Asianet Suvarna News Asianet Suvarna News

Chitradurga: ಮಲ್ಲಾಪುರ ಕೆರೆಗೆ ಚಿತ್ರದುರ್ಗದ ಯುಜಿಡಿ ನೀರು ಸೇರ್ಪಡೆ: ಸುತ್ತಲಿನ ಗ್ರಾಮಗಳಲ್ಲಿ ರೋಗ ಉಲ್ಬಣ

ಕೆರೆಯೊಂದು ಭರ್ತಿಯಾದರೆ ಹತ್ತಾರು ಹಳ್ಳಿಗಳ ಜನರು ಸಮೃದ್ಧಿಯಾಗಿ ಇರುತ್ತಾರೆಂಬ ಮಾತಿದೆ. ಎಂತಹ ಬರಗಾಲ ಬಂದರೂ ಖಾಲಿಯಾಗದ ವರ್ಷವಿಡೀ ಭರ್ತಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಕೆರೆಯೊಂದರ ನೀರು ಸುತ್ತಲಿನ ಗ್ರಾಮಗಳ ಜನ ಪಾಲಿಗೆ ವಿಷವಾಗಿ ಮಾರ್ಪಟ್ಟಿದೆ. 

Chitradurga UGD water Addition to Mallapur lake Disease in surrounding villages sat
Author
First Published Jan 3, 2023, 3:47 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಜ.03): ಕೆರೆಯೊಂದು ಭರ್ತಿಯಾದರೆ ಹತ್ತಾರು ಹಳ್ಳಿಗಳ ಜನರು ಸಮೃದ್ಧಿಯಾಗಿ ಇರುತ್ತಾರೆಂಬ ಮಾತಿದೆ. ಎಂತಹ ಬರಗಾಲ ಬಂದರೂ ಖಾಲಿಯಾಗದ ವರ್ಷವಿಡೀ ಭರ್ತಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಕೆರೆಯೊಂದರ ನೀರು ಸುತ್ತಲಿನ ಗ್ರಾಮಗಳ ಜನ ಪಾಲಿಗೆ ವಿಷವಾಗಿ ಮಾರ್ಪಟ್ಟಿದೆ. 

ನೀರು ತುಂಬಿ ಭರ್ತಿಯಾಗಿ ನಳನಳಿಸುತ್ತಿರುವ ಕೆರೆಯ ತುಂಬಾ ಪ್ಲಾಸ್ಟಿಕ್‌ ಘನ ತ್ಯಾಜ್ಯ (solid waste) ತುಂಬಿಕೊಂಡಿದೆ. ಕಸ ಕಡ್ಡಿಯಿಂದ ದುರ್ವಾಸನೆ ಬೀರುತ್ತಿರುವ ಕೆರೆ ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಕೆರೆ (Mallapura Lake)ಯಾಗಿದೆ. ಈ ಕೆರೆ ಸುಮಾರು 95 ಹೆಕ್ಟೇರ್ ವಿಸ್ತೀರ್ಣ ವನ್ನೊಳಗೊಂಡಿದೆ. ಆದರೆ, ಚಿತ್ರದುರ್ಗ‌ ನಗರದ ಯುಜಿಡಿ ಹಾಗೂ ಚರಂಡಿ ನೀರೆಲ್ಲಾ ಹರಿದು ಬಂದು ಕೆರೆಯ ಒಡಲನ್ನು ಸೇರುತ್ತಿದೆ. ಹೀಗಾಗಿ, ಸತತ 15 ವರ್ಷಗಳಿಂದ‌ ಒಮ್ಮೆಯೂ ಕೆರೆಯ ನೀರು ಖಾಲಿಯಾಗಿಲ್ಲ. 

ಚಿತ್ರದುರ್ಗ ನಗರಕ್ಕೆ ಚಿರತೆ ಭೀತಿ: ಚಂದ್ರವಳ್ಳಿ ರಸ್ತೆಯ ಬಂಡೆ ಮೇಲೆ ಮೂರು ಚಿರತೆ ಪ್ರತ್ಯಕ್ಷ

ಸಣ್ಣ ಮಳೆ ಬಂದರೂ ಕೋಡಿ ಬೀಳುವ ಕೆರೆ: ಅಲ್ಲದೇ ವರ್ಷದ 365 ದಿನಗಳಲ್ಲೂ ಭರ್ತಿಯಾಗಿರುವ  ಈ ಕೆರೆ ಸಣ್ಣ ಮಳೆ (Small rain) ಬಂದರೂ ಕೋಡಿ ಬೀಳುತ್ತದೆ. ಆದರೆ, ಮಲ್ಲಾಪುರ ಕೆರೆಯ ನೀರು ಮಾತ್ರ ಯಾವುದಕ್ಕೂ ಪ್ರಯೋಜನವಿಲ್ಲ (No use). ನಿರಂತರವಾಗಿ ಕಸಕಡ್ಡಿ, ಪ್ಲಾಸ್ಟಿಕ್ ರಾಶಿ ಜಲ ಮೂಲವನ್ನು ಸೇರುತ್ತಿದ್ದು, ಅಂತರ್ಜಲ ಸಹ ಮಲಿನಗೊಂಡಿದೆ. ಹೀಗಾಗಿ ಕೆರೆಯ ಆವರಣದಲ್ಲಿರುವ ಶಾಲೆಯ ವಿದ್ಯಾರ್ಥಿಗಳು (school students) ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗಗಳ ಭೀತಿ ಆಗಿಂದಾಗ್ಗೆ ಕಾಡುತ್ತಿದೆ. ಈ ಬಗ್ಗೆ ನಗರಸಭೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ‌ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಮತ್ತು ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಕೆರೆಯ ಸಂರಕ್ಷಣೆ ಮಾಡುವಂತೆ ವಿಜ್ಞಾನಿಯ ಮನವಿ: ಮಲ್ಲಾಪುರ ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ಸಂಸ್ಕರಿಸದೆ (Proseccing) ಕೆರೆಗೆ ಹರಿಸುವ ಹಿನ್ನಲೆಯಲ್ಲಿ ಕೆರೆ ನೀರು ಸಂಪೂರ್ಣ ಮಾಲಿನ್ಯವಾಗಿದೆ. ಅಲ್ಲದೇ ಈ ಕೆರೆಯಿಂದ ಹೊರ ಹರಿಯುವ ನೀರು ಹತ್ತಾರು ಕೆರೆಗಳನ್ನು ಮಲಿನಗೊಳಿಸಲಿದ್ದೂ, ಹಸಿರಾದ ವಿಷಯುಕ್ತ ನೀರಿನಿಂದ ಈ ಭಾಗದ ಜೀವಸಂಕುಲಕ್ಕೆ ಕಂಟಕ ಎನಿಸಿದೆ‌. ಹೀಗಾಗಿ ಮಲ್ಲಾಪುರ ಕೆರೆಯ ನೀರನ್ನು ಶುದ್ಧೀಕರಿಸಿ ಬೃಹತ್ ಕೆರೆಯನ್ನು ಸಂರಕ್ಷಿಸುವಂತೆ ಜೀವ ವಿಜ್ಞಾನಿ ಪರಶುರಾಮ್ ರೆಡ್ಡಿ (Parashuram reddy) ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Chitradurga News: ಭದ್ರಾ ಕಾಲುವೆ ಅಡ್ಡಗಾಲಿಗೆ ನಾರಾಯಣಸ್ವಾಮಿ ಆಕ್ರೋಶ

ಒಟ್ಟಾರೆ ಕೋಟೆನಾಡಿನ ಮಲ್ಲಾಪುರ ಕೆರೆನೀರು ಜನರ ಪಾಲಿಗೆ ವಿಷವಾಗಿ ಪರಿಣಮಿಸಿದೆ. ನೀರು ಭರ್ತಿಯಾಗಿದ್ರು ಪ್ರಯೋಜನಕ್ಕೆ ಬಾರದಂತಾಗಿದೆ. ನೀರು ಮಲಿನಗೊಂಡು ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ..ಹೀಗಾಗಿ ಬರದನಾಡಿನ ಜಲಮೂಲವನ್ನು ಸ್ವಚ್ಛಗೊಳಿಸಿ,ಸೂಕ್ತ ಕಾಯಕಲ್ಪ ನೀಡುವ ಮೂಲಕ ಅಂತರ್ಜಲ ಮಲಿನಕ್ಕೆ ಸರ್ಕಾರ ಬ್ರೇಕ್ ಹಾಕಬೇಕಿದೆ. 

Follow Us:
Download App:
  • android
  • ios