ಸುರೇಶ್‌ ಅಂಗಡಿ ಹಾಗೂ ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಶಿವಮೊಗ್ಗ ಔಟರ್‌ ರಿಂಗ್‌ ರಸ್ತೆ ಸಮೀಪ ರಸ್ತೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಜಾಗ ನೀಡಲು ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲ್ವೇ ಮಾರ್ಗದ ಆರಂಭಿಕ ಕೆಲಸಕ್ಕೆ ಒಪ್ಪಿಗೆ ಸೇರಿದಂತೆ ಶಿವಮೊಗ್ಗ-ಯಶವಂತಪುರ ಇಂಟರ್‌ ಸಿಟಿ ರೈಲು ಸಂಚಾರ ಚೆನೈವರೆಗೆ ವಿಸ್ತರಣೆಗೆ ತಾತ್ವಿಕ ಒಪ್ಪಿಗೆ, ಶಿವಮೊಗ್ಗ-ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ಹಾಗೂ ಶಿವಮೊಗ್ಗ ಮತ್ತು ಯಶವಂತಪುರ ನಡುವೆ ಸಂಚಾರ ಮಾಡುವ ಶತಾಬ್ಧಿ ರೈಲಿನ ಸಮಯ ಬದಲಾವಣೆ ಕುರಿತು ಚರ್ಚಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೀರೂರು-ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್‌ ಕಾಮಗಾರಿ ಸದ್ಯದಲ್ಲೇ ಆರಂಭಿಸಲು ಸೂಚನೆ ಮತ್ತು ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆ ಬಗ್ಗೆ ಚರ್ಚೆ ನಡೆಸಲಾಯಿತು. ಇದರೊಂದಿಗೆ ಮೆಟ್ರೋ ಕಾಮಗಾರಿಗಳಿಗೆ ರೈಲ್ವೇ ಇಲಾಖೆು ಸಹಕರಿಸುವಂತೆ ಮನವಿ ಮಾಡಲಾಯಿತು.

ಸಿಎಂ ಬಿಎಸ್‌ವೈ ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ಯೋಜನೆಗಳು ಮತ್ತು ಬೆಂಗಳೂರು ಸಬ್‌ ಅರ್ಬನ್‌ ರೈಲು ಹಾಗು ಮೆಟ್ರೋ ರೈಲುಗಳ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಕೇಂದ್ರ ಮಂತ್ರಿ ಸುರೇಶ್‌ ಅಂಗಡಿ ಹಾಗೂ ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

Latest Videos
Follow Us:
Download App:
  • android
  • ios