ಮೈಸೂರು(ಮೇ 12): ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಈ ಹಿಂದೆ ನಮಗೆ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಜಿಲ್ಲೆ ಮಾಡಲು ನಿಮಗೇನು ಅಧಿಕಾರ ಇದೆ ಸಾ.ರ.ಮಹೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಪ್ರಜ್ಞಾವಂತ ಭಾರತೀಯ ಪ್ರಜೆ ಹಾಗಾಗಿ ಕೇಳ್ತಾ ಇದ್ದೇನೆ. ನಿವ್ಯಾರು ಅಂತ ಪ್ರಶ್ನೆ ಮಾಡೋದು ಸರಿಯಲ್ಲ. ನೀವು ಬೆಂಬಲಿಸಬೇಕು. ಯಾದಗಿರಿ 2 ತಾಲ್ಲೂಕಿಗೆ ಜಿಲ್ಲೆಯಾಗಿದೆ. ರಾಮನಗರ ಸಹ 2 ತಾಲ್ಲೂಕಿಗೆ ಜಿಲ್ಲೆಯಾಗಿದೆ. ಮಾಜಿ ಸಚಿವರು ,ಶಾಸಕರಾಗಿ ನೀವು ನಮಗೆ ಬೆಂಬಲಿಸಬೇಕು ಎಂದಿದ್ದಾರೆ.

ಕೋವಿಡ್ ಸಮಸ್ಯ ಮುಗಿದ ನಂತರ ಹೋರಾಟ

ಕೋವಿಡ್ ಸಮಸ್ಯೆ ಮುಗಿದ ನಂತರ ಜಿಲ್ಲೆ ಮಾಡುವ ವಿಚಾರವಾಗಿ ಹೋರಾಟ ಪ್ರಾರಂಭಿಸುತ್ತೇವೆ. ಎಲ್ಲಾ ಅಭಿಮಾನಿಗಳು,ಸಂಘ ಸಂಸ್ಥೆಗಳು ಎಲ್ಲ ಜೊತೆ ಚರ್ಚೆ ಮಾಡಿ ಹೋರಾಟ ರೂಪಿಸುತ್ತಿದ್ದೇವೆ.

ಲಾಕ್‌ಡೌನ್‌ ನಿಯಮ ಉಲ್ಲಂಘಣೆ: ಪ್ರಶ್ನಿಸಿದ ಕಾರ್ಪೋರೇಟರ್‌ ಪತಿಗೆ ಸಗಣಿಯಿಂದ ಹಲ್ಲೆ

ಸಭೆಗಳನ್ನ ಮಾಡಿ ಹೋರಾಟ ಮಾಡುತ್ತೇವೆ. ಸಿಎಂ ಏನಾದ್ರು ನಾನು ಜಿಲ್ಲೆ ಮಾಡ್ತಿವಿ ಅಂದ್ರೆ ಹೋರಾಟವೇ ಬೇಕಾಗಿಲ್ಲ. ಬಳ್ಳಾರಿಯವರು ಅವರ ಅವಶ್ಯಕತೆಗೆ ತಕ್ಕಂತೆ ಕೇಳ್ತಾರೆ. ನಾವು ನಮ್ಮ ಅವಶ್ಯಕತೆಗೆ ಕೇಳ್ತಾ ಇದ್ದೀವಿ ಎಂದಿದ್ದಾರೆ.