Chitradurga: ಭಾರತ್ ಜೋಡೋ ಯಾತ್ರೆಗೆ ಸಾಹಿತಿಗಳು, ರೈತ ಮುಖಂಡರು ಸಾಥ್
ಭಾರತ್ ಜೋಡೋ ಕಾರ್ಯಕ್ರಮ ಚಿತ್ರದುರ್ಗ ಹತ್ತಿರ ಇರುವ ಬೆನ್ನಲ್ಲೇ ಇಂದು ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಸಾಹಿತಿಗಳು, ಕಾರ್ಮಿಕರು, ರೈತರು ಸೇರಿ ಪತ್ರಿಕಾಗೋಷ್ಠಿ ನಡೆಸಿ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡುವುದಾಗಿ ತಿಳಿಸಿದರು.
ಚಿತ್ರದುರ್ಗ (ಅ.9): ಸದ್ಯ ದೇಶಾದ್ಯಂತ ಕಾಂಗ್ರೆಸ್ ನಾಯಕರು ಟ್ರೆಂಡ್ ಕ್ರಿಯೇಟ್ ಮಾಡ್ತಿರೋ ಕೆಲಸ ಏನಪ್ಪ ಅಂದ್ರೆ ಅದು ಭಾರತ್ ಜೋಡೋ ಕಾರ್ಯಕ್ರಮ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸದ್ಯ ಕೋಟೆನಾಡು ಚಿತ್ರದುರ್ಗ ಹತ್ತಿರ ಇರುವ ಬೆನ್ನಲ್ಲೇ ಇಂದು ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಸಾಹಿತಿಗಳು, ಕಾರ್ಮಿಕರು, ರೈತರು ಸೇರಿ ಪತ್ರಿಕಾಗೋಷ್ಠಿ ನಡೆಸಿ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡುವುದಾಗಿ ತಿಳಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಭಾವೈಕ್ಯತೆಗೆ ಧಕ್ಕೆ ಇದೆ. ಈ ಆಪತ್ತಿನ ವೇಳೆ ಕಣ್ಣು, ಕಿವಿ, ಬಾಯಿ ಮುಚ್ಚಿರಬಾರದು. ನಾವು ಮುಂದಿನ ಪೀಳಿಗೆ ಎದುರು ತಪ್ಪಿತಸ್ಥರಾಗುತ್ತೇವೆ. ಬಾಯಿ ಮುಚ್ಚಿಕೊಂಡು ಇದ್ದರೆ ದೇಶದ್ರೋಹಿಗಳು ಆಗುತ್ತೇವೆ ಎಂದು ಸಾಹಿತಿಗಳಾದ ಎಸ್. ಜಿ ಸಿದ್ದರಾಮಯ್ಯ ತಿಳಿಸಿದರು. ಹಿಂದೆ ನಡೆದ ರಥ ಯಾತ್ರೆಗಳಿಗೆ ಕೋಮು ಸಂಘರ್ಷದ ಮಿತಿಯಿದೆ. ಭಾರತ್ ಜೋಡೋ ಯಾತ್ರೆಗೆ ಬಹುತ್ವ ಭಾರತದ ವ್ಯಾಪ್ತಿಯಿದೆ. ನಿರುದ್ಯೋಗ ನಿವಾರಣೆ ಮಾಡುತ್ತೇವೆಂದು ಸುಳ್ಳು ಹೇಳಿದ್ದರು. ಯುವ ಸಮೂಹಕ್ಕೆ ಉದ್ಯೋಗ ಸೃಷ್ಠಿ ಆಗಲಿಲ್ಲ. ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಿಂದ ಬಡವರು ಬದುಕಲು ಸಾಧ್ಯವೇ ಕೋಮುವಾದಿ ಪಕ್ಷ ಕಿತ್ತೊಗೆಯದ ಹೊರತು ದೇಶಕ್ಕೆ ಭವಿಷ್ಯವಿಲ್ಲ. ಮನುವಾದ ತಂದು ಸಮಾಜ ಹೊಡೆಯುವ ಕುಕೃತ್ಯ ನಡೆದಿದೆ ಎಂದು ಕಿಡಿಕಾರಿದರು.
ದೇಶ ಹೊಡೆಯುವ ಪಕ್ಷ ವಿರೋಧಿಸುವುದು ನಿಜ ದೇಶ ಪ್ರೇಮ. ನೂರಾರು ಕೋಟಿ ಮೋಸ ಮಾಡಿ ಕೆಲವರು ವಿದೇಶಕ್ಕೆ ಓಡಿದ್ದಾರೆ. ಅಂಥವರನ್ನು ಈಗಿನ ಸರ್ಕಾರಗಳು ಬೆಂಬಲಿಸುತ್ತಿವೆ. ರಾಹುಲ್ ಗಾಂಧಿ ಯುವಕರ ಮನ ಅರ್ಥ ಮಾಡಿಕೊಂಡಿದ್ದಾರೆ. ಬೆಳೆಯುತ್ತಿರುವ ರಾಜಕಾರಣಿ ಎಂಬುದು ಗೊತ್ತಾಗುತ್ತಿದೆ. ಈ ವರೆಗೆ ರಾಹುಲ್ ಗಾಂಧಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಯಾತ್ರೆ ವೇಳೆ ರಾಹುಲ್ ನಡೆದುಕೊಳ್ಳುವ ರೀತಿ ಕಂಡಿದ್ದೇವೆ. ರಾಹುಲ್ ಹಿ ಈಸ್ ಡೌನ್ ಟೂ ಅರ್ಥ್ ಎಂಬಂದು ಮನವರಿಕೆ ಆಗಿದೆ ಎಂದು ಎಸ್.ಜಿ ಸಿದ್ದರಾಮಯ್ಯ ತಿಳಿಸಿದರು.
ಭಾರತ್ ಜೋಡೋ ಯಾತ್ರೆ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿ
ಇನ್ನೂ ಈ ವೇಳೆ ಮಾತನಾಡಿದ ನಿವೃತ್ತ ವಿಜ್ಞಾನಿ ಕಮ್ಮರಡಿ ದೇಶದಲ್ಲಿ ಜನತಂತ್ರ ವ್ಯವಸ್ಥೆ ಸರಿ ದಾರಿಯಲ್ಲಿ ಸಾಗುತ್ತಿಲ್ಲ. "ಒಂದು ಮನೆಗೆ ಬೆಂಕಿ ಬಿದ್ದಿದೆ, ಅದನ್ನು ನಂದಿಸಬೇಕು" ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೋ ಮೂಲಕ ಬೆಂಕಿ ನಂದಿಸುವ ಕೆಲಸ. ಭಾರತ ಜೋಡೋ ಯಾತ್ರೆಗೆ ಭಾವೈಕ್ಯ ಕರ್ನಾಟಕ ವೇದಿಕೆ ಸಾಥ್. ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುತ್ತಿಲ್ಲ. ಕಾಂಗ್ರೆಸ್ ತಪ್ಪು ಮಾಡಿದರೆ ಕಾಂಗ್ರೆಸ್ಸನ್ನು ಟೀಕಿಸುತ್ತೇವೆ. ಹೊಡೆದಾಳುವ ಪ್ರವೃತ್ತಿ, ಕೋಮು ಸಂಘರ್ಷ ನಡೆಯುತ್ತಿದೆ. ದೇಶ ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಅಗತ್ಯವಿದೆ. ರಾಜ್ಯದ ನೂರಾರು ಸಾಹಿತಿಗಳು ಯಾತ್ರೆಗೆ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರು.
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ Rahul Gandhi ಭೇಟಿಯ ಫೋಟೋಗಳನ್ನು ನೋಡಿ..
ಈ ವೇಳೆ ಪಿಡಿಒ ಸಂತೋಷ ಕಬ್ಬಗೋಳ, ಮುಖಂಡರಾದ ಸತ್ಯಪ್ಪಾ ನಾಯಿಕ, ಅನ್ನಪ್ಪಾ ಬ್ಯಾಳಿ, ಸತ್ಯಪ್ಪಾ ಹಾಲಟ್ಟಿ, ಡಿ.ಕೆ.ಅವರಗೋಳ, ಆನಂದ ದಪ್ಪಾದೂಳಿ, ಶಿವನಗೌಡ ಪಾಟೀಲ, ಹೊನ್ನಪ್ಪ ನಾಯಿಕ, ಪುಂಡಲೀಕ ಪಾಟೀಲ, ಶಿವನಾಯಿಕ ನಾಯಿಕ, ಮಲಗೌಡ ಪಾಟೀಲ, ಮಂಜುನಾಥ ಪಡದಾರ, ಶಿವಾನಂದ ಢಂಗ, ಸಯ್ಯದ ಅಮ್ಮಣಗಿ, ದುಂಡಪ್ಪಾ ಕೇಸ್ತಿ ಮತ್ತೀತರರು ಉಪಸ್ಥಿತರಿದ್ದರು.