ಬಯಲುಸೀಮೆ ಬುಡಕಟ್ಟು ಸಮುದಾಯದಿಂದ ಜೋಡೆತ್ತುಗಳ ಎತ್ತಿಗಾಡಿ ಓಟ ಸ್ಪರ್ಧೆ, ರೈತರ ಸಂಭ್ರಮ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪೆತ್ತಮ್ಮನಹಟ್ಟಿ ಗ್ರಾಮದಲ್ಲಿ, ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆ ಆರಂಭಕ್ಕೂ ಮುನ್ನ  ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ. 

Chitradurga tribal community bullock cart race competition kannada news gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂ.27): ಮುಂಗಾರು ಮಳೆ ಭೂಮಿಗೆ ಬಿತ್ತಂದ್ರೆ, ಬಿತ್ತನೆ ಕಾರ್ಯದಲ್ಲಿ  ರೈತರು ಫುಲ್ ಬಿಸಿಯಾಗ್ತಾರೆ‌. ಹೀಗಾಗಿ ರೈತರ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿಯೇ ಕೋಟೆನಾಡಿನ ಬುಡಕಟ್ಟು ಸಮುದಾಯವೊಂದು ಪ್ರತಿವರ್ಷ  ಜೋಡೆತ್ತಿನ ಗಾಡಿ ಸ್ಪರ್ಧೆ ಯನ್ನು ಆಯೋಜಿಸ್ತಿದೆ. ಆ ಸ್ಪರ್ಧೆಯಲ್ಲಿ ರೈತರು, ನಾವು ಯಾರಿಗು ಕಮ್ಮಿ ಇಲ್ಲ ಅಂತ ಅವರ ಪವರ್ ಪ್ರದರ್ಶನ ತೋರ್ತಿದ್ದಾರೆ.  

ಹೀಗೆ ನಾ ಮುಂದು,ತಾ ಮುಂದು ಅಂತ ವೇಗವಾಗಿ ಓಡ್ತಿರೊ ಜೋಡೆತ್ತಿನ ಗಾಡಿಗಳು. ಆ ಎತ್ತುಗಳ ಪೈಪೋಟಿ ಕಂಡು ರಣಕೇಕೆ ಹಾಕ್ತಿರೋ ರೈತರು. ಈ ದೃಶ್ಯಗಳು ಕಂಡುಬಂದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮನಹಟ್ಟಿ ಗ್ರಾಮದಲ್ಲಿ,  ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆ ಆರಂಭಕ್ಕೂ ಮುನ್ನ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ. ಆದ್ರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿರೊ ಪರಿಣಾಮ ಭೂಮಿಯನ್ನು ಹದಗೊಳಿಸಿಕೊಂಡು ಮಳೆಗಾಗಿ ಕಾಯ್ತಿರೊ ರೈತರ ಚಿತ್ತ ಮುಗಿಲತ್ತ ಇದೆ.

ನಿರಪರಾಧಿಗಳ ಮೇಲೆ ಕೇಸು ಜಡಿದ ಮಂಗಳೂರಿನ 3 ಪೊಲೀಸ್ ಅಧಿಕಾರಿಗಳಿಗೆ ಭಾರೀ ದಂಡ!

ಹೀಗಾಗಿ ರೈತರಲ್ಲಿನ ಉತ್ಸಾಹ ಕುಗ್ಗದಿರಲಿ ಹಾಗು ಅವರ  ಕೃಷಿ ಚಟುವಟಿಕೆಗಳು ನಿಲ್ಲದಿರಲಿ ಅನ್ನೋ ಸದುದ್ದೇಶದಿಂದ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೈತರು,ನಿತ್ಯ  ಹವ್ಯಾಸಿ ಸ್ಪರ್ಧಾಳುಗಳಂತೆ ಅವರ ಜೋಡೆತ್ತಿನ ಗಾಡಿಯನ್ನು ವೇಗವಾಗಿ ಓಡಿಸಿದ್ರು‌. ಅವರ ಎತ್ತುಗಳ ಶಕ್ತಿ ಪ್ರದರ್ಶಿಸಿದ್ರು. ಈ ವೇಳೆ ಸ್ಪರ್ಧೆ ಯಲ್ಲಿ ಜಯಗಳಿಸಿದ ರೈತರಿಗೆ ಆಕರ್ಷಕ ಪಾರಿತೋಷಕಹಾಗು ನಗದು ಬಹಮಾನ ಕೊಟ್ಟು ಆಯೋಜಕರು ಸನ್ಮಾನಿಸಿದ್ರು.

ಇನ್ನು ಮಳೆ ಇಲ್ಲ ಅನ್ನೊ ನೆಪದಲ್ಲಿ ಸಮಯ ಕಳೆಯಲು ವಿವಿಧ ದುಶ್ಚಟಗಳಿಗೆ ಬಲಿಯಾಗುವ ರೈತರು ಹಾಗು ಗ್ರಾಮಸ್ಥರಿಗೆ   ಈ ಜೋಡೆತ್ತಿನಗಾಡಿ ಸ್ಪರ್ಧೆ ಭರ್ಜರಿ ಮನರಂಜನೆ ನೀಡಿತು.  ಈ ಸ್ಪರ್ಧೆಗಾಗಿ ಸುತ್ತಮುತ್ತ ಹತ್ತಾರು ಹಳ್ಳಿಗಳ ರೈತರು ಸೇರಿದಂತೆ ಹೊರ ಜಿಲ್ಲೆಯ ರೈತರು ಸಹ ಭಾಗವಹಿಸಿದ್ದರು. ಈ ರೋಮಾಂಚಕಾರಿ  ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಕಣ್ತುಂಬಿಕೊಂಡರು. ಮನಸಾರೆ ಸಂತಸಗೊಂಡು ಕುತೂಹಲಕಾರಿ ಸ್ಪರ್ಧೆ ವೀಕ್ಷಿಸಿ ಪುಳಕಿತರಾದರು.

ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದ ಅಪ್ಪ ಮಗಳ ವೀಡಿಯೋ

ಒಟ್ಟಾರೆ ಕೋಟೆನಾಡಲ್ಲಿ ನಡೆದ ಜೋಡೆತ್ತಿನಗಾಡಿ ಸ್ಪರ್ಧೆ ಮಳೆಯಾಗಿಲ್ಲ ಅಂತ‌ ಬೇಸರಗೊಂಡಿರೊ ರೈತರಿಗೆ  ಮನೋರಂಜನೆ ನೀಡಿತು./ಕೇವಲ ಉಳುಮೆ ಹಾಗು ಬಿತ್ತನೆ ಅಂತ ಬಿಸಿಯಾಗಿದ್ದ ರೈತರ ಶಕ್ತಿಪ್ರದರ್ಶನ ಇಲ್ಲಿ ಅನಾವರಣವಾಗಿದ್ದು, ಕೃಷಿಯಲ್ಲಿ ಸಕ್ರಿಯರಾಗಿರಲು ಇದು  ಸ್ಪೂರ್ತಿಯಾಯಿತು. 

Latest Videos
Follow Us:
Download App:
  • android
  • ios