ಕಮಿಷನ್ ಆಸೆಗಾಗಿ  ರಾಷ್ಟ್ರೀಕೃತ ಬ್ಯಾಂಕ್ ನಲ್ಲಿದ್ದ ದೇವರ ಹಣವನ್ನು ಖಾಸಗಿ ಬ್ಯಾಂಕ್ ಗೆ ವರ್ಗಾಯಿಸಿದ್ದಾರೆಂದು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ವಿರುದ್ಧ ವದ್ದಿಕೆರೆ ಸಿದ್ದೇಶ್ವರ ದೇಗುಲದ ಭಕ್ತರಿಂದ ಗಂಭೀರ ಆರೋಪ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.30): ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಸಾಕು, ಅಧಿಕಾರಿಗಳದ್ದೇ ದರ್ಬಾರು. ಹೀಗಾಗಿ ಇಲ್ಲೊಬ್ರು ತಹಶೀಲ್ದಾರ್ ಕಮೀಷನ್ ಆಸೆಗಾಗಿ ದೇವರ ಕಾಸಲ್ಲು ಕಮೀಷನ್ ಗಿಟ್ಟಿಸಲು ಸ್ಕೆಚ್ ಹಾಕಿದ್ದಾರಂತೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಹಿರಿಯೂರು ತಾಲ್ಲೂಕಿನ ‌ವದ್ದಿಕೆರೆ ಸಿದ್ದೇಶ್ವರ ಸ್ವಾಮಿ ದೇಗುಲ. ಇತಿಹಾಸದ ಹಿನ್ನೆಲೆಯುಳ್ಳ ಈ ದೇಗುಲ ಮುಜರಾಯಿ ಇಲಾಖೆ ಅಧೀ‌ನದಲ್ಲಿದ್ದು ಎ ದರ್ಜೆಯ ಸ್ಥಾನಮಾನ ಹೊಂದಿದೆ. ಈ ದೇವರ ಪವಾಡದಿಂದಾಗಿ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಧಾವಿಸ್ತಾರೆ. ಹೀಗಾಗಿ ಈ ದೇವರ ಹುಂಡಿ ಹಣವೇ ಪ್ರತಿ ವರ್ಷ ಕೋಟೆಗಟ್ಟಲೇ ಸಂಗ್ರಹವಾಗಲಿದ್ದು, ಆ ಹಣವನ್ನು ನಿಯಮದಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಳೆಯ ಅಧಿಕಾರಿಗಳು ಡೆಪಾಸಿಟ್ ಮಾಡಿದ್ದರು.

ಆದರೆ ಇತ್ತೀಚೆಗೆ ಹಿರಿಯೂರು ತಹಶೀಲ್ದಾರ್ ಆಗಿ ಬಂದಿರುವ ಪ್ರಶಾಂತ್‌ಪಾಟೀಲ್‌ ಕಮೀಷನ್ ಆಸೆಗಾಗಿ, ಎರಡು ಕೋಟಿಗೂ ಅಧಿಕ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಿಂದ ಬಿಡಿಸಿ, ಖಾಸಗಿ ಬ್ಯಾಂಕೊಂದರಲ್ಲಿ‌ ಡೆಪಾಸಿಟ್ ಮಾಡಿದ್ದಾರಂತೆ. ಈ ಬಗ್ಗೆ ದೇಗುಲ ಆಡಳಿತ ಸಮಿತಿ ಗಮನಕ್ಕೂ ತರದೇ ಏಕಪಕ್ಷೀಯವಾಗಿ ಹಣವನ್ನು ವರ್ಗಾಯಿಸಿದ್ದಾರೆಂದು ಸಮಿತಿ ನಿರ್ದೇಶಕ ‌ಚಂದ್ರಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗು ಉಪವಿಭಾಧಿಕಾರಿಗೂ ‌ದೂರು ಸಲ್ಲಿಸಿದ್ದಾರೆ.

ಇನ್ನು ಈ ದೇವಸ್ಥಾನದಲ್ಲಿ ಯಾವುದೇ ಕೆಲಸ ಮಾಡುವುದಕ್ಕು ಸಹ ಸಿದ್ದೇಶ್ವರ ಸ್ವಾಮಿಯ ಅಪ್ಪಣೆ‌ ಪಡೆಯೋದು ವಾಡಿಕೆ. ಆದರೆ ಹಿರಿಯೂರು ತಹಶೀಲ್ದಾರ್ ಸಾಹೇಬ್ರು, ಭಕ್ತರು, ಗ್ರಾಮಸ್ಥರು ಹಾಗು ಸಮಿತಿ ಸದಸ್ಯರ ಗಮನಕ್ಕೂ ‌ತಾರದೇ‌ ಕೋಟಿಗಟ್ಟಲೇ‌ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ನಿಂದ‌,ಖಾಸಗಿ ಬ್ಯಾಂಕಿಗೆ ಹಣ ವರ್ಗಾಯಿಸಿರೋದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

Mysuru Accident: ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು,

ಈ ತಹಶೀಲ್ದಾರ್ ನಡೆ ಮೇಲೆ ಬಾರಿ ಅನುಮಾನ ಮೂಡಿದೆ. ಹೀಗಾಗಿ‌ ಕೂಡಲೇ ಹಣವನ್ನು ವಾಪಾಸ್‌ ಜಮ ಮಾಡಬೇಕು. ಇಲ್ಲವಾದ್ರೆ ಅಧಿಕಾರಿ ವಿರುದ್ಧ‌ಹೋರಾಟಕ್ಕಿಳಿಯುವುದಾಗಿ ಭಕ್ತರು ಎಚ್ಚರಿಸಿದ್ದಾರೆ.

HARISH HALLI DEATH CASE: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಸಾವಲ್ಲ ವ್ಯವಸ್ಥಿತ ಕೊಲೆ, ಸಿಬಿಐ ತನಿಖೆಗೆ ಒತ್ತಾಯ

ಒಟ್ಟಾರೆ ಜನಪ್ರತಿನಿಧಿಗಳಷ್ಟೇ‌ ಕಾಮಗಾರಿಯಲ್ಲಿ ಕಮೀಷನ್ ಹೊಡೆಯೋದನ್ನ ಕೇಳಿದ್ವಿ. ಆದ್ರೆ ಅಧಿಕಾರಿಗಳು ಸಹ ದೇವರ ದುಡ್ಡಲ್ಲಿ ಕಮೀಷನ್‌ ಗಿಟ್ಟಿಸಲು ಮುಂದಾಗಿರೋದು‌ ಮಾತ್ರ ವಿಪರ್ಯಾಸ.