ಚಿತ್ರದುರ್ಗ (ಸೆ.07): ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಹಸೀಲ್ದಾರ್‌ ಮಲ್ಲಿಕಾರ್ಜುನ್‌ ಅವರು ಲಾರಿ ಚಾಲಕನಿಗೆ ಹಿಗ್ಗಮುಗ್ಗಾ ಚಚ್ಚಿದ ಘಟನೆ ಶನಿವಾರ ರಾತ್ರಿ ಚಿತ್ರದುರ್ಗದಲ್ಲಿ ನಡೆದಿದ್ದು, ಈ ವಿಡಿಯೋ ವೈರಲ್‌ ಆಗಿದೆ. 

ತಹಸೀಲ್ದಾರ್‌ ಹೊಡೆದ ಪರಿಗೆ ಲಾರಿ ಚಾಲಕ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ. ನಾಗರಿಕರು ಆತನ ಸ್ಥಿತಿ ಕಂಡು ಮರುಗುತ್ತಿದ್ದರು. ತಹಸೀಲ್ದಾರ್‌ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ. ಅವರು ಕುಡಿದ ಬಗ್ಗೆ ವೈದ್ಯರಿಂದ ತಪಾಸಣೆ ಮಾಡಬೇಕು. ತಹಸೀಲ್ದಾರ್‌ ಎಂಬ ಮಾತ್ರಕ್ಕೆ ಸಿಕ್ಕಾಪಟ್ಟೆಹೊಡೆಯಬೇಕೆಂದೇನಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಡ್ರಗ್ಸ್ ಮಾಫಿಯಾ: ಒಂದೊಂದೇ ಬಯಲಾಗ್ತಿದೆ ಮಾದಕ ಜಾಲದ ಸೀಕ್ರೆಟ್ .

ಲಾರಿ ಚಾಲಕ ಶ್ರೀಕಾಂತ್‌ ಮಾತನಾಡಿ, ತಹಸೀಲ್ದಾರ್‌ ಅವರು ರಾಂಗ್‌ ಸೈಡ್‌ನಲ್ಲಿ ಬಂದು ನನ್ನ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಪ್ರಶ್ನಿಸಲು ಹೋದಾಗ ಸಿಕ್ಕಾಪಟ್ಟೆಹೊಡೆದರು. ಕಲ್ಲಿನಿಂದ ಜಜ್ಜಿದ್ದಾರೆ. ಪೊಲೀಸ್‌ ಠಾಣೆಗೆ ಕರೆದರೂ ಬರುತ್ತಿಲ್ಲ. ಅವರು ಕುಡಿದಿದ್ದರು ಎಂದು ಆರೋಪಿಸಿದ್ದಾರೆ.