Asianet Suvarna News Asianet Suvarna News

ದೇವರು ಹೆಚ್ಚು ಪ್ರೀತಿಸುವ ನಾಡು ಕರ್ನಾಟಕ: ಸಿಎಂ ಬೊಮ್ಮಾಯಿ

ಕಲೆ, ಸಾಹಿತ್ಯದ ತವರುರಾದ ಚಿಕ್ಕಮಗಳೂರಲ್ಲಿ ಪಂಚ ಜೀವ ನದಿಗಳಿವೆ. ಶೃಂಗೇರಿಯಲ್ಲಿ ಶಾರದಾಂಬೆ, ತಾಯಿ ಅನ್ನಪೂರ್ಣೆ ನೆಲೆಸಿರುವ ನೆಲವೀಡು. ಇಂಥ ಪುಣ್ಯಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರು ಧನ್ಯರು ಎಂದು ಮಲೆನಾಡ ಗುಣ ಮೌಲ್ಯ ಶ್ಳಾಘಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ. 

CM Basavaraj Bommai Talks Over Karnataka grg
Author
First Published Jan 19, 2023, 2:30 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.19): ಕಲೆಯ ಸಾಂಸ್ಕೃತಿಕ ಸಿರಿ ಹೊಂದಿರುವ ಕರ್ನಾಟಕ ದೇವರುವ ಅತ್ಯಂತ ಹೆಚ್ಚು ಪ್ರೀತಿಸುವ ನಾಡು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಬಣ್ಣಿಸಿದರು. ನಗರದ ಜಿಲ್ಲಾ ಆಟದ ಮೈದಾನದಲ್ಲಿ ಇಂದು ಸಂಜೆ  ಆಯೋಜನೆಗೊಂಡಿದ್ದ ಚಿಕ್ಕಮಗಳೂರು ಹಬ್ಬ ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯದ ತವರುರಾದ ಚಿಕ್ಕಮಗಳೂರಲ್ಲಿ ಪಂಚ ಜೀವ ನದಿಗಳಿವೆ. ಶೃಂಗೇರಿಯಲ್ಲಿ ಶಾರದಾಂಬೆ, ತಾಯಿ ಅನ್ನಪೂರ್ಣೆ ನೆಲೆಸಿರುವ ನೆಲವೀಡು. ಇಂಥ ಪುಣ್ಯಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರು ಧನ್ಯರು ಎಂದು ಮಲೆನಾಡ ಗುಣ ಮೌಲ್ಯ ಶ್ಳಾಘಿಸಿದರು. ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳು ಪ್ರವಾಸೋದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅವಕಾಶಗಳು ಇವೆ. ಅದ್ದರಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಸ್ವಿಜರ್ ಲ್ಯಾಂಡ್ ಮಾದರಿಯಲ್ಲಿ ಈ ಎರಡು ಜಿಲ್ಲೆಗಳನ್ನು ಪ್ರವಾಸೋದ್ಯಮದಲ್ಲಿ ಬೆಳೆಸಬೇಕೆಂಬ ಇಚ್ಛೆ ನನ್ನದಾಗಿದೆ. ಇದಕ್ಕೆ ಬೇಕಾಗುವಷ್ಟು ಹಣವನ್ನು ಕೊಡುತ್ತೇನೆ. ತಡ ಮಾಡದೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಆರೋಗ್ಯ ವಾಹಿನಿಯಡಿ 11 ಕೋಟಿ ಜಿಲ್ಲೆಗೆ: ಸಿಎಂ 

ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೆಲಿ ಟೂರಿಜಂಗಾಗಿ ಒಟ್ಟು 30 ಕೋಟಿ ರುಪಾಯಿ ಕೊಟ್ಟಿದ್ದೇನೆ. ಇಲ್ಲಿ ಏರ್ ಸ್ಟ್ರೀಪ್ ನಿರ್ಮಾಣಕ್ಕೆ 40 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಅದಕ್ಕೆ ಬೇಕಾದ ಹಣವನ್ನು ಮಂಜೂರು ಮಾಡುತ್ತೇನೆ. ಮುಂದಿನ ಚಿಕ್ಕಮಗಳೂರು ಹಬ್ಬದೊಳಗೆ ಈ ಕೆಲಸ ಪೂರ್ಣಗೊಳಿಸಬೇಕು ಎಂದರು.ಸಿಎಂ ಆರೋಗ್ಯ ವಾಹಿನಿಯಡಿ ಚಿಕ್ಕಮಗಳೂರು ಜಿಲ್ಲೆಗೆ 11 ಕೋಟಿ ರುಪಾಯಿ ನೀಡಲಾಗಿದೆ, ಈ ಯೋಜನೆಯನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು, ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದರು.ದೇಶದ ಪ್ರತಿಯೊಂದು ಮನೆಗೆ  ನೀರು ಕೊಡುತ್ತೇನೆಂದು ಯಾವುದೇ ಪ್ರಧಾನಿ  ಚಿಂತನೆ ಮಾಡಿರಲಿಲ್ಲ, ಧೈರ್ಯ ಮಾಡಿರಲಿಲ್ಲ, ಅದು, ಅಸಾಧ್ಯದ ಮಾತು ಆಗಿತ್ತು. 70 ವರ್ಷದಲ್ಲಿ ಆಗದೆ ಇರುವ ಕೆಲಸವನ್ನು ಪ್ರಧಾನಿ ನರೇಂದ್ರಮೋದಿಯವರು ಮಾಡಿದ್ದಾರೆ. ದೇಶದಲ್ಲಿ 10 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದಾರೆ ಎಂದ ಅವರು, ಕಳೆದ 2 ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 50ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ.ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕುಗಳಲ್ಲಿ ಮನೆ ಮನೆಗೆ ಕುಡಿಯುವ ನೀರಿಗಾಗಿ 1400 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.ಚಿಕ್ಕಮಗಳೂರೆಂದರೆ ಅಂದ ಚೆಂದ ಸೊಬಗು, ಈ ಹಬ್ಬ ನೋಡಲು ಎರಡು ಕಣ್ಣು ಸಾಲೋದಿಲ್ಲ, ಕ್ರೀಯಾಶೀಲತೆ, ಸದಾ ಚಟುವಟಿಕೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಸಿ.ಟಿ. ರವಿ ತೊಡಗಿ ಕೊಂಡಿದ್ದಾರೆ. ಎಲ್ಲರ ಮನಸ್ಸು ಜೋಡಿಸುವ ಕೆಲಸ ಮಾಡಿದ್ದಾರೆ ಎಂದರು.ಇಲ್ಲಿಗೆ ಬರಲು ಸಂತೋಷವಾಗುತ್ತದೆ, ಇಲ್ಲಿ  ಹವಾ, ಶುದ್ಧವಾದ ವಾತಾವರಣ ಇದೆ. ಇಲ್ಲಿಗೆ ಬಂದರೆ ನಮ್ಮ ಆರೋಗ್ಯ ಖಂಡಿತ ಉತ್ತಮವಾಗುತ್ತದೆ. ದೇಹದಲ್ಲಿ ಹೊಸ ಶಕ್ತಿ ಬರುತ್ತದೆ ಎಂದರು.

Chikkamagaluru Utsava: ಹಬ್ಬದ ಅಂಗವಾಗಿ ದೇಶ ವಿದೇಶಗಳ ವಿವಿಧ ಬಗೆಯ ಹೂವಿನ ಲೋಕವೇ ಸೃಷ್ಟಿ!

ಹೆಸರು ಚಿಕ್ಕದಾಗಿದ್ದರೂ ಇದರ ಖ್ಯಾತಿ ದೊಡ್ಡದು: 

ಇಡೀ ದೇಶದಲ್ಲಿ  ದೇವರು ಅತ್ಯಂತ ಪ್ರೀತಿ ಮಾಡುವ ರಾಜ್ಯ ಕರ್ನಾಟಕ. ಅಷ್ಟು ನಿಸರ್ಗ ನಮ್ಮ ರಾಜ್ಯಕ್ಕೆ ಕಾಣಿಕೆ ಕೊಟ್ಟಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕವಿಗಳು ಹುಟ್ಟಿದ್ದಾರೆ, ಈ ನಾಡನ್ನು ಹಾಡಿ ಹೊಗಳಿದ್ದಾರೆ, ಕುವೆಂಪುರವರ ಹುಟ್ಟೂರು, ನಿಸರ್ಗ ಇರುವ ಕಡೆ ದೇವರು ನೆಲೆಸಿರುತ್ತಾರೆ.ನೀವೆಲ್ಲರೂ ಪುಣ್ಯವಂತರು. ಹೆಸರು ಚಿಕ್ಕದಾಗಿದ್ದರೂ ಇದರ ಖ್ಯಾತಿ ದೊಡ್ಡದಾಗಿದೆ. ಪಂಚ ನದಿಗಳು ಹುಟ್ಟಿರುವ ಏಕೈಕ ಜಿಲ್ಲೆ ಇದಾಗಿದೆ, ಇಡೀ ಕನ್ನಡ ನಾಡಿಗೆ ಈ ಜಿಲ್ಲೆ ಕೊಡುಗೆ ನೀಡದೆ ಎಂದ ಅವರು, ಪಶ್ಚಿಮಘಟ್ಟ ಉಳಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.ಹೊಯ್ಸಳ ಸಾಮ್ರಾಜ್ಯ ಸ್ಥಾಪನೆಯಾಗಿರುವ ನಾಡು. ಕಲೆ, ಸಂಸ್ಕೃತಿ ಜಗತ್ ಪ್ರಸಿದ್ಧಿಯಾಗಿದೆ.  ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ನಾಗಲಾಂಬಿಕೆ, ಶೃಂಗೇರಿಯ ಶಾರದಾಂಬೆಯ ನೆಲೆಬೀಡು 21ನೇ ಶತಮಾನದ ಶತಮಾನ, ಇಲ್ಲಿಂದ eನದ ಹೊಳೆ ಇಡೀ ವಿಶ್ವಕ್ಕೆ ಹರಡಿದೆ. ಅದರ ನೆರಳಿಲ್ಲಿರುವ ನೀವುಗಳು ಪುಣ್ಯವಂತರು. ಹೊಟ್ಟಿ ಮತ್ತು ನೆತ್ತಿ ತಣ್ಣಿಗೆ ಇರಬೇಕು, ಅನ್ನಪೂರ್ಣೇಶ್ವರಿ, eನ ಕೊಡುವ ಶಾರದಾಂಬೆ, ಇವೆರಡು ದೇಗುಲಗಳು ಈ ನಾಡಿನಲ್ಲಿವೆ ಎಂದರುಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ  ಮಲೆನಾಡು ಬಯಲುಸೀಮೆ ಒಳಗೊಂಡ ಸುಂದರವಾದ ಸಿರಿಯನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು ಎಂದರು.

ಈ ಬಾರಿ ಸಿ.ಟಿ. ರವಿ ಅವರಿಗೆ ಆಶೀರ್ವಾದ ಮಾಡಬೇಕು, ಪ್ರಾಮಾಣಿಕವಾಗಿ ಅವರು, ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಶಾಸಕ ಸಿ. ಟಿ ರವಿ  ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್, ವಿಧಾಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಡಿ.ಎಸ್. ಸುರೇಶ್, ಎಸ್.ಎಲ್. ಭೋಜೇಗೌಡ, ಡಾ. ಪುನೀತ್ ರಾಜ್ಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವಾ, ರೋನಾಲ್ಡ್ ಕೊಲೋಸೋ, ಉದ್ಯಮಿ ಕಿಶೋರ್ಕುಮಾರ್ ಹೆಗ್ಡೆ, ಜಾನಪದ ಕೋಗಿಲೆ ಮುಗುಳಿ ಲಕ್ಷ್ಮೀದೇವಮ್ಮ, ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಉಪಸ್ಥಿತರಿದ್ದರು.

Follow Us:
Download App:
  • android
  • ios