Namma Bengaluru: ಮಾನ್ಯತಾ ಬಳಿ ತ್ರಿಪಥ ಮೇತುವೆ ಲೋಕಾರ್ಪಣೆ, ಹೇಗಿದೆ?

* ಬೆಂಗಳೂರನ್ನು ಯೋಜನಾಬದ್ಧವಾಗಿ ಬೆಳೆಸಬೇಕಿದೆ: ಸಿಎಂ

* ನಾಲ್ಕು ದಿಕ್ಕುಗಳಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ಸೌಲಭ್ಯ ಒದಗಿಸುವುದು ಸವಾಲು

*  ಮಾನ್ಯತಾ ಟೆಕ್‌ ಪಾರ್ಕ್ ಸಮೀಪ ನಿರ್ಮಿಸಿರುವ ತ್ರಿಪಥ ಮೇಲ್ಸೇತುವೆ ಲೋಕಾರ್ಪಣೆ

CM Bommai inaugurates three-lane flyover connecting Embassy Manyata Business Park Bengaluru mah

ಬೆಂಗಳೂರು (ಫೆ. 16) ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ನಗರ ನಾಲ್ಕು ದಿಕ್ಕುಗಳಲ್ಲಿ ಬೆಳೆಯುತ್ತಿರುವುದರಿಂದ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಬೆಂಗಳೂರಿನ ಗತ ವೈಭವ ನೆನೆಸುವ ಹಾಗೂ ಭವಿಷ್ಯದತ್ತ ದಾಪುಗಾಲು ಹಾಕುತ್ತಿರುವ ನಗರವನ್ನಾಗಿ ನಿರ್ಮಿಸಲು ಯೋಜನಾಬದ್ಧವಾಗಿ ಬೆಳೆಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ನಗರದ ಮಾನ್ಯತಾ ಟೆಕ್‌ಪಾರ್ಕ್(Manayata Tech Park)  ಬಳಿಯ ಹೊರವರ್ತುಲ (Ring Road) ರಸ್ತೆಯಲ್ಲಿ ಬಿಬಿಎಂಪಿ ಸಹಭಾಗಿತ್ವದಲ್ಲಿ ಎಂಬೆಸ್ಸಿ ಸಂಸ್ಥೆಯಿಂದ ನಿರ್ಮಿಸಿರುವ ನಿರ್ಮಿಸಿರುವ ತ್ರಿಪಥ ಮೇಲ್ಸೇತುವೆ ಲೋಕಾರ್ಪಣೆ ಮಾಡಿ ಮಾತನಾಡಿದರು.

ಶಿಕ್ಷಣ, ಕೆಲಸ, ವ್ಯಾಪಾರಕ್ಕಾಗಿ ಬರುವ ಜನ ಇಲ್ಲಿಯೇ ನೆಲೆಸುತ್ತಾರೆ. ಬೆಂಗಳೂರು ಬೆಳವಣಿಗೆಯಾಗುತ್ತಲೇ ಇರುವ ನಗರವಾಗಿದೆ ಮುಂಬೈಯಂತಹ ನಗರಗಳು ಲಂಬವಾಗಿ ಬೆಳೆದುತ್ತಿರುವುದರಿಂದ ಒಳಚರಂಡಿ, ನೀರು ಸರಬರಾಜು ಮುಂತಾದವುಗಳ ಅಂತರ ಕಡಿಮೆಯಿದೆ. ಆದರೆ, ಬೆಂಗಳೂರಿನ ಸುತ್ತಲಿನ ಗ್ರಾಮಗಳನ್ನು ನಗರಗಳಾಗಿ ಪರಿವರ್ತಿಸಿ, ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯನ್ನಾಗಿ ಮಾಡಲಾಗಿದೆ. ಇದರಿಂದ ಸರ್ಕಾರ, ಬಿಬಿಎಂಪಿ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮಂಡಳಿ , ಬಿಡಿಎ, ಹಾಗೂ ಮತ್ತಿತರ ಏಜೆನ್ಸಿಗಳ ಮೇಲೆ ಹಾಗೂ ಬೆಂಗಳೂರಿನ ಜನತೆಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದರು.

IISc Bengaluru: ಐಐಎಸ್‌ಸಿಗೆ 425 ಕೋಟಿ ದೇಣಿಗೆ ಸಿಕ್ತು.. 800 ಹಾಸಿಗೆಗಳ ಆಸ್ಪತ್ರೆ ಸಿದ್ಧವಾಗುತ್ತದೆ

ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ: ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಒಂದು ಸವಾಲಾಗಿದೆ. ಪೆರಿಫೆರಲ್‌ ರಿಂಗ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹೆಬ್ಬಾಳ ಮೇಲ್ಸೇತುವೆ ದೊಡ್ಡದು ಮಾಡುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲಾಗಿದೆ. ಇದರಿಂದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಬಹುದಾಗಿದೆ. ಬಿಎಂಆರ್‌ಸಿಎಲ್‌ ಹೆಬ್ಬಾಳದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ (Namma Metro) ಕಾಮಗಾರಿ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಸಂಸದ ಶಿವಕುಮಾರ್‌ ಉದಾಸಿ, ಎಂಬೆಸ್ಸಿ ಸಂಸ್ಥೆಯ ಅಧ್ಯಕ್ಷ ಜಿತೇಂದ್ರ ವೀರ್ವಾನಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ವಾಸಯೋಗ್ಯ ನಗರ: ಬೆಂಗಳೂರಿನ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ರು.ಗಳನ್ನು ನೀಡಲಾಗಿದೆ. 1500 ಕೋಟಿ ರೂ.ಗಳನ್ನು ಒಳಚರಂಡಿ ವ್ಯವಸ್ಥೆಗೆ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತಮವಾದ ವಾಸಯೋಗ್ಯ ನಗರವಾಗಲಿದೆ. ನಗರ ಯೋಜನೆಯಲ್ಲಿನ ಎಲ್ಲ ಅಡಚಣೆಗಳನ್ನು, ಸವಾಲುಗಳನ್ನು ನಿವಾರಿಸಿ ಬೆಂಗಳೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮುಂಬೈ, ಚೆನ್ನೈ, ಹೈದ್ರಾಬಾದ್‌ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಸಿಗ್ನಲ್‌ ರಹಿತ 12 ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಐಟಿಬಿಟಿ ಬೆಂಗಳೂರು: ಐಟಿ ನಗರವಾಗಿರುವ ಬೆಂಗಳೂರು ಇನ್ನು ಮುಂದೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ನವೀಕೃತ ಇಂಧನ, ಸೆಮಿಕಂಡಕ್ಟರ್‌ ಸೇರಿದಂತೆ ಎಲ್ಲ ಆಧುನಿಕ ತಂತ್ರಜ್ಞಾನ ಒಳಗೊಂಡಂತಹ ನಗರವಾಗಬೇಕು. ನಗರದಲ್ಲಿ ಎಚ್‌ಎಎಲ್‌, ಬಿಇಎಲ್‌, ಎಚ್‌ಎಂಟಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಉತ್ತಮ ಎಂಜಿನಿಯರಿಂಗ್‌ ಉಪಕರಣಗಳ ಉತ್ಪಾದನೆಗಳಾಗುತ್ತಿದೆ. ಅಲ್ಲದೆ, ಪ್ರಸ್ತುತ ರಕ್ಷಣಾವಲಯ, ಇಸ್ರೋ, ಬಯೋಟೆಕ್‌, ಆಹಾರ, ಏರೋಸ್ಪೇಸ್‌ ಸೇರಿ ಹಲವಾರು ಕ್ಷೇತ್ರಗಳ 180 ಸಂಶೋಧನಾ ಕೇಂದ್ರಗಳಿವೆ. ಬೆಂಗಳೂರಿನ ಭದ್ರ ಭವಿಷ್ಯಕ್ಕೆ ಇವುಗಳನ್ನು ಬಂಡವಾಳವಾಗಿಸಿಕೊಳ್ಳಬೇಕು ಎಂದರು.

ಸುಮಾರು 183 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಿಂಗ್‌ ರಸ್ತೆ ಮತ್ತು ಮಾನ್ಯತಾ ಟೆಕ್‌ ಪಾರ್ಕ್ನ ಮೇಲ್ಸೇತುವೆ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಖಾಸಗಿ ಸಂಸ್ಥೆಗಳ ಇಂತಹ ಉಪಕ್ರಮ ನಗರಕ್ಕೆ ಬಹಳ ಸಹಕಾರಿಯಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಎಂಬೆಸ್ಸಿ ಗ್ರೂಪ್‌ಗೆ ಅಭಿನಂದನೆಗಳನ್ನು ತಿಳಿಸಿದರು.

 

Latest Videos
Follow Us:
Download App:
  • android
  • ios