ಮೈಸೂರು(ಸೆ.28): ಕಳೆದ ಆರು ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ ಆಚರಿಸುತ್ತಿದ್ದ ಮಹಿಷಾ ದಸರಾಗೆ ಈ ಬಾರಿ ಜಿಲ್ಲಾ ಡಳಿತವು ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿ
ತಡೆಯೊಡ್ಡಿದರೂ ಅಶೋಕಪುರಂ ಉದ್ಯಾನದಲ್ಲಿ ಆಚರಿಸಲಾಯಿತು.

ಮಹಿಷಾ ದಸರಾ ಆಚರಣಾ ಸಮಿತಿಯು ‘ಮೂಲನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬ’ದ ಹೆಸರಿನಲ್ಲಿ ಮಹಿಷಾ ದಸರಾ ಆಚರಿಸಿಕೊಂಡು ಬರುತ್ತಿತ್ತು. ಇದಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಎರಡು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಈ ಬಾರಿ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇರುವುದರಿಂದ ಪೊಲೀಸರ ಮೇಲೆ ಒತ್ತಡ ತಂದು ಪುರಭವನ ಹಾಗೂ ಚಾಮುಂಡಿಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮಹಿಷಾ ದಸರಾಗೆ ಅವಕಾಶ ಮಾಡಿಕೊಡಲಿಲ್ಲ. ಈ ನಿರ್ಧಾರ ಖಂಡಿಸಿ
ಮಹಿಷಾ ದಸರಾ ಆಚರಣಾ ಸಮಿತಿಯಿಂದ ಅಶೋಕಪುರಂ ಉದ್ಯಾನ ದಲ್ಲಿ ಆಚರಿಸಿದರು.

'ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ?'

ನಂತರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಸಂಸದರ ಅಶ್ಲೀಲ ಪದ ಬಳಕೆ: ಚಾಮುಂಡಿಬೆಟ್ಟಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಸ್ಥಳೀಯರ ಜತೆಗೂಡಿ ಮಹಿಷಾಸುರ ಪ್ರತಿಮೆ ಎದುರು ಹಾಕಿದ್ದ ವೇದಿಕೆಯನ್ನು ತೆರವುಗೊಳಿಸುವಂತೆ ಸೂಚಿಸಿದರು. ಈ ವೇಳೆ ಅಲ್ಲಿಯೇ ಇದ್ದ ಡಿಸಿಪಿ ಮುತ್ತುರಾಜ್ ಅವರಿಗೆ ಅವಾಚ್ಯ ಪದ ಬಳಸಿ, ಆಯೋಜಕರ ಬಗ್ಗೆಯೂ ಕೆಟ್ಟ ಪದ ಬಳಸಿ ಧಮಕಿ ಹಾಕಿದ್ದರು. ತಕ್ಷಣ ವೇದಿಕೆಯನ್ನು ತೆರವುಗೊಳಿಸಲಾಯಿತು.

ಅಶೋಕಪುರಂನಿಂದ ಪ್ರತಿಭಟನಾ ಮೆರವಣಿಗೆ: ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಇತ್ತ ಅಶೋಕಪುರಂನಲ್ಲಿರುವ ಬೃಹತ್ ಮೆರವಣಿಗೆ ಹೊರಡು ಸಿದ್ಧವಾಗಿದ್ದ ಸಮಿತಿಯವರು ಅಂಬೇಡ್ಕರ್ ಉದ್ಯಾನವನದಲ್ಲೆ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಸದರ ನಡವಳಿಕೆಯನ್ನು ಖಂಡಿಸಿದರು. ಅಲ್ಲಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ಕಲಾಮಂದಿರದ ಆವರಣದಲ್ಲಿರುವ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಸಂಸದರ ವಿರುದ್ಧ ಅವಾಚ್ಯ ಬಳಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧವೂ ಕೆಂಡಕಾರಿದರು.

ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರೂ ಬೋನಸ್!