ಸಿಎಂ ಬೊಮ್ಮಾಯಿಗೆ ಹಿಂದುತ್ವದ ಗುಣವಿಲ್ಲ: ಸಿದ್ದಲಿಂಗ ಸ್ವಾಮಿ
* ಬಿಜೆಪಿಯಲ್ಲಿಯೇ ಮಂದಿರ ಧ್ವಂಸಗೊಳಿಸುವ ಗಝನಿ, ಟಿಪ್ಪು ಹುಟ್ಟಿಕೊಂಡಿದ್ದಾರೆ
* ಹಿಂದು ವಿರೋಧಿ ಸಿಎಂ ಕೇಳಗಿಳಿಸಲು ಆಂದೋಲದ ಸಿದ್ದಲಿಂಗ ಸ್ವಾಮಿ ಆಗ್ರಹ
* ಬೊಮ್ಮಾಯಿ ಹಟಾವೋ ಕರ್ನಾಟಕ ಬಚಾವೋ
ಬೀದರ್(ಸೆ.22): ಕಮ್ಯೂನಿಷ್ಟ ಪಕ್ಷದಿಂದ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಲ್ಲಿ ಹಿಂದುತ್ವ ಗುಣ ಬರಲು ಸಾಧ್ಯವಿಲ್ಲ. ಹೀಗಾಗಿ ಹಿಂದು ವಿರೋಧಿ ಸಿಎಂ ಕೇಳಗಿಳಿಸಬೇಕೆಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಹಾಗೂ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದು ವಿರೋಧಿ ಮನೋಭಾವನೆವುಳ್ಳ ಸಿಎಂ ಕೆಳಗಿಳಿಸಿ ಹಿಂದುವಾದಿ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅವಕಾಶ ಇದೆ ಎಂದರು.
ದೇವತೆಗಳ ಅವಶೇಷ ಎಣಿಸುವಂತಾಗಿದೆ:
2013ರಿಂದ 18ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿಂದು ಕಾರ್ಯಕರ್ತರ ಹೆಣಗಳಲ್ಲಿ ಎಣಿಸಿದ್ದೇವೆ. ಆದರೀಗ ಹಿಂದುತ್ವದ(Hindutva) ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಂದ ಹಿಂದು ದೇವತೆಗಳ ಅವಶೇಷಗಳನ್ನು ಎಣಿಸುವಂತಾಗಿದೆ. ಈ ಹಿಂದೆ ಮಂದಿರಗಳನ್ನು ಧ್ವಂಸ ಮಾಡುವವರಲ್ಲಿ ಟಿಪ್ಪು ಸುಲ್ತಾನ ಹಾಗೂ ಗಝನಿ ಹೆಸರು ಹೇಳುತಿದ್ದರು. ಆದರೆ ಈಗ ಬಿಜೆಪಿಯಲ್ಲಿಯೇ ಗಝನಿ, ಟಿಪ್ಪು ಸುಲ್ತಾನಂತವರು ಹುಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೇವಲ ಓಟಿಗಾಗಿ ಮಾತ್ರ ಹಿಂದುತ್ವ, ಹಿಂದೂ ಧರ್ಮದ ಬಗ್ಗೆ ಬಿಜೆಪಿಗೆ ಗೌರವವೇ ಇಲ್ಲ
ಬಿಜೆಪಿಯ ಕೆಲ ನಾಯಕರು ತಮ್ಮ ಮಾನ ಹರಾಜು ಆಗುತ್ತಿದೆ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಜೀವನ ರೂಪಿಸಿದ ಹಿಂದು ಮಂದಿರಗಳನ್ನು ಧ್ವಂಸಗೊಳಿಸಲು ತಡೆಯಾಜ್ಞೆ ತಂದಿಲ್ಲ. ಮಂದಿರಗಳಿಗಿಂತ ನಿಮ್ಮ ವೈಯಕ್ತಿಕ ಮರ್ಯಾದೆ ಹೆಚ್ಚಾಯಿತಾ ಎಂದು ಪ್ರಶ್ನಿಸಿದರು.
ಬಿಎಸ್‌ವೈ ಅವಧಿಯಲ್ಲಿ ಗೋಹತ್ಯೆ ಜಾರಿಗೆ ತಂದರು. ಇಲ್ಲಿಯವರೆಗೆ ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಅಕ್ರಮ ಕಸಾಯಿಖಾನೆ ಪಟ್ಟಿ ತೆಗೆದುಕೊಂಡಿಲ್ಲ. ಗೋಹತ್ಯೆ ಜಾರಿಗೆ ತರಬೇಕಾದರೆ ಮೋದಲು ಅಕ್ರಮ ಕಸಾಯಿ ಖಾನೆಗಳ ಮೇಲೆ ದಾಳಿ ಮಾಡಲಿ. ಹಿಂದುಗಳೆಂದರೆ ಕುರಿಗಳ ಹಿಂಡು ಎಂದು ಇವರ ಭಾವನೆಯಾಗಿದೆ. ಇದು ಮುಂದೆ ವಿಷವಾಗಲಿದೆ. ಜನ ತಕ್ಕ ಪಾಠ ಕಲಿಸಲಿದ್ದಾರೆ. ಸಿಎಂ ಹಾಗೂ ಬಿಜೆಪಿಗೆ ತಾಕತಿದ್ದರೆ ಅಕ್ರಮ ಕಸಾಯಿ ಖಾನೆ ಮುಚ್ಚಲಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಪರಮೇಶ್ವರ, ಅಮೃತ ಪಾಟೀಲ್, ಶಂಕರ ಖ್ಯಾಮಾ ಇದ್ದರು.
ಬೀದರ್‌ನಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಹಾಗೂ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇವರು ಡೋಂಗಿವಾದಿಗಳು, ಹುಸಿ ಹಿಂದುತ್ವವಾದಿಗಳು : ಸಿದ್ದರಾಮಯ್ಯ ಗರಂ
ಸುಪ್ರಿಂ ಆದೇಶ ಒಂದೇ ಸಮುದಾಯಕ್ಕೆ ಇಲ್ಲ
ಸುಪ್ರಿಂ ಕೋಡ್ ಆದೇಶ ಪಾಲನೆಗಾಗಿ ಮಂದಿರ ಒಡೆದಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳುತಿದ್ದಾರೆ. ಆದರೆ ಸುಪ್ರಿಂ ಆದೇಶ ಕೇವಲ ಒಂದು ಸಮುದಾಯಕ್ಕೆ ಗುರಿ ಪಡಿಸುವಂತಹ ಆದೇಶ ಇಲ್ಲ ಎಂದು ಸಿದ್ದಲಿಂಗಸ್ವಾಮಿ ಹೇಳಿದರು.
ಆದೇಶ ಪಾಲನೆ ಮಾಡುವುದಿದ್ದರೆ ಸಿಎಂ ಅವರು ತಮ್ಮ ತವರು ಕ್ಷೇತ್ರದ ಬಂಕಾಪೂರದ ರಸ್ತೆ ಮಧ್ಯದಲ್ಲಿರುವ ಮಸೀದಿ ಧ್ವಂಸಗೊಳಿಸಬೇಕು. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬೇಡಿ. ಸಿಎಂ ಆದ ನಂತರ ಎಷ್ಟುಮಸೀದಿ ಹಾಗೂ ಚರ್ಚ್‌ಗಳು ನೆಲಸಮ ಮಾಡಿದ್ದೀರಿ ಲೆಕ್ಕ ಕೋಡಿ ಎಂದರೆ ಅವರಲ್ಲಿ ಉತ್ತರವೇ ಇಲ್ಲ. ಮೈಸೂರು ಜಿಲ್ಲೆಯ ಶಾಸಕರಾದ ರಾಮದಾಸ ಹಾಗೂ ಹರ್ಷವರ್ಧನ ಅವರು ಜಿಲ್ಲಾಡಳಿತದ ಪರ ಇದ್ದರು. ಹೀಗಾಗಿ ಕೇವಲ ಮಂದಿರಗಳನ್ನೇ ಒಡೆಯುತ್ತಿರಿ, ಮಸೀದಿಗಳನ್ನು ಏಕೆ ಒಡೆಯುತ್ತಿಲ್ಲ ಎಂದು ಕೇಳಿಲ್ಲ. ಇವರು ರಾಮದಾಸ ಅಲ್ಲ ರಾವಣದಾಸರಾಗಿ ಮೂರ್ತಿ ಭಕ್ಷಕರ ಪರವಾಗಿದ್ದಾರೆ. ಮುಸ್ಲಿಂ ಸಂಖ್ಯೆ ಹೆಚ್ಚಾಗಿರುವ ಕಾರಣ ಅವರ ಮತ ಸಿಗುವುದಿಲ್ಲವೆಂದು ಮಸೀದಿಗೆ ಕೈ ಹಾಕುತ್ತಿಲ್ಲ. ಇಂತಹ ಅನಧಿಕೃತವಾದ ದಾಖಲೆ ತೆಗೆದುಕೊಂಡು ಶ್ರೀರಾಮ ಸೇನೆ ಕೋರ್ಟ್ ಮೆಟ್ಟಲೇರಲಿದೆ ಎಂದರು.
ಬೊಮ್ಮಾಯಿ ಹಟಾವೋ ಕರ್ನಾಟಕ ಬಚಾವೋ
ಕೆಡವಿದ ಸ್ಥಳದಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳುತಿದ್ದಾರೆ. ಇವರು ಅಲ್ಲಿ ಮಂದಿರ ಕಟ್ಟಿದ್ದರೆ ಜೈಲಿಗೆ ಹೋಗುತ್ತಾರೆ. ದೇಶದಲ್ಲಿ ಶಕ್ತಿಯುತ ಪ್ರಧಾನ ಮಂತ್ರಿ ಇದ್ದಾಗ ಇವರ ನಡೆ ಪಕ್ಷಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಶ್ರೀರಾಮ ಸೇನೆಯಿಂದ ಬೊಮ್ಮಾಯಿ ಹಟಾವೋ ಕರ್ನಾಟಕ(Karnataka) ಬಚಾವೋ ಹೋರಾಟ ಆರಂಭಿಸುತ್ತೇವೆ. ಕೆಡವಿದ ಮಂದಿರ ಬೇರೆ ಸ್ಥಳದಲ್ಲಿ ಕಟ್ಟಿಸಬೇಕು, ಇಂದು ಒಡೆದು ಹಾಕಿದ ಮಂದಿರಗಳ ಅಷ್ಟೆಪ್ರಮಾಣದಲ್ಲಿ ಮಸೀದಿ ಹಾಗೂ ಚಚ್‌ರ್‍ಗಳನ್ನು ಕೆಡವಬೇಕು. ಜಿಲ್ಲೆಯಲ್ಲಿ ಅನಧಿಕೃತ ಮಸೀದಿ ಹಾಗೂ ಚಚ್‌ರ್‍ಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕೋಡುತ್ತೇವೆ ಎಂದು ಸಿದ್ದಲಿಂಗ ಸ್ವಾಮಿ ಹೇಳಿದರು.