Asianet Suvarna News Asianet Suvarna News

ಕಾಫಿನಾಡಿನಲ್ಲಿ ಸಿಎಂ: ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರು ನಗರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮಾಡಿದರು. ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಿಎಂ 300 ಕೋಟಿಗೂ ಅಧಿಕ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮಾಡಿದರು.

cm basavaraj bommai visit chikkamagaluru gvd
Author
Bangalore, First Published May 19, 2022, 12:35 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 
 
ಚಿಕ್ಕಮಗಳೂರು (ಮೇ.19):
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಚಿಕ್ಕಮಗಳೂರು (Chikkamagaluru) ನಗರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮಾಡಿದರು. ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಿಎಂ 300 ಕೋಟಿಗೂ ಅಧಿಕ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮಾಡಿದರು.

ಹವಾಮಾನ ವೈಪರೀತ್ಯದಿಂದಾಗಿ ರಸ್ತೆ ಮೂಲಕ ಆಗಮಿಸಿದ ಸಿಎಂ: ಹವಾಮಾನ ವೈಪರೀತ್ಯದಿಂದಾಗಿ ಮುಖ್ಯಮಂತ್ರಿಗಳು ರಸ್ತೆ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದರು. ಬೆಳಗ್ಗೆಯೇ ನಡೆಯಬೇಕಾಗಿದ್ದ ಕಾರ್ಯಕ್ರಮ ಮಧ್ಯಾಹ್ನ ನಡೆಯಿತು. ನಗರದ ಎಐಟಿ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿಎಂ ಬವರಾಜ ಬೊಮ್ಮಾಯಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಚಿಕ್ಕಮಗಳೂರು ವಿಧಾನ ಕ್ಷೇತ್ರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ನಡೆದ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು.ವಸತಿ ಶಾಲೆಗಳು, ನೂತನ ಪ್ರವಾಸಿ ಮಂದಿರ ಸೇರಿದಂತೆ ರಸ್ತೆ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು. ನಂತರ ಮಾತಾಡಿದ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವ ದಾಗಿ ಸಿಎಂ‌ ಬಸರಾಜ ಬೊಮ್ಮಾಯಿ ತಿಳಿಸಿದರು.

ಚಿಕ್ಕಮಗಳೂರು ಕ್ಷೇತ್ರಕ್ಕೆ ಬಪರ್ ಕೊಡುಗೆ, ಬುಧವಾರ ಚಾಲನೆ ನೀಡಲಿರುವ ಬೊಮ್ಮಾಯಿ

ಮಳೆ ಹಿನ್ನೆಲೆ  ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ: ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಪೂರ್ವಬಾವಿಯಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಕೊಂಚ ತೊಂದರೆಯಾಗಿದೆ. ಈಗಾಗಲೆ ಕೆಲವು ಏರಿಯಾಗಳಿಗೆ ಭೇಟಿ ನೀಡಿದ್ದೇನೆ. ಉಳಿದಂತೆ ವಾಟರ್ ಪಂಪ್‌ನಿಂದ ನೀರು ತೆರವು ಕಾರ್ಯ ನಡೆಯುತ್ತಿದೆ ಎಂದರು. ಮುಂದಿನ ಎರಡು ದಿನ ಮಳೆ ಮುನ್ಸೂಚನೆ ಇರುವುದರಿಂದ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. 

ಹಾಗಾಗಿ ಎನ್ಡಿಆರ್ಫ್ ಹೋಮ್ಗಾರ್ಡ್ಸ್, ಸಿವಿಲ್ಡಿಫ್ಸ್ ತಂಡಗಳು ಕೆಲಸ ಮಾಡುತ್ತಿದ್ದಾರೆ. ಒಂದು ಭಾಗದಲ್ಲಿ ಭೇಟಿ ನೀಡಿ ಬಂದಿದ್ದೇವೆ ಮತ್ತೊಂದು ಏರಿಯಾದವರು ಅಲ್ಲಿಗೆ ಬನ್ನಿ ಎಂದಿದ್ದರು. ಈಗಾಗಲೇ ಸಮಸ್ಯೆಗಳನ್ನು ಆರ್ಥೈಸಿಕೊಂಡಿದ್ದೇವೆ. ಬಿಬಿಎಂಪಿಯವರು ಈಗಾಗಲೆ ಕೆಲಸ ಮಾಡುತ್ತಿದ್ದಾರೆ. ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು. ಮಳೆಯಾದಾಗ ಮುಂಗಾರಿಗೆ ರೈತರು ಕೃಷಿ ಚಟುವಟಿಕೆಗೆ ತಯಾರಿ ಮಾಡಿಕೊಳ್ಳುತ್ತಾರೆ. ಗೊಬ್ಬರ ದಾಸ್ತಾನು ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೃಷಿ ಸಚಿವರಿಗೂ ಸೂಚನೆ ನೀಡಿದ್ದೇನೆ. 

ಅಗತ್ಯವಿರುವ ಡಿಎಪಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಅದನ್ನು ತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಈ ಬಾರಿ ನಮ್ಮ ಕೋಟಾ ನೀಡಿದ್ದಾರೆ ಆದರೆ ಸಮಯಕ್ಕೆ ಸರಿಯಾಗಿ ಗೊಬ್ಬರ ಮುಟ್ಟುವ ರೀತಿ ಲಾಜಿಸ್ಟಿಕ್ ವಕಟ್ ಮಾಡಬೇಕು ಆ ಕಾರ್ಯ ಮಾಡಲಾಗುತ್ತದೆ ಎಂದರು. ಮೂಡಿಗೆರೆ ಕ್ಷೇತ್ರದಲ್ಲಿ ಹಿಂದೆ ಅತೀವೃಷ್ಟಿಯಾದ ಸಂದರ್ಭ ನೈಜ ಸಂತ್ರಸ್ಥರಿಗೆ ಇದೂ ವರೆಗೂ ಪರಿಹಾರ ಸಿಕ್ಕಿಲ್ಲ ಎಂಬ ಪ್ರಶ್ನೆಗೆ ಅದರ ವರದಿ ಪಡೆದು ವಿಶೇಷವಾಗಿ ಪರಿಗಣಿಸಿ ನ್ಯಾಯ ಸಮ್ಮತವಾಗಿ ಸ್ಪಂದಿಸುತ್ತೇನೆ. ಬೆಳಗಾಂ ಸೇರಿದಂತೆ ರಾಜ್ಯದ ಎರಡ್ಮೂರು ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಇತ್ತು ಅದನ್ನು ಪರಿಹರಿಸಲಾಗಿದೆ. 

Chikkamagaluru ನಗರಸಭೆ ಕಿರುಕುಳಕ್ಕೆ ಬೇಸತ್ತು ತನ್ನ ಗಾಡಿಗೆ ಬೆಂಕಿ ಇಟ್ಟ ವ್ಯಾಪಾರಿ!

ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದರು. ಚಿಕ್ಕಮಗಳೂರು ಬರಬೇಕೆಂದು ಬಹಳ ಆಸೆ ಇತ್ತು ಎರಡ್ಮೂರು ಬಾರಿ ಕೋವಿಡ್, ಮಳೆ ಬೇರೆ ಬೇರೆ ಕಾರಣಕ್ಕೆ ಬರಲಾಗಲಿಲ್ಲ. ಇಂದು ಮಳೆ ಇದ್ದರೂ ಕೂಡ ಮತ್ತೆ ತಪ್ಪಿಸಿಕೊಳ್ಳುವುದು ಸರಿಯಲ್ಲ ಎಂದು ಬಂದಿದ್ದೇವೆ. ತಡವಾಗಿ ಬಂದರೂ ಎಲ್ಲರೂ ಇದ್ದು ಸ್ವಾಗತಿಸಿದ್ದಾರೆ. ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಏನೆಲ್ಲಾ ಭರವಸೆ ನೀಡಿದ್ದೇನೆ ಖಂಡಿತಾ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸಿ.ಟಿ.ರವಿ, ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ,ಬೆಳ್ಳಿ ಪ್ರಕಾಶ್, ಎಂಎಲ್ಸಿ ಪ್ರಾಣೇಶ್, ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಉಪಸ್ಥಿತರಿದ್ದರು.

Follow Us:
Download App:
  • android
  • ios