ಬೆಂಗಳೂರು[ಸೆ. 06]  ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತು ಮಹತ್ವದ ಸಭೆ ಶುಕ್ರವಾರ ನಡೆಯಿತು.

ಬೆಂಗಳೂರು ಜನಪ್ರತಿನಿಧಿಗಳು, ರಾಜ್ಯಸಭಾ, ಲೋಕಸಭಾ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.  ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ 8 ಜನ ಜೋನಲ್ ಅಧಿಕಾರಿಗಳನ್ನು ನೇಮಿಸಬೇಕು.  ಈಗಿರುವ ಇಂಜಿನಿಯರ್ ಗಳು ಸರಿಯಾದ ರೀತಿಯಲ್ಲಿ ಜನತೆಗೆ ಸ್ಪಂದಿಸುತ್ತಿಲ್ಲ. ಐಎಎಸ್ ಗ್ರೇಡ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಂಸದ ರಾಜೀವ್ ಚಂದ್ರಶೇಖರ್ ಒತ್ತಾಯ ಮಾಡಿದರು.

ರಾಜ್ಯ ಸರ್ಕಾರದ ಆದೇಶ, 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ರಾಜೀವ್ ಚಂದ್ರಶೇಖರ್ ಕೊಟ್ಟ ಸಲಹೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಮುಖ್ಯಕಾರ್ಯದರ್ಶಿ. 4  ಜನ ಅಧಿಕಾರಿಗಳನ್ನು ನೇಮಿಸಿ ಒಂದು ಕಮಿಟಿಯನ್ನು ರಚನೆ ಮಾಡಲಾಗುವುದು. ಈ ಕಮಿಟಿಯಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳನ್ನು ಸೇರಿಸಲಾಗುವುದು.  ಈ ಸಮಿತಿಯು ತಿಂಗಳಿಗೊಂದು ಸಭೆ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಬಹುದು ಎಂದು ತಿಳಿಸಿದರು.

"

ಕಸ ಸಮಸ್ಯೆ ಪರಿಹಾರಕ್ಕೆ ಸೂಚನೆ:  ಬೆಂಗಳೂರಿನಲ್ಲಿರುವ ಕಸದ ಸಮಸ್ಯೆಯನ್ನು ಪರಿಹಾರ ಮಾಡಲು ಆದ್ಯತೆ ನೀಡಬೇಕು. ವಿಭಾಗಾವಾರು 8 ವಲಯಕ್ಕೆ 4 ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಪರಿಶೀಲಿಸಿ.ಈ ಬಗ್ಗೆ ರಾಜೀವ್ ಚಂದ್ರಶೇಖರ್ ಕೊಟ್ಟಿರುವ ಸಲಹೆಯನ್ನು ಪರಿಗಣಿಸಿ ಎಂದು ಸಿಎಂ ಸೂಚನೆ ನೀಡಿದರು.

ಗೊಬ್ಬರಕ್ಕೆ ಸೆಸ್ ಹಾಕಿ:  ಕಸದಿಂದ ತಯಾರಾಗುವ ಗೊಬ್ಬರಕ್ಕೆ ಸೆಸ್ ಹಾಕುವಂತೆ ಶಾಸಕ ವಿಶ್ವನಾಥ ಒತ್ತಾಯ ಮಾಡಿದರು. ಜೊತೆಗೆ, ಗೊಬ್ಬರದ ಬೆಲೆಯನ್ನು ಇಳಿಸಬೇಕು ಅಂತ ಸಿಎಂಗೆ ಮನವಿಮಾಡಿದರು.

ಬೆಂಗಳೂರು ಅಭಿವೃದ್ಧಿ ಬಗ್ಗೆ ಮುಂದಿನ 15 ದಿನಗಳ ಬಳಿಕ ಸಭೆ ಮಾಡಬೇಕು. ಕ್ಲೀನ್ ಬೆಂಗಳೂರಿಗಾಗಿ ಹೆಚ್ಚಿನ ನೌಕರರನ್ನು ನೇಮಕ ಮಾಡಿಕೊಳ್ಳಬಹುದು. ರಸ್ತೆಯಲ್ಲಿನ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ‌ಒತ್ತಾಯ ಮಾಡಿದರು.