1100 ಅಧಿಕಾರಿಗಳ ಜತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಆನ್‌ಲೈನ್‌ ಮೂಲಕ ಸಮಾಲೋಚನೆ| ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದಲೇ ಮೊಬೈಲ್‌ ಮೂಲಕವೇ ಆಯುಕ್ತರ ಜತೆ ಸಂವಾದ ನಡೆಸಿದ ಅಧಿಕಾರಿಗಳು|

ಬೆಂಗಳೂರು(ಮೇ.08): ಕೊರೋನಾ ನಿಯಂತ್ರಣಕ್ಕೆ ಸಂಬಂಧ ಸಬ್‌ ಇನ್‌ಸ್ಪೆಕ್ಟರ್‌ ಮೇಲ್ಮಟ್ಟದ ಸುಮಾರು 1100 ಅಧಿಕಾರಿಗಳ ಜತೆ ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರು ಮೊದಲ ಆನ್‌ಲೈನ್‌ ಮೂಲಕ ಸಮಾಲೋಚನೆ ನಡೆಸಿದ್ದಾರೆ.

ಸಿಸ್ಕೋಂ ವೆಬೆಕ್ಸ್‌ ಮೀಟಿಂಗ್‌ ಫ್ಲಾಟ್‌ ಫಾರಂ ಬಳಸಿಕೊಂಡ ಆಯುಕ್ತರು ಗುರುವಾರ ಕೊರೋನಾ ಸೋಂಕು ವಿರುದ್ಧ ಹೋರಾಟದಲ್ಲಿ ತೊಡಗಿರುವ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದಲೇ ಅಧಿಕಾರಿಗಳು, ಮೊಬೈಲ್‌ ಮೂಲಕವೇ ಆಯುಕ್ತರ ಜತೆ ಸಂವಾದ ನಡೆಸಿದ್ದಾರೆ.

ಹೌಸ್‌ ಕೀಪಿಂಗ್‌ ಹುಡುಗನೊಂದಿಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೋನಾ ಸೋಂಕು

ಕೊರೋನಾ ಸೋಂಕು ವಿರುದ್ಧ ಸಮರ ಹಾಗೂ ಲಾಕ್‌ಡೌನ್‌ ಸಡಿಲಿಕೆ ಬಳಿಕ ಪರಿಸ್ಥಿತಿ ಬಗ್ಗೆ ಕೆಳ ಹಂತದ ಅಧಿಕಾರಿಗಳಿಂದಲೇ ಆಯುಕ್ತರು ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸರು ಎದುರಿಸಿದ ಸಂಕಷ್ಟಗಳನ್ನು ಆಲಿಸಿದ ಆಯುಕ್ತರು, ಅಧಿಕಾರಿಗಳಿಗೆ ಧೈರ್ಯ ತುಂಬಿದ್ದಾರೆ.