Asianet Suvarna News Asianet Suvarna News

ಶಾಸಕ ಹೊತ್ತ ಹರಕೆಗೆ ಸಿಎಂರಿಂದ 25 ಲಕ್ಷ : ಆಕ್ರೋಶ

ಶಾಸಕರೋರ್ವರು ಮಾಡಿಕೊಂಡ ಹರಕೆ ತೀರಿಸಲು ಮುಖ್ಯಮಂತ್ರಿ 25 ಲಕ್ಷ ರು. ಬಿಡುಗಡೆ ಮಾಡಿದ್ದು ಈ ಸಂಬಂಧ ತಿರ್ವ ಆಕ್ಷೇಪ ವ್ಯಕ್ತವಾಗಿದೆ.

CM B S yediyurappa releases money for MLA vow snr
Author
Bengaluru, First Published Jan 16, 2021, 9:36 AM IST

ಚಿಕ್ಕಮಗಳೂರು (ಜ.16): ಶಾಸಕರು ಹೊತ್ತ ಹರಕೆ ತೀರಿಸಲು ಸರ್ಕಾರದಿಂದ 25 ಲಕ್ಷ  ಬಿಡುಗಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಬಿ.ಎಸ್‌.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಪಲ್ಗುಣಿ ಗ್ರಾಮದ ಕಾಲನಾಥೇಶ್ವರ ದೇವಾಲಯಕ್ಕೆ ಕಟ್ಟಿಗೆ ರಥ ಹಾಗೂ ಬೆಟಗೆರೆಯಲ್ಲಿರುವ ಭೈರವೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡುವುದಾಗಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹರಕೆ ಹೊತ್ತಿದ್ದರಂತೆ. 

ಅತೃಪ್ತರು ಹೈಕಮಾಂಡ್‌ಗೆ ದೂರು ಕೊಡಿ: ಸಿಎಂ ಸವಾಲು

ಇದಕ್ಕೆ 35 ಲಕ್ಷ ನೆರವನ್ನು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ಸೂಚನೆ ನೀಡಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ 25 ಲಕ್ಷ ಬಿಡುಗಡೆ ಮಾಡಬೇಕೆಂದು ಆದೇಶಿಸಿದ್ದಾರೆ. 

ಈ ಕುರಿತು ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಇದೀಗ ಶಾಸಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯಾರು ತಾವು ಹೊತ್ತ ಹರಕೆ ತೀರಿಸಲು ತಮ್ಮ ಸ್ವಂತ ಹಣ ಉಪಯೋಗಿಸುತ್ತಾರೆ. ಆದರೆ ಜನಪ್ರತಿನಿಧಿಯಾಗಿ, ಸರ್ಕಾರದ ಹಣದಲ್ಲಿ ತಾನು ಹೊತ್ತ ಹರಕೆ ತೀರಿಸುತ್ತಿರುವ ಶಾಸಕರ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ.

Follow Us:
Download App:
  • android
  • ios