ಬೆಂಗಳೂರು[ಡಿ.24]  ಕಿದ್ವಾಯಿ ಆಸ್ಪತ್ರೆಯಲ್ಲಿ ವೈದ್ಯರಿಗೆ ರಜೆ ನೀಡಲಾಗಿದ್ದು ರೋಗಿಗಳಿಗೆ ಸಜೆ ಎದುರಾಗಿದೆ. ಸಂಜೆ ಆಗುತ್ತಿದ್ದಂತೆ ಕಿದ್ವಾಯಿ ಆಸ್ಪತ್ರೆ ಬಿಕೋ ಎನ್ನುತ್ತಿದೆ.

ಕ್ರಿಸ್ಮಸ್ ಹಬ್ಬಕ್ಕೆ ಬಹುತೇಕ ಸಿಬ್ಬಂದಿ ರಜೆ ಹಾಕಿದ್ದಾರೆ. ವೈದ್ಯರು ಇಲ್ಲದೆ ಜನ ಡಿಸೆಂಬರ್ 25 ರಂದು ಪರದಾಡಲೇಬೇಕಾಗಿದೆ. ಕಿದ್ವಾಯಿ ಯಲ್ಲಿ ಸದ್ಯ  ಒಟ್ಟು 1300 ಸಿಬ್ಬಂದಿ ಇರಬೇಕು. ಆದರೆ ಸದ್ಯ  760  ಸಿಬ್ಬಂದಿ ಸೇವೆಯಲ್ಲಿದ್ದಾರೆ. 540 ಸಿಬ್ಬಂದಿ ಕೊರತೆ ಇದ್ದು ಕ್ರಿಸ್‌ಮಸ್‌ಗೆ ಮತ್ತಷ್ಟು ಜನ ರಜೆ ಹಾಕಿದ್ದಾರೆ.

ಇನ್ನೊಂದು ಕಡೆ  ಸರ್ವರ್ ಪ್ರಾಬ್ಲಂ ಸಹ ಇದೆ. ಸೋಮವಾರ ಸಹ ಬೆಳಗ್ಗೆ 8 ಗಂಟೆಯಿಂದಲೇ ರೋಗಿಗಳು ಸಾಲುಗಟ್ಟಿ ನಿಂತಿದ್ದರು. ನಾಳೆ ಮತ್ತು ನಾಡಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.