Asianet Suvarna News Asianet Suvarna News

ಈರುಳ್ಳಿ ಬೆಲೆ ಕುಸಿತ, ಗ್ರಾಹಕರಿಗೆ ಸಂತಸವಾದ್ರೆ ಕೋಟೆನಾಡಿನ ಅನ್ನದಾತ ಕಂಗಾಲು

ಚಿತ್ರದುರ್ಗ ಜಿಲ್ಲೆಯಾದ್ಯಂತ ಸುಮಾರು 40 ಸಾವಿರ ಹೆಕ್ಟೇರ್ ನಷ್ಟು ಈರುಳ್ಳಿಯನ್ನು ಬೆಳೆಯುತ್ತಾರೆ.‌ ಈ ಭಾಗದ ಅತೀ ಮುಖ್ಯ ಬೆಳೆಗಳಲ್ಲಿ ಈರುಳ್ಳಿಯೂ ಪ್ರಮುಖ ಬೆಳೆಯಾಗಿದೆ. ಆದರೆ ಈರುಳ್ಳಿ ಬೆಲೆ ಇಳಿಕೆ ರೈತರಲ್ಲಿ ಆತಂಕ ಮೂಡಿಸಿದೆ.

Chitradurga onion growers worries about  onion Price fall down gow
Author
First Published Mar 8, 2023, 4:07 PM IST | Last Updated Mar 8, 2023, 4:07 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.8): ಅದು ಆ ಭಾಗದ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ. ಸುಮಾರು 40 ಸಾವಿರ ಹೆಕ್ಟೇರ್ ನಷ್ಟು ರೈತರು ಆ ಬೆಳೆಯನ್ನೇ ನಂಬಿ ಬದುಕಿದ್ದಾರೆ. ಆದ್ರೆ ಕಳೆದೊಂದು ವಾರದಿಂದ ಆ ಬೆಳೆಯ ಬೆಲೆ ಕುಸಿತದಿಂದಾಗಿ ಮುಂಗಾರಿನಲ್ಲಿ ಬಿತ್ತನೆ ಮಾಡೋಬೇಕೋ ಬೇಡ್ವೋ ಎಂಬ ಗೊಂದಲದಲ್ಲಿ ಇದ್ದಾರೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಸುಮಾರು 40 ಸಾವಿರ ಹೆಕ್ಟೇರ್ ನಷ್ಟು ಈರುಳ್ಳಿಯನ್ನು ಬೆಳೆಯುತ್ತಾರೆ.‌ ಈ ಭಾಗದ ಅತೀ ಮುಖ್ಯ ಬೆಳೆಗಳಲ್ಲಿ ಈರುಳ್ಳಿಯೂ ಪ್ರಮುಖ ಬೆಳೆಯಾಗಿದೆ. ಅದ್ರಲ್ಲಂತೂ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕಿನ ಬಹುತೇಕ ರೈತರು ಈರುಳ್ಳಿ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಲಕ್ಷ ಲಕ್ಷ ರೂಪಾಯಿ ಸಾಲ ಮಾಡಿ, ಈರುಳ್ಳಿ ಬೆಳೆ ಬೆಳೆಯಲು ಎಲ್ಲಾ ರೈತರು ಮುಂದಾಗಿದ್ದಾರೆ. ಆದ್ರೆ ಕಳೆದೊಂದು ತಿಂಗಳಿಂದ ಈರುಳ್ಳಿ ಬೆಳೆ ಕುಸಿತ ಕಂಡಿರೋದಕ್ಕೆ ಎಲ್ಲಾ ರೈತರು ಈರುಳ್ಳಿಯನ್ನು ಯಾವ ರೇಟ್ ಗೆ ಮಾರಬೇಕು ಎಂದು ಆತಂಕದಲ್ಲಿ ಇದ್ದಾರೆ. ಇಂದು ಬೆಲೆ ಹೆಚ್ಚಾಗುತ್ತೆ ನಾಳೆ ಆಗುತ್ತೆ ಎಂದು ಎಷ್ಟೋ ರೈತರು ಸಾಲ ಮಾಡಿ ಬೆಳೆದ ಈರುಳ್ಳಿಯನ್ನು ಇಟ್ಕೊಂಡ್ ಇದ್ದಾರೆ. ಆದ್ರೆ ಮಾರುಕಟ್ಟೆಗಳಲ್ಲಿ ಬಾಯಿಗೆ ಬಂದಂತೆ 5 ರೂ ಗೆ ಕೇಳ್ತಿರೋದಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ರಾಗಿ ಖರೀದಿ ಕೇಂದ್ರದ ರೀತಿ, ರೈತರಿಂದ ಈರುಳ್ಳಿಗೆ ಬೆಂಬಲ ನೀಡಿ ಖರೀದಿ ಮಾಡೋದಕ್ಕೂ ಅವಕಾಶ ಕಲ್ಪಿಸಲಿ ಎಂಬುದು ಚಳ್ಳಕೆರೆ ಭಾಗದ ರೈತರ ಆಗ್ರಹವಾಗಿದೆ.

Viral News: 512 ಕೆಜಿ ಈರುಳ್ಳಿ ಮಾರಿದ್ದಕ್ಕೆ ರೈತನಿಗೆ ಸಿಕ್ಕಿದ್ದು 2 ರೂಪಾಯಿ!

ಇನ್ನೂ ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಆಗಿದ್ದಾರೆ. ಈರುಳ್ಳಿ ಕೀಳೋದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬರಬೇಕು ಅಂದ್ರೆ ಅವರಿಗೆ ನಿಗದಿತ ಕೈ ತುಂಬ ಹಣ ನೀಡಿದ್ರೆ ಮಾತ್ರ ಕೆಲಸಕ್ಕೆ ಬರ್ತಾರೆ. ಇತ್ತ ಈರುಳ್ಳಿ ಬೆಲೆ ನೋಡಿದ್ರೆ ಲಕ್ಷಾಂತರ ಖರ್ಚು ಮಾಡಿ ಬೆಳೆದಿರೋ ಬೆಳೆಯ ಅರ್ಧದಷ್ಟು ಕೈಗೆ ಸಿಗುತ್ತಿಲ್ಲ. ಎಷ್ಟೋ ರೈತರು ಬೇಸರದಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ ಏನೂ ಸಿಗಲ್ಲ ಎಂದು ಸಿಕ್ಕ ಸಿಕ್ಕವರೇ ಹಳ್ಳಿ ಭಾಗಗಳಲ್ಲಿ ಕೊಡಲು ಮುಂದಾಗಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿಯೇ ಕೃಷಿ ಸಚಿವರಾಗಿದ್ದು, ಕೂಡಲೇ ಕೋಟೆನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

ಒಂದು ಕೆಜಿ ಈರುಳ್ಳಿಗೆ 5 ರೂಪಾಯಿ ಬೆಲೆ ಸಿಕ್ತಿಲ್ಲ: ಕಂಗಾಲಾದ ಈರುಳ್ಳಿ ಬೆಳೆದ ರೈತರು

ಒಮ್ಮೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರುತ್ತದೆ, ಆದ್ರೆ ಕುಸಿದರೇ ಮಾತ್ರ ಪಾತಾಳಕ್ಕೆ ಇಳಿದು ಹೋಗುತ್ತದೆ. ಆದ್ರೆ ರೈತರು ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದೇ ತಿಳಿಯದಂತೆ ಮುಂಗಾರು ಶುರುವಾಗಿದ್ರು ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಇನ್ನಾದ್ರು ಸರ್ಕಾರ ಈರುಳ್ಳಿ ಗೆ ಬೆಂಬಲ ಬೆಲೆ ಘೋಷಿಸಬೇಕಿದೆ.

Latest Videos
Follow Us:
Download App:
  • android
  • ios