Chitradurga ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ  ಏತ ನೀರಾವರಿ ಯೋಜನೆ ಗೆ ಸಿ ಎಂ ಬಸವರಾಜ್ ಬೊಮ್ಮಾಯಿ ಚಾಲನೆ.

Cm bommai foundation-stone for Construction of Water Resources Projects in Chitradurga  gow

ಚಿತ್ರದುರ್ಗ  (ಜೂನ್ 4): ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ  ಏತ ನೀರಾವರಿ ಯೋಜನೆ ಗೆ ಸಿ ಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ‌. ಹರಿಯಬ್ಬೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ,‌ ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ನಿಮ್ಮನ್ನೆಲ್ಲಾ ನೋಡಿ ಬಹಳ ಸಂತೋಷವಾಗಿದೆ. ಶ್ರಮಜೀವಿಗಳ ನಾಡಿಗೆ ನಾನು ಬಂದಿದ್ದೇನೆ. ನಿಮ್ಮ ಶ್ರಮಕ್ಕೆ ನಿಮ್ಮ ಬೆವರಿಗೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು. ರೈತರ ಬೆವರಿಗೆ ಗಂಗೆ ಹನಿ ಸೇರಿದರೆ ಬಂಗಾರದ ಬೆಳೆ ಬರುತ್ತದೆ. ಮಧ್ಯಕರ್ನಾಟಕದ ಎರಡು ನೀರಾವರಿ ಯೋಜನೆಗಳು ರೈತರ ಕನಸನ್ನು ನನಸು ಮಾಡಿದೆ. ಭದ್ರಾ ಮೇಲ್ದಂಡ ಯೋಜನೆ ಎತ್ತಿನಹೊಳೆ ಯೋಜನೆ ಈ ಎರಡು ಯೋಜನೆಗಳನ್ನು ಪ್ರಾರಂಭಿಸುವ ಸೌಭಾಗ್ಯ ನನಗೆ ಸಿಕ್ಕಿದೆ. 

 

ನಿಜಲಿಂಗಪ್ಪನವರ ಕಾಲದಿಂದ ಈ ಯೋಜನೆಗಳಿವೆ ಆದ್ರೆ ಮುಕ್ತಾಯವಾಗಿಲ್ಲ. ಈ ಪ್ರಮುಖ ಬೃಹತ್ ಯೋಜನೆಗೆ ಎಲ್ಲಾ ರೀತಿಯ ಮಂಜೂರಾತಿಯನ್ನು ಕೊಟ್ಟು, ಪರಿಸರ ಅರಣ್ಯ ಇಲಾಖೆ ಅನುಮತಿ ಪಡೆದು ಈ ಯೋಜನೆ ಪ್ರಾರಂಭಿಸಿದೆ. ಹಿರಿಯೂರಿನ ರೈತರು 542 ದಿವಸ ವಿವಿ ಸಾಗರ  ನೀರಿಗಾಗಿ ಹೋರಾಟ ನಡೆಸಿದ್ದಾರೆ. ಹೆಣ್ಣುಮಕ್ಕಳು ಸಹ ದೊಡ್ಡ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರೈತರು ರೊಚ್ಚಿಗೆದ್ದಿದ್ದಾರೆ ಎಂದು ನನ್ನನ್ನು ಬರದಂತೆ ತಡೆದ್ರು.ಆದ್ರು ನಾನು ಬಂದೆ ವಾಣಿವಿಲಾಸಕ್ಕೆ ಹೇಗೆ ನೀರಬೇಕೆಂದು ವಿಚಾರ ಮಾಡಿದೆ.ಸುಮಾರು 3 ಗಂಟೆ ಚರ್ಚೆ ಮಾಡಿದೆ.ನಾನು ಮಂತ್ರಿಯಾಗಿ ಅಂದು ಭರವಸೆ ಕೊಟ್ಟು 15 ದಿನಗಳೊಳಗೆ ಆದೇಶ ಮಾಡಿದೆ.

Belagavi; RCF ಕಂಪನಿಯ 900 ಚೀಲ ರಸಗೊಬ್ಬರ ಕದ್ದಿದ್ದವರು ಅರೆಸ್ಟ್

ಅದೇ ನೀರು ಇಂದು ಹರಿಯುತ್ತಿದೆ. ಅಪ್ಪರ್ ಭದ್ರಾ ಪ್ರೊಜೆಕ್ಟ್ ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಆರ್ಶಿವಾದ ಆಗಿದೆ. ಕೇಂದ್ರದಿಂದ ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಆಗಿದೆ.ನಿಮ್ಮಲ್ಲರ ಪರವಾಗಿ ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುವೆ. 

ಧರ್ಮಪುರ ಕೆರೆಯಿಂದ ಏಳು ಕೆರೆಗೆ ತುಂಬಿಸುವ ಯೋಜನಗೆ 50 ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗೆ ಅನುಮೋದನೆ ಕೊಡುತ್ತೇನೆ. ಗೂಳಿಹಟ್ಟಿ ಶೇಖರ್ , ಪೂರ್ಣಿಮಾ , ತಿಪ್ಪಾರೆಡ್ಡಿ ಈ ಭಾಗದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ

ಈ ಭಾಗಕ್ಕೆ ಮೆಡಿಕಲ್ ಕಾಲೇಜ್ ಸೆಂಕ್ಷನ್ ಆಗಿದೆ ಅದನ್ನು ನಾನೇ ಬಂದು ಉದ್ಘಾಟನೆ ಮಾಡುತ್ತೆನೆ.ತುಮಕೂರು ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಕ್ಕೆ ಅನುಮೋದನೆ ಸಿಕ್ಕಿದೆ. ಇದು ಸಹ  50 ವರ್ಷಗಳ ಹೋರಾಟವಾಗಿದ್ದು ನಮ್ಮ ಕಾಲದಲ್ಲಿ ಮುಕ್ತಾಯವಾಗಲಿದೆ.

ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ 1000 ಎಕರೆ ಭೂಮಿಯನ್ನು ಗುರುತಿಸಿದ್ದು ವಿಶೇಷ ಕೈಗಾರಿಕಾ ವಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ‌ ನೀಡಲಾಗಿದ್ದು ಹಲವಾರು ಹಳ್ಳಿಗಳಿಗ ಮನೆ ಮನೆ ಗಂಗೆ ಹರಿದುಬರಲಿದೆ ಎಂದರು.

Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ

ಒಂದು ಸರ್ಕಾರದಲ್ಲಿ ಜನರು ಪಾಲುದಾರರಾಗಬೇಕು.‌ಆಗ ಮಾತ್ರ ನಿಜವಾದ ಅಭಿವೃದ್ದಿಯಾಗುತ್ತದೆ.ಸಣ್ಣ ಸಣ್ಣ ಹಳ್ಳಿಯವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ.‌ಇದು ಜ್ನಾನದ ಶತಮಾನ ವಾಗಿದ್ದು ದುಡ್ಡೇ ದೊಡ್ಡಪ್ಪ ಹೋಗಿ ದುಡಿಮೆಯೇ ದೊಡ್ಡಪ್ಪ ಆಗಿದೆ.

ಆರೋಗ್ಯ ಭಾಗ್ಯ, ಪಿಹೆಚ್ ಸಿ ಮೇಲ್ದರ್ಜೆಗೆ ಏರಿಸುವುದು, ಶಿಕ್ಷಣದ ಸೌಲಭ್ಯಗಳನ್ನು ವಿಸ್ತರಿಸುವುದು, ಪ್ರತಿ ತಾಲ್ಲೂಕ್‌ಮಟ್ಟದಲ್ಲಿ ಆರೋಗ್ಯ ಶಿಬಿರ, ಕಣ್ಣು ತಪಾಸಣೆ ಮಾಡಿ ಪುಕ್ಕಟೆ ಕನ್ನಡಕ, ಕಿವಿ ಶಸ್ತ್ರಚಿಕಿತ್ಸೆ ಮಾಡಿ 5 ಲಕ್ಷದವರೆಗು ಇಯರಿಂಗ್ ಸಾಧನೆ, ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ , ಡಯಾಲಿಸಿಸ್ ಗೆ ವ್ಯವಸ್ಥೆಗೆ ವಿಶೇಷ ಕ್ರಮ ಕೈಗೊಂಡಿದ್ದೇವೆ

ಯುವಕರಿಗೆ ಉದ್ಯೋಗ ಕೊಟ್ಟು‌ ನಿರುದ್ಯೋಗ ಹೋಗಲಾಡಿಸಲು  500  ಕೋಟಿ ಮೀಸಲಿಟ್ಟಿದ್ದೇವೆ.ಮಹಿಳಾ ಸಂಘಗಳಿಗೆ ವಿಶೇಷ ಸಾಲ ಯೋಜನೆ ಮಾಡಿದ್ದೇವೆ. ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುಬೇಕು. ಗೌರವಯುತ ಬದುಕಬೇಕು ಎಂದು ಹಲವಾರು ಕ್ರಮಗಳನ್ನು ಮಾಡಿದ್ದೇನೆ.

ಭೂಮಿ ಎಷ್ಟಿದೆ ಅಷ್ಟೇ ಇದೆ ಆದ್ರೆ ಅದರ ಮೇಲೆ ಅವಲಂಭನೆ ಜಾಸ್ತಿ ಇದೆ. ಕೆಲವರಾದ್ರು ಭೂಮಿ ಬಿಟ್ಟು ರೈತ ಮಕ್ಕಳಿಗೆ ವಿದ್ಯೆ ಕೊಡಲು ನಾನು ವಿಧ್ಯಾನಿಧಿ ಪ್ರಾರಂಭಿಸಿದೆ.ಈ ವರ್ಷ 16 ಲಕ್ಷ  ವಿದ್ಯಾರ್ಥಿಗಳಿಗೆ ಯೋಜನೆ ಲಾಭ ಕೊಡುವ ಗುರಿ ಇದೆ.

ಎಸ್ಸಿ ಎಸ್ಟಿ ಜನಕ್ಕೆ 75 ಯುನಿಟ್ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ಇದು ಸಧ್ಯದಲ್ಲೇ ಜಾರಿಗೊಳ್ಳಲಿದೆ ಎಂದರು. ಕನ್ನಡಾಂಭೆ ಕಾಮಧೇನು ದುಡಿಮೆ ಗೆ ತಕ್ಕ ಪ್ರತಿಫಲ ಇಲ್ಲಿದೆ. ಮುಂದಿನ ಚುನಾವಣೆಯಲ್ಲಿ ನಮಗೆ ಹೆಚ್ಚು ಶಕ್ತಿ ನೀಡಿ ಎಂದರು.

Latest Videos
Follow Us:
Download App:
  • android
  • ios