ಕೂಡ್ಲಿಗಿ: ಬಸ್‌ನಲ್ಲಿ ಕೋಳಿಗೆ ಟಿಕೆಟ್ ಪಡೆವ ವಿಚಾರಕ್ಕೆ ಗಲಾಟೆ..!

ಸಾಕಷ್ಟು ವಾದ-ವಿವಾದದ ಬಳಿಕ ಕೋಳಿಗೆ ಟಿಕೆಟ್‌ ಪಡೆಯಮ್ಮ ಎಂದು ಕಂಡಕ್ಟರ್‌ ಹೇಳಿದರೆ, ಟೆಕೆಟ್ ತಗೋತೇನೆ, ಕೋಳಿಗೆ ಸೀಟ್‌ ಮಾಡಿಕೊಡಿ ಎಂದು ಮಹಿಳೆ ಪಟ್ಟು ಹಿಡಿದಿದ್ದು ಕಂಡಕ್ಟರ್‌ ಪಿತ್ತ ನೆತ್ತಿಗೇರಲು ಕಾರಣವಾಯಿತು. ಪ್ರಯಾಣಿಕರು ಸೇರಿ ಎಲ್ಲರೂ ಸಾಕಷ್ಟು ತಿಳಿ ಹೇಳಿದ ಬಳಿಕ ಮಹಿಳೆ ಟಿಕೆಟ್‌ ಪಡೆದರಾದರೂ ಗೊಣಗುತ್ತಲೇ ಪ್ರಯಾಣ ಮುಂದುವರಿಸಿದರು.

Clash Over getting Ticket for Chicken on the Bus at Kudligi in Vijayanagara grg

ಕೂಡ್ಲಿಗಿ(ಫೆ.13): ಇಲ್ಲಿನ ಬಸ್‌ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಕೋಳಿಗೆ ಟಿಕೆಟ್ ಪಡೆಯುವ ವಿಚಾರವಾಗಿ ಅಕ್ಷರಶಃ ‘ಕೋಳಿಜಗಳ’ವೇ ನಡೆದಿದೆ. ಮಹಿಳೆಯೊಬ್ಬಳು ರಟ್ಟಿನ ಬಾಕ್ಸಿನಲ್ಲಿ ರಹಸ್ಯವಾಗಿ ಒಯ್ಯುತ್ತಿದ್ದ ಕೋಳಿ ರಾತ್ರಿ ವೇಳೆ ಕೂಗಿ ತನ್ನ ಇರುವಿಕೆ ದೃಢಪಡಿಸಿದ್ದು ನಂತರ ರಾದ್ದಾಂತಕ್ಕೆ ಕಾರಣವಾಗಿದೆ. ಸಾಕಷ್ಟು ವಾದ-ವಿವಾದದ ಬಳಿಕ ಕೋಳಿಗೆ ಟಿಕೆಟ್‌ ಪಡೆಯಮ್ಮ ಎಂದು ಕಂಡಕ್ಟರ್‌ ಹೇಳಿದರೆ, ಟೆಕೆಟ್ ತಗೋತೇನೆ, ಕೋಳಿಗೆ ಸೀಟ್‌ ಮಾಡಿಕೊಡಿ ಎಂದು ಮಹಿಳೆ ಪಟ್ಟು ಹಿಡಿದಿದ್ದು ಕಂಡಕ್ಟರ್‌ ಪಿತ್ತ ನೆತ್ತಿಗೇರಲು ಕಾರಣವಾಯಿತು. ಪ್ರಯಾಣಿಕರು ಸೇರಿ ಎಲ್ಲರೂ ಸಾಕಷ್ಟು ತಿಳಿ ಹೇಳಿದ ಬಳಿಕ ಮಹಿಳೆ ಟಿಕೆಟ್‌ ಪಡೆದರಾದರೂ ಗೊಣಗುತ್ತಲೇ ಪ್ರಯಾಣ ಮುಂದುವರಿಸಿದರು.

ಆಗಿದ್ದೇನು?: 

ಹಗರಿಬೊಮ್ಮನಹಳ್ಳಿ ಘಟಕದಿಂದ ಹೊಸಪೇಟೆ ಮೂಲಕ ಧರ್ಮಸ್ಥಳಕ್ಕೆ ಹೋಗುವ ಬಸ್ಸಿನಲ್ಲಿ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ದೊಡ್ಡ ರಟ್ಟಿನ ಬಾಕ್ಸ್‌ನೊಂದಿಗೆ ಹತ್ತಿದ್ದಾರೆ. ಇನ್ನೇನು ಬಸ್ ಮುಂದಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಕೋಳಿ ಕೂಗಿ ಸದ್ದು ಮಾಡಿದೆ. ಇದೆಲ್ಲಿಂದ ಬಂತು ಕೋಳಿ ಎಂದು ತಿರುಗಿ ನೋಡಿದರೆ ಕೋಳಿ ಮಾತ್ರ ಕಾಣಲಿಲ್ಲ. ಕೊನೆಗೆ ರಟ್ಟಿನ ಬಾಕ್ಸಿನಲ್ಲಿ ಕೋಳಿ ಮಿಸುಕಾಡುವುದು ಗಮನಕ್ಕೆ ಬಂದಿದೆ. ಆಗ ಬಸ್ ಕಂಡಕ್ಟರ್, ಕೋಳಿ ಯಾರದು ಎಂದು ಕೇಳಿದಾಗ, ಕೂಡ್ಲಿಗಿಯಿಂದ ಜಗಳೂರಿಗೆ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಮಹಿಳೆ ತನ್ನದೆಂದು ಹೇಳಿದ್ದಾರೆ. ಈ ವೇಳೆ ಕಂಡಕ್ಟರ್ ಕೋಳಿಗೆ ಟಿಕೆಟ್‌ ಕೇಳಿದ್ದಾನೆ.

ಹಂಪಿ ಉತ್ಸವದ ಸಮಾರೋಪದಲ್ಲಿ ಆನಂದ ಸಿಂಗ್‌ ಭಾಗಿ: ಭಾರೀ ಚರ್ಚೆಗೆ ಗ್ರಾಸ

ಇದರಿಂದ ಆಕ್ರೋಶಗೊಂಡ ಮಹಿಳೆ, ಕೋಳಿಗ್ಯಾರಾದ್ರೂ ಟಿಕೆಟ್ ಕೇಳ್ತಾರಾ? ಅಂದಾಗ, ರೂಲ್ಸ್ ಪ್ರಕಾರ ಕೋಳಿಗೆ ಹಾಫ್ ಟಿಕೆಟ್ ತೆಗೆದುಕೊಳ್ಳಲೇಬೇಕು. ಇಲ್ಲಾಂದ್ರೆ ಕೋಳಿಯೊಂದಿಗೆ ಕೆಳಗಿಳಿ ತಾಯಿ ಅನ್ನುತ್ತಿದ್ದಂತೆ, ಮಹಿಳೆ ಕೂಡ ಸರಿ ಕಂಡಕ್ಟರೇ... ಟಿಕೆಟ್ ತಗಂತೀನಿ ಆದ್ರೆ ಕೋಳಿಗೆ ನೀವು ಸೀಟು ಕೊಡಿ ಎಂದು ಕಂಡಕ್ಟರ್ ಜತೆ ವಾಗ್ವಾದಕ್ಕಿಳಿದಳು. ಆಗ ಶುರುವಾದ ಕೋಳಿ ಜಗಳ ಜಗಳೂರು ವರೆಗೂ ಮುಂದುವರಿಯಿತು.

Latest Videos
Follow Us:
Download App:
  • android
  • ios