ನೀರಿಲ್ಲದೆ ಮಹಾನಗರಗಳು ಖಾಲಿಯಾಗುವ ಸಾಧ್ಯತೆ: ಶಿವಕುಮಾರ್

ಮಳೆ ನೀರು ಸಂಗ್ರಹ ಮತ್ತು ಮಿತಬಳಕೆ ಜನತೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿಲ್ಲದೆ ಮಹಾನಗರಗಳು ಖಾಲಿಯಾಗುವ ಸಾಧ್ಯತೆಗಳಿವೆ ಎಂದು ಮಳೆ ನೀರಿನ ತಜ್ಞ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

Cities likely to run out without water: Shivakumar snr

ತುಮಕೂರು: ಮಳೆ ನೀರು ಸಂಗ್ರಹ ಮತ್ತು ಮಿತಬಳಕೆ ಜನತೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿಲ್ಲದೆ ಮಹಾನಗರಗಳು ಖಾಲಿಯಾಗುವ ಸಾಧ್ಯತೆಗಳಿವೆ ಎಂದು ಮಳೆ ನೀರಿನ ತಜ್ಞ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಪ್ಲಂಬರ್ಸ್ ಅಸೋಸಿಯೇಷನ್(ರಿ) ವತಿಯಿಂದ ಆಯೋಜಿಸಿದ್ದ ಮಳೆ ನೀರು ಸಂಗ್ರಹ ಮತ್ತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವುದು ಹೇಗೆಂದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಭೂಮಿಯ ಮೇಲೆ ನೀರಿನ ಸಮಸ್ಯೆ ಎದುರಾಗಿಲ್ಲ.

10 ವರ್ಷಗಳ ಹಿಂದೆ ಎಷ್ಟು ನೀರಿತ್ತೋ,ಅಷ್ಟೇ ನೀರು ಈಗಲೂ ಇದೆ. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ನೀರು ಇರುವ ಕಡೆ ಮನುಷ್ಯರಿಲ್ಲ, ಮನುಷ್ಯರು ಇರುವ ಕಡೆ ನೀರಿಲ್ಲದಂತಹ ಪರಿಸ್ಥಿತಿ ಇದೆ.ಇದಕ್ಕೆ ನಗರೀಕರಣದ ಪರಿಣಾಮ ಒಂದೆಡೆಯಾದರೆ, ಹವಾಮಾನ ವೈಫರಿತ್ಯವೂ ಇನ್ನೊಂದೆಡೆ ಕಾರಣವಾಗಿದೆ. ಹಾಗಾಗಿ ಭೂಮಿಯ ಮೇಲೆ ಬೀಳುವ ಪ್ರತಿ ಮನೆಹನಿಯನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಇಲ್ಲವೇ ಅದನ್ನು ಸಂಗ್ರಹಿಸಿ ಬಳಕೆ ಮಾಡುವಂತೆ ಮಾಡಿದಾಗ ಮಾತ್ರ ನಾವು ಎದುರಿಸುತ್ತಿರುವ ನೀರಿನ ಕೊರತೆಯಿಂದ ಹೊರಬರಲು ಇರುವ ಏಕೈಕ ಮಾರ್ಗ.

ಹಾಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಳೆನೀರು ಕೋಯ್ಲು ಯೋಜನೆಯನ್ನು ಬಳಸಿಕೊಂಡು ಇಂದು ದೇಶ ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮಳೆನೀರು ತಜ್ಞ ಶಿವಕುಮಾರ್ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಹಿನಿ ಇರಿಗೇಷನ್ ನಿರ್ದೇಶಕ ಆನಂದ್.ಆರ್. ವಹಿಸಿದ್ದರು.

ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗಿರೀಶ್, ವಕೀಲ ಶಿವಣ್ಣ,ತುಮಕೂರು ಜಿಲ್ಲಾ ಪ್ಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ.ಬಿ.ಜಯಣ್ಣ, ಗೌರವಾಧ್ಯಕ್ಷ ಹುಚ್ಚೇಗೌಡ, ಉಪಾಧ್ಯಕ್ಷ ಕುಮಾರನಾಯ್ಕ್, ಜೆಸಿಬಿ ವೆಂಕಟೇಶ್, ಜಿಲ್ಲಾ ಉಸ್ತುವಾರಿ ಜೆ.ಮಂಜುನಾಥ್, ಹಂದ್ರಾಳ್ ನಾಗಭೂಷಣ್, ಗೋಪಾಲಕೃಷ್ಣ, ಹಾರ್ಡ್ವೇರ್ಸ್ ಅಂಗಡಿಗಳ ಮಾಲೀಕರಾದ ರಂಗನಾಥ್, ಚಂದ್ರು,ಸುನಿಲ್, ತೇಜಸ್, ವಿನಯ್,ವಿಶ್ವನಾಥ್, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಖಜಾಂಚಿ ಆಶ್ವಥನಾರಾಯಣ್ ಅವರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios