ಚಾಮರಾಜನಗರ(ಜ.14): ಯಳಂದೂರಿನ ಬಿಳಿಗಿರಿರಂಗನಬೆಟ್ಟು ಸುತ್ತೂರು ಶಾಖಾ ಮಠಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಂಜನ್‌ ಗೊಗೋಯ್‌ ಹಾಗೂ ಅವರ ಪತ್ನಿ ರೂಪಾಂಜಲಿ ಭೇಟಿ ನೀಡಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು, ಶ್ರೀಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ.

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ಸುತ್ತೂರು ಮಠದ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಬ್ಬರ್ ತೋಟದಲ್ಲಿ ಒಂದೇ ಕಡೆ 6 ಹೆಬ್ಬಾವು..!

ಸುತ್ತೂರು ಸಂಸ್ಥೆಯಲ್ಲಿರುವ ಮಣಿಪುರ, ನಾಗಾಲ್ಯಾಂಡ್‌ನ ವಿದ್ಯಾರ್ಥಿನಿಯರೇ ನ್ಯಾಯಾಧೀಶ ರಂಜನ್‌ ಗೊಗೋಯ್‌ ಹಾಗೂ ಅವರ ಪತ್ನಿ ರೂಪಾಂಜಲಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸುತ್ತಿದ್ದಂತೆ ನ್ಯಾಯಾಧೀಶರು ಪುಳುಕಿತಗೊಂಡರು. ವಿದ್ಯಾರ್ಥಿಗಳೊಂದಿಗೆ ಗುಂಪುಪಟ ತೆಗೆಸಿಕೊಂಡರು. ವಿದ್ಯಾರ್ಥಿನಿಯರು ಶರಣರ ವಚನಗಳನ್ನು ಕನ್ನಡದಲ್ಲಿ ಹಾಡಿದ್ದು ನೆರೆದಿದ್ದವರನ್ನು ಚಿಕಿತಗೊಳಿಸಿತು. ನ್ಯಾಯಾಧೀಶರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ.

ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!

ಈ ಸಂದರ್ಭದಲ್ಲಿ ಜೆಎಸ್‌ಎಸ್‌ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಬೆಟಕೆರೂರ್‌, ತಹಸೀಲ್ದಾರ್‌ ಮಹೇಶ್‌, ಉದ್ಯಮಿ ವಿಜಯಕುಮಾರ್‌, ಮುಖಂಡರಾದ ದುಗ್ಗಟ್ಟಿಮಲ್ಲಿಕಾರ್ಜುನಸ್ವಾಮಿ, ಮಲ್ಲೇಶಪ್ಪ, ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಸಂಪರ್ಕಾಧಿಕಾರಿ ಆರ್‌.ಎಂ.ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌ ಇತರರು ಇದ್ದರು.