ಬೆಂಗಳೂರು, (ಜುಲೈ.09): ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. 

ಇನ್ನು ಬೆಂಗಳೂರಿನಲ್ಲಿ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಹಾಗೂ ಚಿಕಿತ್ಸೆ ಸಿಗದೇ ಕೊರೋನಾ ಮಾಹಾಮಾರಿಗೆ ಉಸಿರು ಚೆಲ್ಲುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಕಿಲ್ಲರ್ ಕೊರೋನಾಕ್ಕೆ ಹೆದರಿ ಜನರು ಬೆಂಗಳೂರು ಬಿಟ್ಟು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ 8 ಪ್ರದೇಶಗಳನ್ನಾಗಿ ವಿಂಗಡಿಸಿ ಅವುಗಳಿಗೆ ತಲಾ ಒಬ್ಬರಂತೆ ಸಚಿವರಿಗೆ ಜವಾಬ್ದಾರಿ ನೀಡಲು ಮುಂದಾಗಿದೆ.

ಕೊರೋನಾ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..!

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಕೊರೋನಾ ಕಂಟ್ರೋಲ್‌ಗೆ ಮಾಸ್ಟರ್ ಪ್ಲಾನ್  ಹೂಡಿದ್ದಾರೆ. ಪ್ರಮುಖ 15 ಪ್ಲಾನ್ಸ್ ರೆಡಿ ಮಾಡಿದ್ದು, ಆ ಪ್ಲಾನ್‌ನ ಎಕ್ಸ್‌ ಕ್ಲೂಸಿವ್ ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಹಾಗಾದ್ರೆ ಪ್ಲಾನ್ ಏನೇನು ? 

1 1.5 ಲಕ್ಷ ವಾಲಂಟಿಯರ್ಸ್ ನೇಮಕ ... 
2 ಪ್ರತಿ ಬೂತ್ ಗೆ 15 ಟಾಸ್ಕ್ ಪೋರ್ಸ್ ಸದಸ್ಯರು ( ಬೆಂಗಳೂರಿನಲ್ಲಿ ಕನಿಷ್ಠ 10 ಸಾವಿರ ಬೂತ್ ಗಳಿವೆ)
3 ನನ್ನ ಆರೋಗ್ಯ ನನ್ನ ಬೂತ್ ಕಾನ್ಸೆಪ್ಟ್ ನಡಿ ಈ ಕಾರ್ಯ
4 ಪ್ರತಿ ಬೂತ್ ನಲ್ಲಿನ ಟಾಸ್ಕ್ ಪೋರ್ಸ್ ಟೀಮ್ ಜವಬ್ದಾರಿ ನೀಡಿರುವ ಪ್ರತಿಯೊಬ್ಬನ ಮನೆಗೆ ಹೋಗ್ತಾರೆ 
5 ಕೈಪಿಡಿ ಜಾಗ್ರತೆ ಮೂಡಿಸುವ ಮಾಹಿತಿಯುಳ್ಳ ಕರಪತ್ರ ಹಂಚಿಕೆ
6 ಪ್ರತಿ ಮನೆಗೆ ಆಯಾ ಬೂತ್ ನ ಟಾಸ್ಕ್ ಪೋರ್ಸ್ ಟೀಮನ ಮೊಬೈಲ್ ನಂಬರ್ ನೀಡಲಾಗತ್ತೆ.. 
7 ಅವರಿಗೆ ಆಸ್ಪತ್ರೆ ಸೇರಿಸುವ ಜವಬ್ದಾರಿ, ಆ ಆಂಬ್ಯಲೆನ್ಸ್ ಹಿಂದೆ ಟಾಸ್ಕ್ ಪೋರ್ಸ್ ಸದಸ್ಯ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಮಾಡಿ ಬರಬೇಕು
8 ಪ್ರತಿ ಭೂತ್ ನ ಟಾಸ್ಕ್ ಪೋರ್ಸ್ ಟೀಮ್ ಮೇಲ್ ಉಸ್ತುವಾರಿ ಕೆ ಎ ಎಸ್ ಆಫೀಸರ್
9 ಮಿನಿ ವಿಧಾನಸೌಧ ಮೂರನೇ ಮಹಡಿಯಲ್ಲಿ ವಾರ್ ರೂಮ್
10 ಯಲಹಂಕ ಬಳಿಯ ದಾಸನಕೊಪ್ಪ ಬಳಿ ಮತ್ತೊಂದು ವಾರ್ ರೂಮ್ ...
11 ಏನೇ ಮಾಹಿತಿ ಇದ್ದರು ಬೂತ್ ಮಟ್ಟದ ಟಾಸ್ಕ್ ಪೋರ್ಸ್ ಟೀಮ್, ವಾರ್ ರೂಮ್ ಗೆ ಮಾಹಿತಿ ನೀಡಬೇಕು
12 ವಾರ್ ರೂಮ್ ಸಲಹೆ ಮೇರೆಗೆ ಬೂತ್ ಲೆವೆಲ್ ನಲ್ಲಿ ಕಾರ್ಯರೂಪಕ್ಕೆ
13 ಆಶಾ ಕಾರ್ಯಕರ್ತರು, ಕಂದಾಯ ಅಧಿಕಾರಿಗಳು, ಎಇಇ, ವೈದ್ಯಕೀಯ ವಿದ್ಯಾರ್ಥಿಗಳಿಂದ ಮನೆ ಮನೆ ಭೇಟಿ ..
14 ಪಾಲಿಕೆ ಸದಸ್ಯರಿಗೆ ಕಿಟ್ ವಿತರಣೆ ಜವಬ್ದಾರಿ 
15  ಈಗಾಗಲೇ ಪ್ರತಿ ವಾರ್ಡ್ ಗೆ ಮೂವತ್ತು ಲಕ್ಷ ನೀಡಲಾಗಿದೆ.

ಅದರ ಸಂಪೂರ್ಣ ಜವಬ್ದಾರಿ ಆಯಾ ವಾರ್ಡ್ ಕಾರ್ಪೋರೇಟರ್ ನೋಡ್ಕೊಬೇಕು. ಈಗಾಗಲೇ ಈ ಮಾದಿರಯಲ್ಲಿ ಎಸ್ ಆರ್ ವಿಶ್ವನಾಥ್ ಬೂತ್ ಮಟ್ಟದ ಟಾಸ್ಕ್ ಪೋರ್ಸ್ ಟೀಮ್ ರಚನೆ ಮಾಡಿದ್ದು, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ಬಂದಿದೆ.