Asianet Suvarna News Asianet Suvarna News

ಚಿತ್ರದುರ್ಗ: ಅಪ್ರಾಪ್ತರ ಕೈಗೆ ವಾಹನ ಕೊಡೋ ಮುನ್ನ ಎಚ್ಚರ, ಮಾಲೀಕರಿಗೂ ಬೀಳಲಿದೆ ಭಾರೀ ದಂಡ..!

ವಾಹನ ಚಲಾಯಿಸಿದ ಅಪ್ರಾಪ್ತ ಯುವಕ ಹಾಗೂ ವಾಹನದ ಮಾಲೀಕನಿಗೂ ದುಬಾರಿ ದಂಡ ವಿಧಿಸಿದ ಚಿತ್ರದುರ್ಗ ಸಂಚಾರಿ ಪೊಲೀಸರು 
 

Chitradurga Traffic Police Fine Minor Boy For Drive Vehicle grg
Author
Bengaluru, First Published Aug 21, 2022, 10:47 AM IST

ಚಿತ್ರದುರ್ಗ(ಆ.21):  ಅಪ್ರಾಪ್ತ ಯುವಕ, ಯುವತಿಯರ ಕೈಗೆ ವಾಹನ ಕೊಡುವ ಮುನ್ನ ಎಚ್ಚರವಾಗೋದು ಒಳಿತು. ವಾಹನ ಮಾಲೀಕರೇ ನಿಮಗೂ ಸೇರಿಸಿ ಬೀಳಲಿದೆ ದುಬಾರಿ ದಂಡ ಬೀಳುವ ಸಾಧ್ಯತೆ ಇದೆ. ಹೌದು, ಇಂಥಹದ್ದೇ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ವಾಹನ ಚಲಾಯಿಸಿದ ಅಪ್ರಾಪ್ತ ಯುವಕ ಹಾಗೂ ವಾಹನದ ಮಾಲೀಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.  

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 5 ಸಾವಿರ ರೂ., ಅಪ್ರಾಪ್ತ ಯುವಕ ವಾಹನ ಚಲಾಯಿಸಿದ್ದಕ್ಕೆ 2000 ರೂ, ಅಪ್ರಾಪ್ತನ ಕೈಗೆ ವಾಹನ ಕೊಟ್ಟಿದ್ದಕ್ಕೆ ಮಾಲೀಕನಿಗೆ 3000 ರೂ, ಡಿಎಲ್ ಇಲ್ಲದೆ ಅಪ್ರಾಪ್ತ ಯುವಕ ಬೈಕ್ ಚಾಲನೆಗೆ ದಂಡ ವಿಧಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. 

CHITRADURGA: ಅಧಿಕ ಮಳೆ ಬಿದ್ದರೂ ನಾಯಕನಹಟ್ಟಿಯಲ್ಲಿ ಕುಸಿದ ಶೇಂಗಾ ಬಿತ್ತನೆ!

ಅಪ್ರಾಪ್ತ ಯುವಕನಿಗೆ ಪೊಲೀಸರು ದುಬಾರಿ ದಂಡ ವಿಧಿಸಿದ್ದಾರೆ.  ಚಿತ್ರದುರ್ಗ ಮಾರುತಿ ನಗರ ಬಡಾವಣೆಯ ಅಪ್ರಾಪ್ತ ಯುವಕನೇ ಡಿಎಲ್‌ ಇಲ್ಲದೆ ವಾಹನ ಚಲಾಯಿಸಿದ್ದಾರೆ. ಇನ್ನು ವಾಹನ ಮಾಲೀಕ ನಾಯಕನಹಟ್ಟಿಯ ಲಿಂಗರಾಜುಗೆ 3000 ರೂ ದಂಡ ವಿಧಿಸಲಾಗಿದೆ.  ಚಿತ್ರದುರ್ಗ ಸಂಚಾರಿ ಠಾಣೆ ಪೊಲೀಸರಿಂದ ದುಬಾರಿ ದಂಡ ವಿಧಿಸಿರುವ ರಿಸಿಪ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 
 

Follow Us:
Download App:
  • android
  • ios