ಬಿಡ​ದಿ​ಯಲ್ಲಿ ಟೌನ್‌ಶಿಪ್‌ ನಿರ್ಮಿಸಿ ಬಿಡದಿಗೆ ಮೆಟ್ರೋ ಬಗ್ಗೆ ಚಿಂತನೆ: ಸಿಎಂ ಬೊಮ್ಮಾಯಿ

ಬೆಂಗಳೂರಿನ ಸುತ್ತ ನಾಲ್ಕು ನವ ನಗರಗಳ ನಿರ್ಮಾಣ ತಮ್ಮ ಕನಸು ಎಂದು ಮುಖ್ಯಮಂತ್ರಿಗಳು ಈ ಪೈಕಿ ಒಂದು ನಗರ ಬಿಡದಿಯ ಬಳಿ ನಿರ್ಮಿಸುವುದು ತಮ್ಮ ಕನಸು. ಅಲ್ಲಿ ವಸತಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಒಳಗೊಂಡಂತೆ ಸಮಗ್ರವಾದ ನಗರ ನಿರ್ಮಾಣದ ಕಾರ್ಯ ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಎಂದ ಸಿಎಂ ಬೊಮ್ಮಾಯಿ. 

CM Basavaraj Bommai Talks Over Namma Metro grg

ರಾಮ​ನ​ಗರ(ಮಾ.28): ಬಿಡದಿಯಲ್ಲಿ ಸುಸಜ್ಜಿತ ಟೌನ್‌ ಶಿಪ್‌ ನಿರ್ಮಾ​ಣದ ಜೊತೆಗೆ ನಮ್ಮ ಮೆಟ್ರೋ ಅನ್ನು ವಿಸ್ತ​ರಣೆ ಮಾಡಲು ಉದ್ದೇ​ಶಿ​ಸ​ಲಾ​ಗಿದೆ ಎಂದು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಹೇಳಿ​ದರು. ನಗ​ರದ ಹೊರ ವಲ​ಯದ ಅರ್ಚ​ಕ​ರ​ಹ​ಳ್ಳಿಯ ರಾಜೀವ್‌ ಗಾಂಧಿ ಆರೋಗ್ಯ ವಿವಿ ಆವ​ರ​ಣ​ದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ , ಸರ್ಕಾರಿ ವೈದ್ಯ​ಕೀಯ ಕಾಲೇಜು, ಆಸ್ಪ​ತ್ರೆ ಹಾಗೂ ವಿವಿಧ ಅಭಿ​ವೃದ್ಧಿ ಯೋಜ​ನೆ​ಗ​ಳಿಗೆ ಭೂಮಿ ಪೂಜೆ ನೆರ​ವೇ​ರಿ​ಸಿ ಮಾತ​ನಾ​ಡಿ​ದರು.

ಬೆಂಗಳೂರಿನ ಸುತ್ತ ನಾಲ್ಕು ನವ ನಗರಗಳ ನಿರ್ಮಾಣ ತಮ್ಮ ಕನಸು ಎಂದು ಮುಖ್ಯಮಂತ್ರಿಗಳು ಈ ಪೈಕಿ ಒಂದು ನಗರ ಬಿಡದಿಯ ಬಳಿ ನಿರ್ಮಿಸುವುದು ತಮ್ಮ ಕನಸು. ಅಲ್ಲಿ ವಸತಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಒಳಗೊಂಡಂತೆ ಸಮಗ್ರವಾದ ನಗರ ನಿರ್ಮಾಣದ ಕಾರ್ಯ ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಎಂದರು.

ನಮ್ಮ ಮೆಟ್ರೋ ವೈಟ್‌‘ಫೀಲ್ಡ್‌’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ

ಬೆಂಗಳೂರಿಗೆ ರಾಮನಗರ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದ ಮೂಲಕ ಸಂಪರ್ಕ ಕಲ್ಪಿ​ಸುವ ಚಿಂತನೆ ನಡೆ​ದಿದೆ. ಬಿಡದಿ ಮತ್ತು ಮಾಗಡಿ ಪಟ್ಟಣಗಳಿಗೆ ಮೆಟ್ರೋ ರೈಲು ಜೋಡಿಸಲು ತಮ್ಮ ಸರ್ಕಾರದ ಉದ್ದೇಶವಿದೆ ಎಂದರು.

ಕಾಂಗ್ರೆಸ್‌ ನಾಯ​ಕ​ರಿಗೆ ನಾಚಿಕೆ ಆಗೋ​ದಿ​ಲ್ಲವಾ - ಬಸ​ವ​ರಾಜ ಬೊಮ್ಮಾ​ಯಿ

ರಾಮ​ನ​ಗ​ರ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾ​ರ​ದಲ್ಲಿ ಕ್ರೆಡಿಟ್‌ ತೆಗೆ​ದು​ಕೊ​ಳ್ಳಲು ಪ್ರಯ​ತ್ನಿ​ಸಿದ ಕಾಂಗ್ರೆಸ್‌ ನಾಯ​ಕರ ವಿರುದ್ಧ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ವಾಗ್ದಾಳಿ ನಡೆ​ಸಿ​ದ​ರು.

14 ಸಾವಿರ ಕೋಟಿ ರು. ವೆಚ್ಚದಲ್ಲಿ ಬೆಂಗಳೂರು-ಮೈಸೂರು ರಾಷ್ಟಿ್ರಯ ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗಿದೆ. ಈ ಯೋಜನೆಗೆ 2014ರಲ್ಲಿ ಡಿಪಿಆರ್‌ ಸಿದ್ದವಾಯಿತು. ಆಗ ಅಧಿ​ಕಾ​ರ​ದಲ್ಲಿ ನೀವಿದ್ದಿರಾ ಎಂದು ಕಾಂಗ್ರೆಸ್‌ ನಾಯ​ಕ​ರನ್ನು ಪ್ರಶ್ನಿ​ಸಿ​ದ ಮುಖ್ಯಮಂತ್ರಿಗಳು, ಡಿಪಿಆರ್‌ ಸಿದ್ಧವಾ​ದಾಗ ಪ್ರಧಾನಿಯಾಗಿ ಮೋದಿ ಅವ​ರಿ​ದ್ದರು. 2019ರಲ್ಲಿ ಟೆಂಡರ್‌ ಆಗಿದೆ. ಆಗ ನೀವಿದ್ದಿರಾ ಎಂದು ಕಾಂಗ್ರೆಸ್ಸಿಗರನ್ನು ಪುನಃ ಪ್ರಶ್ನಿಸಿದ ಬಸ​ವ​ರಾಜ ಬೊಮ್ಮಾ​ಯಿ​ರ​ವರು ಆಗಲೂ ಪ್ರಧಾನಿಯಾಗಿ ಮೋದಿಯವರೇ ಇದ್ದರು. ಈಗ ಹೆದ್ದಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಈಗಲೂ ಮೋದಿಯವರೇ ಪ್ರಧಾನಿ ಆಗಿದ್ದಾರೆ. ಎಲ್ಲ ಹಂತಗಳಲ್ಲೂ ಪ್ರಧಾನಿ ಮೋದಿಯವರಿದ್ದಾರೆ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದೆ ಎಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್‌ ವಿರುದ್ದ ಹರಿಹಾಯ್ದರು.

ಯಾರೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಿ ಅದು ರಾಷ್ಟ್ರೀಯ ಸ್ವತ್ತು. ಈ ಭಾಗಕ್ಕೆ ಒಳ್ಳೆಯದಾಗಿದೆ ಎಂದು ಸಂತೋಷ ಪಡುವುದನ್ನು ಬಿಟ್ಟು, ಯುಪಿಎ ಕಾಲದಲ್ಲಾಗಿದೆ, ನಮ್ಮ ಕಾಲದಲ್ಲಾಗಿದೆ ಎಂದು ಹೇಳವುದು ಸರಿಯಲ್ಲ. ಸತ್ಯ ಎಂದಿಗೂ ಸತ್ಯವೇ, ಸತ್ಯಕ್ಕೆ ಎಂದಿಗೂ ಜಯ ಎಂದು ಕಾಂಗ್ರೆಸ್‌ ವಿರುದ್ಧ ಬಸ​ವ​ರಾಜ ಬೊಮ್ಮಾಯಿ ಮಾತಿನ ಚಾಟಿ ಬೀಸಿದರು.

ರಾಮನಗರ ಶ್ರೀ ರಾಮನ ಮಹಿಮೆ ಉಳ್ಳ ಸ್ಥಳವಾಗಿದೆ. ಪುರಾಣದಲ್ಲಿ ಈ ಭಾಗ ಖ್ಯಾತಿಗಳಿಸಿದೆ. ಅದೇ ಖ್ಯಾತಿಯನ್ನು ಮರು ಸೃಷ್ಟಿಸುವುದು ತಮ್ಮ ಸರ್ಕಾರದ ಉದ್ದೇಶ. ಹೀಗಾಗಿ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಮಂದಿರ ಕಟ್ಟುವುದು ಒಂದೆಡೆಯದರೆ ಮತ್ತೊಂದೆಡೆ ರಾಮರಾಜ್ಯವನ್ನು ನಿರ್ಮಿಸಿದರೆ ಸಾರ್ಥಕವಾಗುತ್ತದೆ. ನವ ಕರ್ನಾಟಕ ನಿರ್ಮಾಣದಿಂದ ನವ ಭಾರತವನ್ನು ನಿರ್ಮಿಸುವುದು ತಮ್ಮ ಪಕ್ಷದ ಉದ್ದೇಶ ಅಂತ ಮುಖ್ಯ​ಮಂತ್ರಿ​ ಬಸ​ವ​ರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ನಮ್ಮದು ಜನಪರ ಮಾನವೀಯತೆಯುಳ್ಳ ಸರ್ಕಾರ: ಸಿಎಂ ಬೊಮ್ಮಾ​ಯಿ

ರಾಮ​ನ​ಗ​ರ: ಒಂದು ಸರ್ಕಾರ ಪ್ರಜಾ​ಪ್ರ​ಭು​ತ್ವ​ದಲ್ಲಿ ಜೀವಂತ​ವಾ​ಗಿದ್ದರೆ ಅದು ಜನರ ಬದು​ಕಿನ ಜೊತೆ ಜೀವಂತವಾಗಿರುತ್ತದೆ. ಕೇವಲ ಅಧಿ​ಕಾರದಲ್ಲಿ​ದ್ದರೆ ಅಥವಾ ವಿಧಾ​ನ​ಸೌ​ಧದ ಕಟ್ಟ​ಡದಲ್ಲಿ ಕುಳಿತು ಆಡ​ಳಿತ ನಡೆ​ಸು​ವುದು ಸರ್ಕಾ​ರದ ಜೀವಂತಿಕೆ ಅಲ್ಲ. ನಮ್ಮದು ಜನ​ಪರ ಹಾಗೂ ಮಾನ​ವೀ​ಯತೆ ಉಳ್ಳ ಸರ್ಕಾರ ಎಂದು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಹೇಳಿ​ದ​ರು.

ನಗ​ರದ ಹೊರ ವಲ​ಯದ ಅರ್ಚ​ಕ​ರ​ಹ​ಳ್ಳಿಯ ರಾಜೀವ್‌ ಗಾಂಧಿ ಆರೋಗ್ಯ ವಿವಿ ಆವ​ರ​ಣ​ದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ, ಸರ್ಕಾರಿ ವೈದ್ಯ​ಕೀಯ ಕಾಲೇಜು, ಆಸ್ಪ​ತ್ರೆ ಹಾಗೂ ವಿವಿಧ ಅಭಿ​ವೃದ್ಧಿ ಯೋಜ​ನೆ​ಗ​ಳಿಗೆ ಭೂಮಿ ಪೂಜೆ ನೆರ​ವೇ​ರಿ​ಸಿ ಮಾತ​ನಾ​ಡಿ​ದ ಅವರು, ನಾಡಿನ ಕಟ್ಟ​ಕ​ಡೆಯ ವ್ಯಕ್ತಿ ನಾವು ನೀಡಿದ ಕಾರ್ಯ​ಕ್ರ​ಮ​ಗಳಿಂದ ತನ್ನು ಬದು​ಕನ್ನು ಸಬ​ಲೀ​ಕ​ರಣ ಮಾಡಿಕೊಂಡು ಮುಂದೆ ಬಂದರೆ ಅದು ಸರ್ಕಾ​ರದ ಜೀವಂತಿಕೆ ತೋರಿ​ಸು​ತ್ತದೆ ಎಂದರು.

ಮೋದಿಯಿಂದ ಅಪೂರ್ಣ ಮೆಟ್ರೋ ಉದ್ಘಾಟನೆ: ಸುರ್ಜೇವಾಲಾ

ಹಿಂದಿನ ಸರ್ಕಾ​ರ​ಗಳ ಘೋಷಣೆಗಳು ಘೋಷ​ಣೆ​​ಯಾ​ಗಿಯೇ ಉಳಿ​ಯು​ತ್ತಿತ್ತು. ಯಾವುದೂ ಅನು​ಷ್ಠಾನ ಆಗು​ತ್ತಿ​ರ​ಲಿಲ್ಲ. ಜನ​ರನ್ನು ಭ್ರಮೆ​ಯಲ್ಲಿ ಇಡು​ತ್ತಿ​ದ್ದರು. ನಾವು ಘೋಷಣೆ ಮುಖಾಂತರ ಜನ​ರನ್ನು ಭ್ರಮೆ​ಯ​ಲ್ಲಿ​ಟ್ಟು ಆಡ​ಳಿತ ನಡೆ​ಸಿದ ದಿನ​ಗ​ಳನ್ನು ನೋಡಿ​ದ್ದೇವೆ. ಬಡ​ವರು ಹಾಗೂ ಸಾಮಾ​ಜಿಕ ನ್ಯಾಯದ ಬಗ್ಗೆ ದೊಡ್ಡ ಭಾಷ​ಣ​ಗ​ಳನ್ನು ಮಾಡು​ತ್ತಿ​ದ್ದರು. ಸಾಮಾ​ಜಿಕ ನ್ಯಾಯ ಅಂತ ಹೇಳಿ ಹಿಂದು​ಳಿ​ದ​ವರು ಹಿಂದೆಯೇ ಉಳಿ​ದಿ​ದ್ದಾರೆ. ಯಾರು ಸಾಮಾ​ಜಿಕ ನ್ಯಾಯದ ಭಾಷಣ ಮಾಡಿ​ದರೊ ಅವರೆಲ್ಲ ಮುಂದೆ ಬಂದಿ​ದ್ದಾರೆ ಎಂ​ದ​ರು.

ಭಾಷ​ಣ​ಗ​ಳಿಂದ ಹೊಟ್ಟೆ ತುಂಬು​ವು​ದಿಲ್ಲ. ನ್ಯಾಯವೂ ಸಿಗು​ವು​ದಿಲ್ಲ. ಆ ಸಂದ​ರ್ಭಕ್ಕೆ ಸಮಸ್ಯೆ ಬಗೆ​ಹ​ರಿ​ಸಿ ಧೀಮಂತಿಕೆ ಪ್ರದ​ರ್ಶಿ​ಸಿ​ದಾಗ ಜನ​ರಿಗೆ ಉಪ​ಯೋಗ ಆಗು​ತ್ತದೆ. ನಮ್ಮಲ್ಲಿ ಜನ​ಪ್ರಿಯ ನಾಯ​ಕರು ಬೇಕಾ​ದಷ್ಟುಜನ​ರಿ​ದ್ದಾರೆ. ನಮಗೆ ಜನೋ​ಪ​ಯೋಗಿ ನಾಯ​ಕರು ಬೇಕಾ​ಗಿ​ದ್ದಾರೆ ಎಂದು ಬೊಮ್ಮಾ​ಯಿ ತಿಳಿ​ಸಿ​ದರು.

Latest Videos
Follow Us:
Download App:
  • android
  • ios